• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ

June 18, 2019 by Vishwanath Shetty Leave a Comment

watermarked S2410008

ಒಂದು ಬಂಗಡೆ ಮೀನು 4 ರಿಂದ 5 ಲಕ್ಷ ಮೊಟ್ಟೆ ಇಡುತ್ತದೆ ಆದರೆ ಮೀನುಗಾರರು ಗ್ರಾಹಕರ ಬೇಡಿಕೆ ಹಾಗೂ ಹಣದಾಸೆಗೆ ಅವಧಿಗೆ ಮುಂಚೆ ಅದನ್ನು ಮಾರುಕಟ್ಟೆಗೆ ತರುತ್ತಾರೆ ಆ ಕೆಲಸವನ್ನು ನಮ್ಮ ಮೀನುಗಾರರು ಮಾಡಬಾರದು ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ ನೇರವೇರಸಿದ ಬಳಿಕ ಶಾಸಕರು ಮಾತನಾಡಿ ಮೀನಿನ ಸಂತತಿ ಉಳಿಸಲು ಸರ್ಕಾರ ಹಲವು ಕಾರ್ಯಕ್ರಮ ಕೈಗೆತ್ತಿಕೊಳ್ಳುತ್ತಿದ್ದು ಅದರಲ್ಲೂ ಮೀನುಗಾರರಿಗೆ ನೆರವಾಗಲು ಬಲೆ ವಿತರಣೆ ಮಾಡುತ್ತಿದೆ. ಬಲೆಯ ಗುಣಮಟ್ಟ ಒಳ್ಳೆಯದಿದ್ದು ತಪ್ಪು ಗ್ರಹಿಕೆ ಬೇಡ. ಸಂತತಿ ಹೆಚ್ಚಳ ಹಾಗೂ ಸುರಕ್ಷತೆಗೆ ಸರ್ಕಾರ ಹಾಗೂ ಅಧಿಕಾರಿಗಳಿಗಿಂತ ಹೆಚ್ಚಿನ ಮಾಹಿತಿ ಮೀನುಗಾರರ ಬಳಿ ಇದೆ. ಅದನ್ನು ಪಾಲಿಸುವ ಕೆಲಸ ಮಾಡಬೇಕು. 2 ತಿಂಗಳ ಕಾಲ ಮೀನಿನ ಸಂತಾನೊತ್ಪತ್ತಿಗಾಗಿ ಆಳ ಸಮುದ್ರದ ಮೀನುಗಾರಿಕೆ ನೀಷೇದ ಹೆರಿದ್ದು ಆ ನಿಯಮವನ್ನು ಪ್ರತಿಯೊಬ್ಬ ಮೀನುಗಾರರು ಪಾಲಿಸಬೇಕು. ವರ್ಷದಿಂದ ವರ್ಷಕ್ಕೆ ಮೀನಿನ ಬೇಡಿಕೆ ಹೆಚ್ಚುತ್ತಿದೆ ಆದರೆ ಮೀನು ಕಡಿಮೆ ಸಿಗುತ್ತಿದೆ. ಇದರಿಂದ ಮೀನುಗಾರರು ಜೀವನ ನಡೆಸಲು ಕಷ್ಟಸಾಧ್ಯವಾಗುತ್ತಿದೆ ಆದರೆ ಮಾನಸಿಕವಾಗಿ ಸದೃಡವಾಗಿ ಸರ್ಕಾರ ನೀಡುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಅಲ್ಲದೇ ಮೀನುಗಾರಿಕಾ ಇಲಾಖೆಯಿಂದ ತುಳಸಿನಗರ, ಉದ್ಯಮನಗರ ರಸ್ತೆಯನ್ನು 1 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ನಂತರ ಮಂಜೂರಾದ 45 ಬಲೆಗಳಲ್ಲಿ ಕುಮುಟಾ ಕ್ಷೇತ್ರವ್ಯಾಪ್ತಿಯ 15 ಮೀನುಗಾರಿಗೆ ಬಲೆ ವಿತರಣೆ ನಡೆಸಿದರು. ಇದೇ ಸಂದರ್ಭದಲ್ಲಿ ರಿರ್ಚಡ್ ಗೊನ್ಸಾಲಿಸ್ ಎನ್ನುವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 62.300 ಮೊತ್ತದ ಚೆಕ್ ವಿತರಣೆ ನೇರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಕಾಂತ ಮೋಗೇರ, ಸುರೇಶ ಶೆಟ್ಟಿ, ಟಿ.ಎಸ್.ಹೆಗಡೆ, ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ನಾಗರಾಜ ಭಟ್, ಸವಿತಾ ಮೇಸ್ತ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಬ್ರಹ್ಮಣ್ಯ ಶಾಸ್ತ್ರಿ ಮಿನುಗಾರಿಕಾ ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

watermarked S2410007 watermarked watermarked S2410009

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 2 ತಿಂಗಳ ಕಾಲ ಮೀನಿನ ಸಂತಾನೊತ್ಪತ್ತಿ, a former District Panchayat member, BJP leaders, consumer demand, Department of Fisheries Delivery of government-sanctioned trap to the family, fishermen, money Sege period, Nagaraja Bhat, officials of the Mining Department, Savita Mesta, Shivaraja Mesta, Subramanya Shastri, ಆಳ ಸಮುದ್ರದ ಮೀನುಗಾರಿಕೆ ನೀಷೇದ, ಉದ್ಯಮನಗರ ರಸ್ತೆಯನ್ನು 1 ಕೋಟಿ ವೆಚ್ಚ, ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ, ಗ್ರಾಹಕರ ಬೇಡಿಕೆ, ನಾಗರಾಜ ಭಟ್, ಬಿಜೆಪಿ ಮುಖಂಡರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಬ್ರಹ್ಮಣ್ಯ ಶಾಸ್ತ್ರಿ ಮಿನುಗಾರಿಕಾ ಇಲಾಖೆಯ ಅಧಿಕಾರಿಗಳು, ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ, ಮೀನುಗಾರರು, ಮೀನುಗಾರಿಕಾ ಇಲಾಖೆಯಿಂದ ತುಳಸಿನಗರ, ಶಿವರಾಜ ಮೇಸ್ತ, ಸವಿತಾ ಮೇಸ್ತ, ಹಣದಾಸೆಗೆ ಅವಧಿಗೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...