• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

June 7, 2019 by Gaju Gokarna Leave a Comment

Eco Day in Sri Chennakeshava High School

ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿಯ ಸಹಭಾಗಿತ್ವದಲ್ಲಿ ರಂದು “ವಿಶ್ವ ಪರಿಸರ ದಿನಾಚರಣೆ” ಆಚರಿಸಲಾಯಿತು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಟ್ರಸ್ಟ್‍ವತಿಯಿಂದ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ ಸೇತುಬಂಧ ಟ್ರಸ್ಟ್ ಕರ್ಕಿಯ ಎನ್.ಜಿ.ಹೆಗಡೆ ಮಾದಪ್ಪನ್ ಅವರು ಮಾತನಾಡಿ ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ. ಕಾರ್ಬನ್ ಡೈ ಆಕ್ಸೆಡ್ ಪ್ರಮಾಣ ಏರುತ್ತಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ. ಪ್ಲಾಸ್ಟಿಕ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಪರಿಸರವನ್ನು ಉಳಿಸಬೇಕು ಎಂದರು.

Eco Day in Sri Chennakeshava High School

ಇನ್ನೋರ್ವ ಅತಿಥಿಗಳಾದ ನಾಗರಾಜ ನಾಯಕ್-ಖ್ಯಾತ ನ್ಯಾಯವಾದಿಗಳು, ಕಾರವಾರ ಇವರು ಮಾತನಾಡಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ಅದು ನಿತ್ಯವೂ ಆಚರಣೆಯಲ್ಲಿ ಇರಬೇಕಾದುದು. ಮನುಷ್ಯನಿಲ್ಲದ ಪ್ರಕೃತಿ ಸಮೃದ್ಧಿಯಿಂದ ಕೂಡಿರುತ್ತಿತ್ತು. ಶಂಕರ ಹೊಂಡದಲ್ಲಿ ಜನಿಸಿದ ಅಘನಾಶಿನಿ ಸಹಸ್ರ ಜನರಿಗೆ ಉದ್ಯೋಗ ಆಶ್ರಯ ನೀಡಿದ ಪ್ರಾಣದಾಯಿನಿ, ಅಂತಹ ನದಿ ಇಂದು ಬತ್ತಿ ಹೋಗುತ್ತಿದೆ. ಆದ್ದರಿಂದ ಜಲವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಹೇಳಿದರು. ಒಂದು ಬಾಟಲ್ ತಯಾರಿಸಲು ನಾಲ್ಕು ಲೀಟರ್ ನೀರು ಬೇಕು, ಆದ್ದರಿಂದ ಪ್ಲಾಸ್ಟಿಕ್ ಬಾಟಲ್ ಸಂಸ್ಕøತಿ ನಮ್ಮದಾಗಬಾರದು ಎಂದು ತಿಳಿಸಿದರು. ನಾವು ಬಳಸುವ ವಸ್ತುಗಳು ಹಾಳಾದರೆ ಅವುಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದು ಜನರಿಗೆ ತಿಳಿದಿಲ್ಲ. ಆದ್ದರಿಂದ ಪಂಚ ಭೂತಗಳಲ್ಲಿ ಲೀನವಾಗುವ ವಸ್ತುಗಳನ್ನು ಹೆಚ್ಚು ಬಳಸಬೇಕು ಎಂದು ಹೇಳಿ “ಒಂದು ನದಿ ಭತ್ತಿದರೆ ಸಾವಿರಾರು ತಾಯಿ ಮಡಿದಷ್ಟು ದುಃಖವಾಗುತ್ತದೆ” ಎಂದು ಮಾರ್ಮಿಕವಾಗಿ ಮಾತನಾಡಿ ಪರಿಸರ ಉಳಿಸಲು ಕರೆ ನೀಡಿದರು.

Eco Day in Sri Chennakeshava High School
ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ ಊರಿನಲ್ಲೇ ಇದ್ದು ಊರನ್ನು ಅಭಿವೃದ್ದಿಪಡಿಸಿ ಸ್ವಾವಲಂಬಿಯಾಗಿ ಬದುಕಬೇಕು. ಸಹ್ಯಾದ್ರಿಯ ತಲೆದಿಂಬು, ಕಡಲಿನ ಜೋಗುಳ, ಹಸಿರುಬಣ್ಣದ ಕೌದಿಯನ್ನು ಹೊದ್ದ ಉತ್ತರ ಕನ್ನಡದ ಹಸಿರನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಾಥಾ ತೆರಳಿ ಪರಿಸರ ಉಳಿವಿನ ಘೋಷಣೆಯ ಉದ್ಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಶ್ರೀಕಾಂತ ಹಿಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸೀಮಾ ಭಟ್ಟ ವಂದಿಸಿದರು. ಕೆ.ಎಸ್.ಭಟ್ಟ. ಜಿ.ಎಚ್.ನಾಯ್ಕ ಸುಬ್ರಾಯ ಭಟ್ಟ ಉಪಸ್ಥಿತಿಯಲ್ಲಿದ್ದರು.

Eco Day in Sri Chennakeshava High School

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Carbon Dioxide Dose, Chennakeshava High School Karkey, Eco Day at Sri Chennakeshava High School, Karkey Partnership, Litter Water Needed, on, Sethuban Trust, So Plastic Bottle Processor, World Environment Day, ಆದ್ದರಿಂದ ಪ್ಲಾಸ್ಟಿಕ್ ಬಾಟಲ್ ಸಂಸ್ಕøತಿ, ಕರ್ಕಿಯ ಸಹಭಾಗಿತ್ವ, ಕಾರ್ಬನ್ ಡೈ ಆಕ್ಸೆಡ್ ಪ್ರಮಾಣ, ಚೆನ್ನಕೇಶವ ಪ್ರೌಢಶಾಲೆ ಕರ್ಕಿ, ರಂದು, ಲೀಟರ್ ನೀರು ಬೇಕು, ವಿಶ್ವ ಪರಿಸರ ದಿನಾಚರಣೆ, ಶ್ರೀ ಚೆನ್ನಕೇಶವ ಪ್ರೌಢಶಾಲೆ, ಸೇತುಬಂಧ ಟ್ರಸ್ಟ್

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...