ಹೊನ್ನಾವರ : ಬೂಮಿಯ ಒಡಲನ್ನು ಕೊರೆಯುತ್ತಿರುವ ಮರಳು ಉದ್ದಮಕ್ಕೆ ಕಡಿವಾಣ ಹಾಕ ಬೇಕಿದೆ. ಇಲ್ಲದಿದ್ದರೆ ಕೊಡಗು, ಕೆರಳದಂತೆ ಮುಂದೊಂದು ದಿನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುವ ದಿನಗಳು ದೂರವಿಲ್ಲ.
ಇಷ್ಟು ದಿನ ಮರಳು ತೆಗೆಯಲು ಅನುಮತಿ ಇಲ್ಲದಿದ್ರು ಕೂಡ ಎಲ್ಲೂ ಕೂಡ ಬಂದಾಗಿರಲಿಲ್ಲ ಅನದಿಕೃತವಾಗಿ ಸಾಗುವಷ್ಟು ಮರಳು ಸಾಗಾಣಿಕೆ ಯಾಗುತ್ತಲೆ ಇತ್ತು. ಈಗ ಅದಿಕೃತವಾಗಿ ಪಾಸ್ಇದ್ದವರಿಗೆ ಅನುಮತಿ ನೀಡಲಿದ್ದಾರೆ. ಈಗಿನ ಆದುನಿಕ ತಂತ್ರಜ್ಞಾನದ ಮಾದರಿಯಲ್ಲಿ ಮರಳು ತೆಗೆಯುವ ಇವರು ಪ್ರತಿ ದಿನ ವಿಪರೀತ ಮರಳು ತೆಗೆದು ಬೂಮಿಯ ಒಡಲು ಕೊರೆಯುತ್ತಿದೆ.
ಇನ್ನೂ ಕೆಲವು ಮರಳು ಉದ್ಯಮಕ್ಕೆ ಅನುಮತಿ ಪಡೆದವರು ನದಿಯ ದಡದಲ್ಲಿ ತಮ್ಮ ಜಾಗ ಇದ್ದರೂ ಅಲ್ಲಿಯ ತನಕ ಬೋಟ್ ಬರಲು ಸಾದ್ಯ ಇಲ್ಲದಿರುವುದಿಂದ ನದಿಗೆ ಮಣ್ಣು ಹಾಕಿ ಕಲ್ಲಿನಿಂದ ತಡೆಗೋಡೆ ಕಟ್ಟಿ ನದಿಯನ್ನೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇಂತಹ ಅನೇಕ ಮರಳು ಸಂಗ್ರಹ ಸ್ಥಳಗಳಿದ್ದು ಇದು ಕೂಡ ಕಾನೂನು ಉಲ್ಲಂಘನೆಯಲ್ಲಿ ಒಂದು.
ಇವರ ವಿಪರೀತ ಹಪಾಹಪಿ ತನದಿಂದ ಬೇಕಾಬಿಟ್ಟಿ ಮರಳು ತುಂಬಿದ ವಾಹನಗಳು ಒಡಾಡುವುದರಿಂದ ರಸ್ತೆಗಳು ಕೂಡಾ ತುಂಬಾ ಹದ ಗೆಟ್ಟು ಹೋಗುತ್ತಿದೆ. ಬೇಸಿಗೆ ಕಾಲದಲ್ಲಿ ಒಡಾಡಲಾಗದಷ್ಟು ದೂಳು ತುಂಬಿ ರಸ್ತೆ ಅಕ್ಕ ಪಕ್ಕದ ಮನೆಯ ಬಣ್ಣವೆ ಬದಲಾಗ ಬಿಡುತ್ತಿದೆ. ಈ ಮರಳು ಉದ್ಯಮ ಬಳಕೆಗೆ, ಬದುಕಿಗೆ ಮಾತ್ರ ಸೀಮಿತ ವಾಗದೆ “ಮರಳು ಮಾಫಿಯಾವಾಗಿ” ಪರಿವರ್ತನೆಯಾಗಿದ್ದು ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುವಂತಾಗಿದೆ.
ಒಂದು ಕಡೆ ಮರಳು ತೆಗೆದು ನದಿಯ ಆಳ ಹೆಚ್ಚಾಗುತ್ತಿದೆ. ಅಕ್ಕ ಪಕ್ಕದ ಜಾಗ ಕೊರೆದು ಸಾರ್ವಜನಿಕರ ಮಾಲ್ಕಿ ಜಾಗಗಳು ನದಿಯ ಪಾಲಾಗುತ್ತಿದೆ. ಆಳವಾಗಿ ಮರಳು ತೆಗೆಯುತ್ತಿದ್ದುದರಿಂದ ನದಿಯ ಪಕ್ಕದಲ್ಲಿ ಇರುವ ಗುಡ್ಡ ಕುಸಿತ ವಾಗುವ ಸಾದ್ಯತೆಗಳು ಹೆಚ್ಚಿದೆ. ನೈಸರ್ಗಿಕವಾಗಿ ಅಪಾಯಗಳಾಗುವ ಎಲ್ಲಾ ಸಾದ್ಯತೆಗಳು ಕಂಡು ಬರುತ್ತಿದೆ. ಮರಳು ಪ್ರತಿ ಒಂದು ವ್ಯಕ್ತಿಗೂ ಅಗತ್ಯವಾದದ್ದು ಅನ್ನುವುದು ಕೂಡ ಸತ್ಯ. ಇಲ್ಲಿಯ ಮರಳುಗಳನ್ನು ತೆಗೆದು ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ. ಸ್ಥಳೀಯವಾಗಿ ಬೇಕಾದಷ್ಟೆ ಮರಳು ತೆಗೆದು ನೈಸರ್ಗಿಕವಾಗಿ ನಡೆಯುವ ಅವಘಡ ತಪ್ಪಿಸ ಬೇಕಾಗಿದೆ.
ಮರಳು ತೂಕಕ್ಕೆ ಯಾಕಿಲ್ಲ ವೇ ಬ್ರೀಜ್ :ಮರಳು ಸಾಗಾಣಿಕೆಗೆ ಟನ್ ಲೆಕ್ಕದಲ್ಲಿ ಪರವಾನಿಗೆ ನೀಡಲಾಗುತ್ತದೆ. ಆದರೆ ಟನ್ ಲೆಕ್ಕದಲ್ಲಿ ಅಳತೆ ಮಾಡಲು ಯಾವುದೆ ವೇ ಬ್ರಿಜ್ ದಂತಹ ಅಳತೆ ಸಾಧನ ಇಲ್ಲ. ಹಾಗಾಗಿ ಯಾವ ಆದಾರದ ಮೇಲೆ ಅಳತೆ ಮಾಡಿ ಅದಿರು ಸಾಗಣೆ ಮಾಡುತ್ತಾರೆ ಅನ್ನುವುದು ಪ್ರಶ್ನೆಯಾಗುತ್ತದೆ. ಆರ್ಟಿಒ ಕಾನೂನು ಪ್ರಕಾರ ಒಂದು ವಾಹನಕ್ಕೆ ಇಂತ್ತಿಷ್ಟೆ ಟನ್ ಸಾಗಿಸ ಬೇಕು ಎಂದು ಕಾನೂನು ಇದೆ. ಆದರೆ ಮರಳು ತುಂಬುವಾಗ ಆರ್ಟಿಒ ಕಾನೂನು ಪ್ರಕಾರ ಟನ್ ಲೆಕ್ಕದಲ್ಲಿ ಹಾಕುತ್ತಾರೆ. ಪ್ರತಿಯೊಂದು ಗಾಡಿಯಲ್ಲೂ ಇವರ ಅಳತೆಯ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಟವಾಗುತ್ತಿದೆ. ಈ ಹಿಂದೆ ಅಧಿಕಾರಿಗಳು ಅಕ್ರಮ ಮರಳು ಮಾತ್ರ ಹಿಡಿದಿದ್ದಾರೆ. ಆದರೆ ಪಾಸ್ ಇದ್ದೂ ಕಾನೂನು ಉಲ್ಲಂಘಿಸಿ ನಿಗದಿ ಪಡಿಸಿಕ್ಕಿಂತ ಹೆಚ್ಚು (ಓವರ್ ಲೋಡ್) ಮರಳು ಸಾಗಿಸಿದ್ದರು ಕೇಸು ದಾಖಲಿಸಿದ ಉದಾರಣೆಗಳಿಲ್ಲ. ಯಾಕೆಂದರೆ ಪರಿಶೀಲನೆಗೆ ವೇ ಬ್ರಿಜ್ ಗಳಿಲ್ಲ. ಈ ಹಿಂದೆ ಅದಿರು ಸಾಗಿಸುವಾಗ ಹೇಗೆ ವೇ ಬ್ರೀಜ್ ಬಳಕೆ ಮಾಡುತ್ತಿದರೋ ಅದೇ ರೀತಿಯಲ್ಲಿ ಮರಳು ಸಾಗಣಿಕೆಗೂ ಕೂಡ ವೇ ಬ್ರೀಜ್ ಬಳಸಬೇಕಾಗಿದೆ.
ಮತ್ತೊಮ್ಮೆ ಪರಿಶೀಲಿಸಬೇಕಿದೆ : ಮಾನ್ಯ ಜಿಲ್ಲಾಧಿüಕಾರಿಗಳು ಮರಳು ಉದ್ಯಮಕ್ಕೆ ಸಂಬಂದ ಪಟ್ಟ ಜಾಗವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಜೊತೆಗೆ ನಿಯಮಾವಳಿಯಲ್ಲೂ ಕೂಡ ಕೆಲವು ಬದಲಾವಣೆ ಮಾಡಿ ಬಿಗಿಗೊಳಿಸ ಬೇಕಾಗಿದೆ. ಪರಿಸರಕ್ಕೆ ಸಂಬಂದ ಪಟ್ಟ ಅಧಿಕಾರಿಗಳು, ಪರಿಸರ ಹೋರಾಟಗಾರರು ಈ ಎಲ್ಲಾ ಬೆಳವಣಿಗೆ ಬಗ್ಗೆ ಘಮನ ಹರಿಸಬೇಕಿದೆ.
Leave a Comment