• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಒಂದು ವಾರದೊಳಗೆ ಹೊನ್ನಾವರದ ರಸ್ತೆ ಸರಿಪಡಿಸದೇ ಹೋದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸಂಘಟನೆ

February 26, 2019 by Vishwanath Shetty Leave a Comment

watermarked DSC06630

ಹೊನ್ನಾವರದಲ್ಲಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯ ಅವಾಂತರ ಜನರ ನೆಮ್ಮದಿ ಕೆಡಿಸುತ್ತಿದ್ದು ಇದರಿಂದ ರೋಸಿ ಹೊದ ಜನತೆ ಪಟ್ಟಣಪಂಚಾಯತಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಮನವಿಯೊಂದಿಗೆ ಒಂದುವಾರದ ಗಡುವನ್ನು ನೀಡಿ ವಾಪಸ್ಸಾಗಿದ್ದಾರೆ.
ರಿಕ್ಷಾ ಟೆಂಪೂ ಯೂನಿಯನ್ ತಾಲೂಕಿನ ತಜೀಂ ಸಂಘಟನೆ ಸದಸ್ಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಆಕ್ರೂಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕಛೇರಿಗೆ ಬರಲು ವಿಳಂಬವಾಗಿರುದಕ್ಕೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರಮುಖ ಮಾರ್ಗದ ರಸ್ತೆಗಳನ್ನೆಲ್ಲ ಅಗೆದು ನಾನಾಚಾರ ಮಾಡಿರುವ ಗುತ್ತಿಗೆದಾರರು ತಮ್ಮ ಮನಸ್ಸಿಗೆ ತೋಚಿದಂತೆ ಕೆಲಸಮಾಡುತ್ತಿದ್ದಾರೆನ್ನುವ ಆರೋಪ ಇಂದು ನಿನ್ನೆಯದಲ್ಲದಿದ್ದರೂ ಇದನ್ನು ಪ್ರಶ್ನಿಸಿದವರಿಗೆ ಒಂದಲ್ಲ ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಶಾಸಕರಲ್ಲಿಯೂ ಜನರು ದೂರಿಕೊಂಡಿದ್ದರು.
ಹತ್ತು ಹಲವಾರು ಮನವಿ ಸಲ್ಲಿಕೆಯ ಜೊತೆಗೆ ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಸಭೆ ಸೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖಾ ಮುಖಿ ಚರ್ಚೆಯೂ ನಡೆದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕರು ಸಂಬಂಧಪಟ್ಟವರಿಗೆ ಸೂಚಿಸಿದ್ದರು ಅಂತೂ ಇಂದು ಸಮಸ್ಯೆ ಬಗೆಹರಿಯಿತು ಎಂದುಕೊಂಡಿದ್ದ ನಗರದ ನಿವಾಸಿಗಳ ನಿರೀಕ್ಷೆ ಹುಸಿಯಾಗಿದ್ದು ಗುತ್ತಿಗೆದಾರರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಕಂಡುಬಂದಿದೆ.
ಸಾರಿಗೆ ಬಸ್ಸು, ಪ್ರಯಾಣಿಕರ ಟೆಂಪೋ ನಿಲ್ದಾಣಕ್ಕೆ ಮರಳುವ ಮಾರ್ಗವಾದ ಕೋರ್ಟ ರಸ್ತೆಯನ್ನು ಕೆಲದಿನಗಳ ಹಿಂದೆ ಅಗೆದು ಹೊಂಡ ಗುಂಡಿಗಳನ್ನು ನಿರ್ಮಿಸಿದ್ದಾರೆ ಇದರಿಂದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟಗೆ ಬರುವವರಿಗೆ, ತೋಟಗಾರಿಕೆ ಇಲಾಖೆಗೆ ಬರುವ ರೈತರಿಗೆ, ಪಕ್ಕದಲ್ಲಿರುವ ಶಾಲೆಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಸಂಕಟವನ್ನು ತಂದಿಟ್ಟಿದ್ದು ಯಾವಾಗ ಮುಗಿಯುತ್ತದೆ ಎಂದು ಕೊಳ್ಳುತ್ತಿದ್ದಾರೆ.
ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ಪಟ್ಟಣದಲ್ಲಿ ಸಂಚರಿಸುವ ಆಟೋ ರಿಕ್ಷಾ ಚಾಲಕರಿಗೂ ಸವಾಲಾಗಿರುವ ರಸ್ತೆಯನ್ನು ಪಟ್ಟಣಪಂಚಾಯತನವರು ಮುತುವರ್ಜಿವಹಿಸಿ ತಕ್ಷಣ ಸರಿಪಡಿಸಬೇಕು ಇಲ್ಲವಾದರೆ ಸಂಬಂಧಪಟ್ಟ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಒಂದೋ ಜನರಿಗೆ ತೊಂದರೆಯಾಗದರೀತಿಯಲ್ಲಿ ಕೆಲಸಮಾಡಿ ಇಲ್ಲವೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಎಂದು ಖಡಕ್ಕಾಗಿ ಸೂಚನೆ ನೀಡುವಂತೆ ಆಗಮಿಸಿದ ರಿಕ್ಷಾ ಹಾಗೂ ಟೆಂಪೋ ಚಾಲಕರು, ತಂಝೀಂ ಸೊಸೈಟಿಯ ಸದಸ್ಯರು ಹಾಗೂ ನಾಗರೀಕರು ಒತ್ತಾಯ ಮಾಡಿದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ನ್ಯಾಯವಾಧಿ ವಿಕ್ರಮ ನಾಯ್ಕ, ಮಾತನಾಡಿ ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ ಜನರು ರೋಸಿ ಹೋಗಿದ್ದಾರೆ. ನಾವು ಒಂದು ವಾರದ ಗಡುವನ್ನು ನೀಡಿ ಸರಿಪಡಿಸದಿದ್ದರೆ ಅದೇ ಸ್ಥಳದಲ್ಲಿ ದರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದೇವೆ. ಎರಡುದಿನಗಳ ಸಮಯಾವಕಾಶ ಕೇಳಿದ್ದಾರೆ ಹಾಗಾಗಿ ಇವತ್ತು ಮನವಿಯನ್ನಷ್ಟೇ ನೀಡಿದ್ದೇವೆ. ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಕಛೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸದೇ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಾರೆ ಮುಂದೆ ಇಂತಹ ವರ್ತನೆ ಮರುಕಲೀಸದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಆಟೋರಿಕ್ಷಾ ಚಾಲಕರು ಮಾಲಕರ ಸಂಘ ಅಧ್ಯಕ್ಷರಾದ ಶಿವರಾಜ ಮೇಸ್ತ, ತಜೀಂ ಅಧ್ಯಕ್ಷರು ಹಾಗೂ ರಿಕ್ಷಾ ಹಾಗೂ ಟೆಂಪೂ ಯೂನಿಯನ್ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: be warned The organization, eccarisida saṅghaṭane, fierce fighting, For thousands of students, hōdare, honnāvara raste saripaḍisadē, if the Honnavar road is not repaired, kōrṭa raste, kōrṭage baruvavarige, ondu vāradoḷage, pakka, patients who come to the Talukasapatra, paṭṭaṇapan̄cāyatage muttige hāki ākrōśa, prayāṇikara ṭempō nildāṇakke maraḷuva mārga, rikṣā ṭempū yūniyan, sārige bas'su, Sāvirāru vidyārthigaḷige nitya saṅkaṭa, tajīṁ saṅghaṭane sadasyaru paṭṭaṇa pan̄cāyati muttige hāki ākrūśa, tālūkāspatrege baruva rōgigaḷige, the acrosha, the courthouse, the farmers coming to the horticulture department, the return to the passenger tempo station, the rickshaw tempo union, the side, the tajim organization members besiege the town panchayat, the township, the transport bus, then, to the court, tōṭagārike ilākhege baruva raitarige, ugra hōrāṭa, Within the week, ಉಗ್ರ ಹೋರಾಟ, ಎಚ್ಚರಿಸಿದ ಸಂಘಟನೆ, ಒಂದು ವಾರದೊಳಗೆ, ಕೋರ್ಟ ರಸ್ತೆ, ಕೋರ್ಟಗೆ ಬರುವವರಿಗೆ, ತಜೀಂ ಸಂಘಟನೆ ಸದಸ್ಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಆಕ್ರೂಶ, ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ, ತೋಟಗಾರಿಕೆ ಇಲಾಖೆಗೆ ಬರುವ ರೈತರಿಗೆ, ಪಕ್ಕ, ಪಟ್ಟಣಪಂಚಾಯತಗೆ ಮುತ್ತಿಗೆ ಹಾಕಿ ಆಕ್ರೋಶ, ಪ್ರಯಾಣಿಕರ ಟೆಂಪೋ ನಿಲ್ದಾಣಕ್ಕೆ ಮರಳುವ ಮಾರ್ಗ, ರಿಕ್ಷಾ ಟೆಂಪೂ ಯೂನಿಯನ್, ಸಾರಿಗೆ ಬಸ್ಸು, ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಸಂಕಟ, ಹೊನ್ನಾವರ ರಸ್ತೆ ಸರಿಪಡಿಸದೇ, ಹೋದರೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...