ಹೊನ್ನಾವರ : ಲಯನ್ಸ್ ಕ್ಲಬ್ ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ರಕ್ತದಾನ ಶಿಬಿರ ಈ ವರ್ಷ ಎರಡನೇಯ ಬಾರಿಗೆ ನಡೆಸಿತು.
ಇಲ್ಲಿ ಭಾಗವಹಿಸಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣ ಮಾತನಾಡಿ “ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಕೆಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವದು ಕಂಡು ಬರುತ್ತಿದೆ. ಇದು ನಿಜವಲ್ಲ. ಎಲ್ಲರೂ ರಕ್ತದಾನ ಮಾಡಬೇಕು” ಎಂದು ಹೇಳಿದರು.
ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಮಾತನಾಡಿ “ರಕ್ತದಾನ ಮಾಡುವುದು ಉತ್ತಮ ಮಾನವೀಯ ಮೌಲ್ಯಗಳಲ್ಲೊಂದಾಗಿದ್ದು, ಯುವಕರಲ್ಲಿ ರಕ್ತದಾನ ಒಂದು ಹವ್ಯಾಸವಾದಲ್ಲಿ ಜಗತ್ತಿನ ಯಾರೊಬ್ಬರು ರಕ್ತದ ಕೊರತೆಯಿಂದ ಸಾಯುವ ಅನಿವಾರ್ಯತೆ ಉದ್ಬವವಾಗಲಾರದು” ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಸಾಳೆಹಿತ್ತಲ್ ಮಾತನಾಡಿ ನಾನು ಇಲ್ಲಿಯವರೆಗೆ ಹಲವು ಬಾರಿ ರಕ್ತದಾನ ಮಾಡಿದ್ದು, ಪ್ರತಿ ಸಾರಿ ರಕ್ತದಾನ ಮಾಡಿದಾಗಲೂ ಸಾರ್ಥಕ ಬಾವನೆ ಉಂಟಾಗಿದೆ. ದೇಹದ ಮೇಲೆ ಯಾವುದೇ ದುಷ್ಪರಿಣಾಗಮ ಆಗಿಲ್ಲ. ಯುವಕರು ಸಾಮಾಜಿ ಹೊಣೆಗಾರಿಕೆ ತೋರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪರಬಾರೆ ಪ್ರಾಚಾರ್ಯ ನಾಗೇಶ ಶೆಟ್ಟಿ ಮಾತನಾಡಿ “ಮೂಡನಂಬಿಕೆಗೆ ಕಿವಿಗೊಡದೆ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಿಬಿರದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಜೀನತ್ ಕಣವಿ ಸ್ವಾಗತಿಸಿದರು, ವಿದ್ಯಾಶ್ರೀ ಹೆಗಡೆ ವಂದಿಸಿದರು. ಗಾಯತ್ರಿ ಗೌಡ ನಿರೂಪಿಸಿದರು. ಲಯನ್ಸಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
Leave a Comment