
ಹಳಿಯಾಳ :- ಸಾರ್ವಜನೀಕರು ಹಾಗೂ ಸಂಘ-ಸಂಸ್ಥೆಗಳ ಸಾಕಷ್ಟು ಬಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊನೆಗೂ ಮನಿದ ಹಳಿಯಾಳ ಪುರಸಭೆಯವರು ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಮಳೆಗಾಲವಾಗಿದ್ದರಿಂದ ರೋಗಗಳು ಹರಡುವ ಸಂಭವ ಇರುವುದರಿಂದ ಹಾಗೂ ಸಾರ್ವಜನೀಕರಿಗೆ ತೊಂದರೆಯಾಗುತ್ತಿರುವ ಕಾರಣ ಹಂದಿಗಳನ್ನು ತಕ್ಷಣ ಹಿಡಿದು ಬೇರೆಯೆಡೆಗೆ ಸಾಗಾಟ ಮಾಡುವಂತೆ ಜನರು ಹತ್ತಾರು ಬಾರಿ ದೂರುಗಳನ್ನು ಸಲ್ಲಿಸಿದ್ದರು.
ಪುರಸಭೆಯವರು ಪೋಲಿಸರ ಸಹಾಯದಿಂದ ಹಂದಿಗಳನ್ನು ಅವುಗಳ ಮಾಲಿಕರಿಗೆ ನೋಟಿಸ್ ಜಾರಿ ಮಾಡಿ ಅವರಿಂದಲೇ ಅವುಗಳನ್ನು ಹಿಡಿದು ಬೇರೆಡೆ ಸಾಗಾಟ ಮಾಡಲು ಸೂಚಿಸಿದ್ದರ ಪರಿಣಾಮ ಸುಮಾರು 150ಕ್ಕೂ ಅಧಿಕ ಹಂದಿಗಳನ್ನು ಹಿಡಿದು ಸಾಗಾಟ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಕೇಶವ ಚೌಗುಲೆ ಮಾಹಿತಿ ನೀಡಿದರು.
Leave a Comment