ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಉಚಿತ ಎನ್.ಟಿ.ಎಸ್.ಇ ಮತ್ತು ಎನ್ ಎಮ್.ಎಮ್.ಎಸ್.ಪರೀಕ್ಞಾ ಪೂರ್ವ ತರಬೇತಿ ಅಕ್ಟೋಬರ್ 7 ರಿಂದ16ರವರೆಗೆ 10ದಿನಗಳ ಕಾಲ ನಡೆಯಲಿದೆ. ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಜಿಲ್ಲಾ ಉಪನಿರ್ದೇಶಕರಾದ ಎನ್.ಜಿ.ನಾಯಕ ತರಬೇತಿಯನ್ನು ಉದ್ಘಾಟಿಸುವರು. ಸೇತುಬಂಧ ಟ್ರಸ್ಟ್,ಕರ್ಕಿ ಇದರ ಕಾರ್ಯದರ್ಶಿ ಜಿ.ಹೆಚ್.ನಾಯ್ಕ ಮತ್ತು ಸಂಚಾಲಕರಾದ ಕೆ.ಎಸ್. ಭಟ್ಟರು ಉಪಸ್ಥಿತರಿರುವರು.
ಈ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ತಾಲೂಕಿನ ಆಸಕ್ತ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಮತ್ತು ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆ ಸಂಚಾಲಕ ಶ್ರೀಕಾಂತ ಹಿಟ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment