ಹೊನ್ನಾವರ, ಮಾರ್ಥೊಮಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಋತು ಸಂಗಡಿಗರು ದೃಶ್ಯ ಕಲೋತ್ಸವದಲ್ಲಿ ಪ್ರಥಮ, ನಾಗರಾಜ ಗೌಡ ಛದ್ಮವೇಷದಲ್ಲಿ ಪ್ರಥಮ, ಅಂಕಿತಾ ಮೇಸ್ತ ಸಂಸ್ಕøತ ಭಾಷಣದಲ್ಲಿ ಪ್ರಥಮ ಮಾಧುರಿ ನಾಯ್ಕ ತುಳು ಭಾಷಣದಲ್ಲಿ ದ್ವಿತೀಯ, ಶ್ರೇಯಾ ನಾಯ್ಕ ಹಿಂದಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶನ ನೀಡಿದ ಎಲ್ಲ ಶಿಕ್ಷಕರನ್ನು ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆ ಹಾಗೂ ಶಿಕ್ಷಕ ವೃಂದದವರು, ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣ ಮೂರ್ತಿ ಹೆಬ್ಬಾರ್ ರವರು ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ್ ಪದಕಿಯವರು ಅಭಿನಂದಿಸಿದ್ದಾರೆ.
Leave a Comment