ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ದಿನನಿತ್ಯ ಹಳಿಯಾಳ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೀವೃ ಸಮಸ್ಯೆಯಾಗುತ್ತಿದ್ದು ಜನತೆ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘ,
ಲಯನ್ಸ್ ಕ್ಲಬ್, ಹಿರಿಯ ನಾಗರೀಕರ ವೇದಿಕೆ, ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ವೇದಿಕೆ, ಹಲವು ಸಂಘ ಸಂಸ್ಥೆಯವರು ತಾಲೂಕಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಹೊರತು ಸಮಸ್ಯೆ ಹೆಚ್ಚಾಗಿದೆ..
ಬುಧವಾರ ನೂರಾರು ಕಬ್ಬು ಸಾಗಿಸುವ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಚಾರಕ್ಕೆ ತೀವೃ ಅಡಚಣೆ ಉಂಟಾಗಿತ್ತು..
Leave a Comment