
ಸಿದ್ದಾಪುರ :- 9ತಿಂಗಳು ಹೊತ್ತು ಹೆತ್ತ ಮಕ್ಕಳಿಂದ ತಿರಸ್ಕಾರಗೊಂಡು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಅಜ್ಜಿಯನ್ನು ತಾಲೂಕಿನ ಮುಗದೂರಿನಲ್ಲಿಯ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.
ಸಿದ್ದಾಪುರ ಪಟ್ಟಣದಲ್ಲಿ ಕೆಲವು ತಿಂಗಳುಗಳಿಂದ ರಸ್ತೆಯ ಮೇಲೆ ತಿರುಗಾಡುತ್ತ ಅನಾಥ ಸ್ಥಿತಿಯಲ್ಲಿ ವಾಸಮಾಡುತಿದ್ದ ಅಂದಾಜು 80 ವರ್ಷದ ಅಜ್ಜಿಯನ್ನು ಮಂಗಳವಾರ ಕೆನರಾ ಡಿಸಿಸಿ ಬ್ಯಾಂಕ್ ಎಟಿಎಮ್ ಪಕ್ಕದಲ್ಲಿ ರಸ್ತೆಯ ಮೇಲೆ ಕುಳಿತು ಉಟ ತಿಂಡಿ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಸಿದ್ದಾಪುರ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಸಿಪಿಐ ಹಾಗೂ ಪಿಎಸ್ಐ ರವರಿಗೆ ಮಾಹಿತಿ ನೀಡಿ, ನಂತರ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಿ ಆಶ್ರಮಕ್ಕೆ ಕರೆದುಕೊಂಡು ಹೊಗಿದ್ದಾರೆ.

ಪತ್ರಿಕೆ ಜೊತೆ ಮಾತನಾಡಿದ ನಾಗರಾಜ ನಾಯ್ಕ ಅಜ್ಜಿ ತನ್ನ ಹೆಸರನ್ನು ನಾಗವ್ವ ಊರು ಕಲಕಲಾಪುರ ಎಂದು ಹೇಳುತಿದ್ದು. ಗಂಡ ಸತ್ತ ನಂತರ ಮಕ್ಕಳು ನೋಡಿಕೊಂಡಿಲ್ಲ ಹಾಗಾಗಿ ಊರು ಬಿಟ್ಟು ಬಂದಿದ್ದೇನೆ ಎಂದುಹೇಳುತಿದ್ದಾಳೆ. ಸಂಬಂಧಿಗಳು ಸಿಗುವವರೆಗೆ ಈ ಅಜ್ಜಿಯನ್ನ ಆಶ್ರಮದಲ್ಲಿ ಇಟ್ಟುಕೊಂಡು ಆರೈಕೆ ಮಾಡಲಾಗುವದು ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ.
ಇಲ್ಲಿಯವರೆಗೆ ನಾಗರಾಜ ನಾಯ್ಕ ಹಲವಾರು ಅನಾಥರ ರಕ್ಷಣೆ ಮಾಡಿ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿ ಅವರ ಬಂಧುಗಳನ್ನು ಹುಡುಕಿ ಅವರ ಜೊತೆ ಕಳುಹಿಸಿಕೊಡುವ ಕೆಲಸ ಮಾಡಿದ್ದಾರೆ. ಸಂಭಂದಿಗಳು ಸಿಗದ ಅನಾಥರನ್ನು ಇವರೆ ಆಶ್ರಮದಲ್ಲಿಟ್ಟು ಆರೈಕೆ ಮಾಡುತಿದ್ದಾರೆ. ಇವರ ಈ ಮಾನವೀಯ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Leave a Comment