ಹೊನ್ನಾವರ; ಸರಕಾರಿ ಪದವಿ ಪೂರ್ವ ಕಾಲೇಜು ಇಡಗುಂಜಿಯವಿದ್ಯಾರ್ಥಿಗಳು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದ ಬಾಲಕೃಷ್ಣ ಭಟ್ – 527, ಸಂಜನಾ ಎಮ್ ನಾಯ್ಕ – 526, ಸುವರ್ಣ ಎಮ್ ನಾಯ್ಕ – 503, ಕಲಾ ವಿಭಾಗದಲ್ಲಿ ಪ್ರಿನ್ಸಿಟಾ ಮಿರಾಂಡ – 498, ಮಮತಾ ನಾಯ್ಕ – 467, ಅಂಕಿತಾ ಗೌಡ – 450, ವಿಜ್ಞಾನ ವಿಭಾಗದಲ್ಲಿ ಅನುಷಾ ಟಿ. ಮೇಸ್ತ – 489, ನಾಗವೇಣಿ ಜಿ. ನಾಯ್ಕ – 467, ದಿವ್ಯಾ ಜಿ. ನಾಯ್ಕ – 458 ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಕಾಲೇಜಿನ ಅರ್ಥಶಾಸ್ತ್ರ, ಕನ್ನಡ, ಸಮಾಜಶಾಸ್ತ್ರ, ಹಾಗೂ ರಾಜ್ಯಶಾಸ್ರ್ತ ವಿಷಯಗಳಲ್ಲಿ 100ಕ್ಕೆ 100ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು. ಕಾಲೇಜಿನ ಒಟ್ಟು ಫಲಿತಾಂಶ ಶೇ. 71 ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ.
Leave a Comment