• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್‍ಗಳ ಮಾರಾಟ ಕ್ಯಾನ್ಸರ್‍ಕಾರಕ ಶೀಟ್‍ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

March 4, 2019 by Nagaraj Naik Leave a Comment

IMG 20190302 WA0008

ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ ಕ್ಯಾನ್ಸರ್ ರೋಗ ಬರುವುದು ಧೃಡಪಟ್ಟಿದೆ. 2011ರಲ್ಲಿ ಭಾರತದಲ್ಲಿ ಪೈಬರ್ ಮಿಶ್ರಿತ ಅಸ್ಬೆಸ್ಟೋಸ್ ಸೀಟ್‍ಗಳ ಮಾರಾಟ, ಸಂಗ್ರಹ ಹಾಗೂ ಉತ್ಪಾದನೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದರೂ ಜಿಲ್ಲೆಯಲ್ಲಿ ಅಸ್ಬೆಸ್ಟೋಸ್ ಸೀಟ್‍ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕಣ್ಣಿದ್ದು ಕುರುಡರಾಗಿರುವ ಅಧಿಕಾರಿಗಳ ವರ್ತನೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಸ್ಬೆಸ್ಟೋಸ್ ಸೀಟ್‍ನಲ್ಲಿ ಏನಿದೆ?:ಸಿಮೆಂಟ್ ಮತ್ತು ಪೈಬರ್‍ನಿಂದ ತಯಾರಿಸುವ ಈ ಸೀಟ್‍ಗಳಿಗೆ ದೀರ್ಘಾವಧಿ ಬಾಳಿಕೆ ಬರುವ ಸಲುವಾಗಿ ಅಸ್ಬೆಸ್ಟೋಸ್ ಎನ್ನುವ ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕ ಮಿಶ್ರಿತ ಸೀಟ್‍ಗಳಿಂದ ಕಾರ್ಜಿಯೋಜಿನ್ ಉತ್ಪತ್ತಿಯಾಗುತ್ತದೆ. ಈ ಸೀಟ್ ಗಳಿಂದ ಹೊರಬರುವ ಫೈಬರ್ ಕಣಗಳನ್ನು ಉಸಿರಾಡಿದರೆ ನಾನಾ ರೀತಿಯ ಕ್ಯಾನ್ಸರ್ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಫಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಧೃಡಪಡಿಸಿದೆ.
ಅಸ್ಬೆಸ್ಟೋಸ್ ಸೀಟ್‍ನಿಂದ 5 ರೀತಿಯ ಕ್ಯಾನ್ಸರ್ :- ಕ್ಯಾನ್ಸರ್ ತಜ್ಞರ ಪ್ರಕಾರ ಪೈಬರ್ ಮಿಶ್ರಿತ ಸಿಮೆಂಟ್ ಸೀಟ್‍ಗಳಿಂದ ಹೊರಹೊಮ್ಮುವ ರಾಸಾಯನಿಕ ಪ್ರಕ್ರಿಯೆಗಳಿಂದ ಶ್ವಾಸಕೋಶ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಮಿಸೋತೆಲಿಯ ಎನ್ನುವ ಹೊಟ್ಟೆಯ ಕ್ಯಾನ್ಸರ್, ಪ್ರಾಕ್ರಟೈಸ್ ಹಾಗೂ ಧ್ವನಿ ಪೆಟ್ಟಿಗೆ ಕ್ಯಾನ್ಸರ್‍ಗಳು ಬರುತ್ತವೆ.
60ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ಬೆಸ್ಟೋಸ್ ಸೀಟ್‍ಗಳ ಬ್ಯಾನ್:- ಇಂದು ಅಂದಾಜಿನ ಪ್ರಕಾರ ಇದರಿಂದಾಗುವ ದುಷ್ಪರಿಣಾಮಗಳಿಂದ 60ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ಬೆಸ್ಟೋಸ್ ಸೀಟ್‍ಗಳನ್ನ ಬ್ಯಾನ್ ಮಾಡಲಾಗಿದೆ.
2011ರಲ್ಲಿ ಭಾರತದಲ್ಲಿ ಬ್ಯಾನ್:- ಅಸ್ಬೆಸ್ಟೋಸ್ ಸೀಟ್‍ಗಳಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ಈ ಮೂಲಕ ಜನರ ಸಾವುಗಳನ್ನ ಗಮನಿಸಿದ ಸುಪ್ರೀಂ ಕೋರ್ಟ್ 2011ರಲ್ಲಿ ಭಾರತ ದೇಶದಲ್ಲಿ ಪೈಬರ್ ಮಿಶ್ರಿತ ಸಿಮೆಂಟ್ ಸೀಟ್‍ಗಳ ಮಾರಾಟ, ಸಂಗ್ರಹ ಹಾಗೂ ಉತ್ಪಾದನೆಯನ್ನು ನಿಷೇಧಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎನ್ನಲಾಗಿದೆ. ಆದರೆ ಭಾರತದ ಹಲವೆಡೆ ಎಗ್ಗಿಲ್ಲದೆ ಅಸ್ಬೆಸ್ಟೋಸ್ ಸೀಟ್‍ಗಳ ಮಾರಾಟ, ಸಂಗ್ರಹ ಹಾಗೂ ಉತ್ಪಾದನೆ ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ.

IMG 20190302 WA0009

ಸರ್ಕಾರಿ ಇಲಾಖೆಗಳ ದಿವ್ಯ ನಿರ್ಲಕ್ಷ್ಯ:– ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಮುನ್ಸಿಪಾಲ್ಟಿ ಡಿಪಾರ್ಟಮೆಂಟ್, ಗಣಿಗಾರಿಕೆ ಇಲಾಖೆ ಹೀಗೆ ಹಲವು ಇಲಾಖೆಗಳು ಇವುಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಹೊಂದಿದ್ದು ಆದರೆ ಎಲ್ಲಾ ಕಡೆ ಅಸ್ಬೆಸ್ಟೋಸ್ ಸೀಟ್‍ಗಳು ದೊರೆಯುತ್ತಿರುವುದು ಇಲಾಖೆಗಳ ದಿವ್ಯ ನಿರ್ಲಕ್ಷ್ಯವನ್ನ ಎತ್ತಿ ತೋರಿಸುತ್ತಿದೆ. ಮತ್ತು ಹಲವಾರು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಇಂತಹ ಅಪಾಯಕಾರಿ ಅಸ್ಬೆಸ್ಟೋಸ್ ಸೀಟ್‍ಗಳ ಮಾರಾಟ ಮಾಡುತ್ತಿರುವ, ಸಂಗ್ರಹ ಮಾಡುತ್ತಿರುವ ಹಾಗೂ ಉತ್ಪಾದನೆ ಮಾಡುತ್ತಿರುವವರ ಮೇಲೆ ಈ ಮೇಲಿನ ಎಲ್ಲಾ ಇಲಾಖೆಗಳು ಜಂಟಿಯಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವುದು ತಜ್ಞರ ಅಭಿಪ್ರಾಯ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸೀಟ್‍ಗಳ ಬಗ್ಗೆ ಜಾಗೃತಿ ಮೂಡಿಸಿ ಜನಸಾಮಾನ್ಯರು ಮಾರಕ ರೋಗಗಳಿಗೆ ತುತ್ತಾಗದಂತೆ ನೋಡಿಕೊಳ್ಳಬೇಕಿದೆ.

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: SIDDAPURA, Trending Tagged With: 2011ralli bhāratadalli byān, 2011ರಲ್ಲಿ ಭಾರತದಲ್ಲಿ ಬ್ಯಾನ್, 5 rītiya kyānsar, 5 types of cancer, 5 ರೀತಿಯ ಕ್ಯಾನ್ಸರ್, 60kkū heccu dēśagaḷalli asbesṭōs sīṭ‍gaḷa byān, 60ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ಬೆಸ್ಟೋಸ್ ಸೀಟ್‍ಗಳ ಬ್ಯಾನ್, adhikārigaḷa divya nirlakṣya, and cancer in over 60 countries, ārōgya ilākhe, asbesṭōs śīṭ‍gaḷa mārāṭa, bisilininda rakṣaṇe, cancer and many others, cement, Collection, dhūmapāna, Eggillade naḍitide, environmental pollution control board, exhausted, fiber made from these fiber-made, gāḷi, gaṇigārike, health department, horahom'muva rāsāyanika prakriye, ILLEGAL, industrial department, kaigārikā ilākhe, kānūnu bāhira, kārmika ilākhe, Kidney cancer, kiḍni kyānsar, kyānsar rōga halavāru kāraṇa, kyānsar tajñara prakāra, kyānsar‍kāraka śīṭ‍gaḷa baḷake, labor department, long-term, lung cancer, male, mining and government departments, misōteliya ennuva hoṭṭeya kyānsar, municipal department, munsipālṭi ḍipārṭameṇṭ, paibar miśrita asbesṭōs sīṭ‍gaḷa mārāṭa, paibar miśrita simeṇṭ sīṭ‍, paibar‍ninda tayārisuva ī sīṭ‍gaḷige dīrghāvadhi, parisara mālin'ya niyantraṇa maṇḍaḷi, prākraṭais hāgū dhvani peṭṭige kyānsar‍gaḷu, Production, rain, sales of asbestos sheets, sales of Piper Mixed Asbestos Seats, saṅgraha, sarkāri ilākhegaḷa divya nirlakṣya, simeṇṭ, smoking, stomach cancer called Misotelia According to the Cancer Experts, Sunny Because of the protection, Supreme Court, suprīṁ kōrṭ ādēśakkū beleyillavē?, Suprīṁ kōrṭ ādēśavannu ullaṅghisi, śvāsakōśa kyānsar, tambāku sēvane, The ban on Asbestos seats, the emergence of chemical processes, the Supreme Court Is there a cost for the order ?, the use of cancerous sheets, tobacco consumption, utpādaneyannu suprīṁ kōrṭ, violation of Supreme Court order, Wind, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ-, ಅಸ್ಬೆಸ್ಟೋಸ್ ಶೀಟ್‍ಗಳ ಮಾರಾಟ, ಆರೋಗ್ಯ ಇಲಾಖೆ, ಉತ್ಪಾದನೆಯನ್ನು ಸುಪ್ರೀಂ ಕೋರ್ಟ್, ಎಗ್ಗಿಲ್ಲದೆ ನಡಿತಿದೆ, ಕಾನೂನು ಬಾಹಿರ, ಕಾರ್ಮಿಕ ಇಲಾಖೆ, ಕಿಡ್ನಿ ಕ್ಯಾನ್ಸರ್, ಕೈಗಾರಿಕಾ ಇಲಾಖೆ, ಕ್ಯಾನ್ಸರ್ ತಜ್ಞರ ಪ್ರಕಾರ, ಕ್ಯಾನ್ಸರ್ ರೋಗ ಹಲವಾರು ಕಾರಣ, ಕ್ಯಾನ್ಸರ್‍ಕಾರಕ ಶೀಟ್‍ಗಳ ಬಳಕೆ, ಗಣಿಗಾರಿಕೆ, ಗಾಳಿ, ತಂಬಾಕು ಸೇವನೆ, ಧೂಮಪಾನ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೈಬರ್ ಮಿಶ್ರಿತ ಅಸ್ಬೆಸ್ಟೋಸ್ ಸೀಟ್‍ಗಳ ಮಾರಾಟ, ಪೈಬರ್ ಮಿಶ್ರಿತ ಸಿಮೆಂಟ್ ಸೀಟ್‍, ಪೈಬರ್‍ನಿಂದ ತಯಾರಿಸುವ ಈ ಸೀಟ್‍ಗಳಿಗೆ ದೀರ್ಘಾವಧಿ, ಪ್ರಾಕ್ರಟೈಸ್ ಹಾಗೂ ಧ್ವನಿ ಪೆಟ್ಟಿಗೆ ಕ್ಯಾನ್ಸರ್‍ಗಳು, ಬಿಸಿಲಿನಿಂದ ರಕ್ಷಣೆ, ಮಳೆ, ಮಿಸೋತೆಲಿಯ ಎನ್ನುವ ಹೊಟ್ಟೆಯ ಕ್ಯಾನ್ಸರ್, ಮುನ್ಸಿಪಾಲ್ಟಿ ಡಿಪಾರ್ಟಮೆಂಟ್, ಶ್ವಾಸಕೋಶ ಕ್ಯಾನ್ಸರ್, ಸಂಗ್ರಹ, ಸರ್ಕಾರಿ ಇಲಾಖೆಗಳ ದಿವ್ಯ ನಿರ್ಲಕ್ಷ್ಯ, ಸಿಮೆಂಟ್, ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ?, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಹೊರಹೊಮ್ಮುವ ರಾಸಾಯನಿಕ ಪ್ರಕ್ರಿಯೆ

Explore More:

About Nagaraj Naik

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...