ಹೊನ್ನಾವರ: ಬರುವ ದಿ:29ರಂದು ಹೊನ್ನಾವರ ಪಟ್ಟಣ ಪಂಚಾಯತಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ಹೊನ್ನಾವರ ಪಟ್ಟಣದ ಗಾಂಧೀನಗರ 11ನೇ ಸಾಮಾನ್ಯ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ವರ್ಧಿಸಲು ಹೊನ್ನಾವರ ಪಟ್ಟಣ ಪಂಚಾಯತ ಚುನಾವಣಾಧಿಕಾರಿ ಜಿ.ಎ.ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಶಾಸಕಿ ಶಾರದಾ ಎಂ.ಶೆಟ್ಟಿ, ಆಗ್ನೇಲ್ ಡಯಾಸ್, ನೆಲ್ಸನ್ ರೊಡ್ರಗಿಸ್, ಮುಸಾ ಅಣ್ಣೆಗೇರಿ, ವಿನಾಯಕ ಶೇಟ, ದಾಮೋದರ ನಾಯ್ಕ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Leave a Comment