ಹಳಿಯಾಳ:- ಸಂಸ್ಥೆ ಯಶಸ್ವಿಯಾದ ಶಿಬಿರಾರ್ಥಿಗಳನ್ನು ಆಶ್ರಯ ಸಂಘದ ಮೂಲಕ ಒಂದುಗೂಡಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಸಿರುವುದು ಸಂತೋಷದ ವಿಷಯವೆಂದು ಸಿ.ಆರ್.ಡಿ.ಟ್ರಸ್ಟಿನ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಹಳಿಯಾಳದಲ್ಲಿ “ಆಶ್ರಯ” – ಅಂದಿನ ಶಿಕ್ಷಣಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ತರಬೇತಿಗಳು ಗುಣಮಟ್ಟದಾಗಿದ್ದು ಊದ್ಯೋಗಾವಕಾಶ ಪಡೆಯುವರ ಪ್ರಮಾಣವು ಗರಿಷ್ಠವಾಗಿದೆ ಎಂದು ಹೇಳಿದ ಅವರು ಶಿಭಿರಾರ್ಥಿಗಳು ಸಂಘದ ಮೂಲಕ ಉದ್ಯಮದಲ್ಲಿ ಬರುವ ಸೋಲು-ಗೇಲವು ಹಂಚಿಕೊಳ್ಳುವ, ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶಗಳನ್ನು ಪಡೆದುಕೊಂಡು ಯಶಸ್ವಿ ಉದ್ಯಮಿಗಳಾಗಿ ಹೊರ ಹೊಮ್ಮುವಂತೆ ಕರೆ ನೀಡಿದರು.
ಕೆನರಾ ಬ್ಯಾಂಕ ದೇಶಪಾಂಡೆ ಆರ್ ಸೆಟಿಯ ಹಿರಿಯ ಮಾರ್ಗದರ್ಶಕರಾದ ಅನಂತ್ಯ ಆಚಾರ ಅವರು ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿಯಾದ ಅಮೋಲ್, ಶಿವಾ, ಚಾಮುಂಡಿಶ್ವೇರಿ, ಆಶೋಕ ಮತ್ತು ಶಂಕರ ಶಿಭಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಿಸಿನೆಸ್ ಮ್ಯಾನೆಜ್‍ಮೆಂಟ್ ಕನ್ಸಲ್ಟಂಟ್ ಆಗಿರುವ ಮಂಜುನಾಥ ನಾಯ್ಕ ಶಿಬಿರಾರ್ಥಿಗಳಿಗೆ ಡಿಜಿಟಲ್ ಮಾರ್ಕೇಟಿಂಗ್ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ, ಆಶ್ರಯ ಸಂಘದ ಅಧ್ಯಕ್ಷ ಎಮ್ ಚೌಗಲೆ ಸಂಘದ ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಆಯ್ಕೆಮಾಡಿ ಪದಗ್ರಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುಮಟಾ ಸಿಂಡ್ ಆರ್‍ಸೆಟಿ ನಿರ್ದೇಶಕ ನವೀಣಕುಮಾರ, ವಿ.ಆರ್.ಡಿ.ಎಮ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಖಜಾಂಚಿಗಳಾದ ಅನೀಸ ಶಿಲ್ಲೇದಾರ, ಸಂಸ್ಥೆಯ ವಿನಾಯಕ ಚವ್ಹಾಣ, ಶಾಂತಾ ಜಮಾದಾರ ಇದ್ದರು.
Leave a Comment