
ಜೋಯಿಡಾ ;
ಉತ್ತಮ ರೀತಿಯಲ್ಲಿ ಬಟ್ಟೆ ಹೋಲೆಯುವುದು ಒಂದು ಕೌಶಲ್ಯ. ಇದನ್ನು ರೂಡಿಸಿಕೊಂಡರೆ ಜನರು ನಮ್ಮ ಹತ್ತಿರ ಬರುತ್ತಾರೆ, ಜನರೊಂದಿಗೆ ವಿಶ್ವಾಸ ಉತ್ತಮ ಬಾಂದವ್ಯ ಇಟ್ಟುಕೊಂಡರೆ ಮಾತ್ರ ನಮ್ಮ ಉದ್ಯೋಗ ಯಶಸ್ಸು ಕಾಣಲು ಸಾಧ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ ಸಂಸ್ಥೆಯ ಯೋಜನಾ ಸಂಯೋಜಕರು ವಿನಾಯಕ ಚವ್ಹಾಣ ಹೇಳಿದರು.
ಅವರು ಕೆನರಾಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಹಳಿಯಾಳ ಹಾಗೂ ವಿ.ಆರ್.ಡಿ.ಎಂ ಟ್ರಸ್ಟ ಹಳಿಯಾಳ ಪ್ರಾಯೋಜಕತ್ವದಲ್ಲಿ ಜೋಯಿಡಾ ತಾಲೂಕಿನ ನುಜ್ಜಿಯಲ್ಲಿ ಅಲ್ಲಿನ ಗ್ರಾಮೀಣ ಮಹಿಳೆಯರಿಗಾಗಿ 21 ದಿನಗಳ ವಸ್ತ್ರ ವಿನ್ಯಾಸ ತರಬೇತಿಯ ಸಮಾರೊಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿ.ಪಂ. ಸದಸ್ಯ ರಮೇಶ ಜೊಂಜು ನಾಯ್ಕ ಶಿಭಿರಾರ್ಥಿಗಳೊಂದಿಗೆ ಮಾತನಾಡುತ್ತಾ, ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಹಳಿಯಾಳದವರು ನಮ್ಮ ನುಜ್ಜಿಯಂತ ಗ್ರಾಮೀಣ ಭಾಘದಲ್ಲಿ ಬಡಜನರಿಗೆ ಉದ್ಯೋಗಾವಕಾಶಗಳನ್ನು ಮಾಡಿಕೋಳ್ಳುವಲ್ಲಿ ಇಂತಹ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಈ ತರಬೇತಿಯಲ್ಲಿ ಪಡೆದ ಕೌಶಲ್ಯವನ್ನು ಸರಿಯಾಗಿ ಉಪಯೋಗಿಸಿಕೋಳ್ಳುವುದರೊಂದಿಗೆ ಯಶಸ್ವಿ ಉದ್ಯೋಗಿಗಳಾಗಿರಿ ಎಂದು ಹೇಳಿದರು.
ಮಾಜಿ ಗ್ರಾ. ಪಂ. ಅಧ್ಯಕ್ಷ ರಮೇಶ ನಾಯ್ಕ ಚೌಕನಗಾಳಿ ಮಾತನಾಡಿ, ಮಹಿಳೆಯರಿಗೆ ಟೈಲರಿಂಗ ತರಬೇತಿ ಒಳ್ಳೆಯ ಉದ್ಯೋಗವಾಗಿದೆÀ. ಇದರಿಂಮದ ಸ್ವಾವಲಂಬಿಯಾಗಿ ಉತ್ತಮ ಬದುಕು ಸಾಗಿಸಿ ಎಂದರು. ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ಟೋನ್ನಿ ತರಬೇತಿ ನಡೆಸಿಕೊಟ್ಟರು. 29 ಮಹಿಳೆಯರು ಭಾಗವಹಿಸಿದ್ದರು. ಸಾರಿ, ಪೇಟಿಕೊಟ, ಬ್ಲಾವುಸ್, ಸ್ಕೂಲ್ ಯುನಿಪಾರ್ಮ, ಚೂಡಿದಾರ, ವಿವಿಧ ವಿನ್ಯಾಸದ ಬಟ್ಟೆಗಳನ್ನು ಹೊಲಿಯುವಂತೆ ತರಬೇತಿಯಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಊರಿನ ಮುಖಂಡರಾದ ಪ್ರಭಾಕರ ಹರಿಜನ, ಮತ್ತು ಸುಧಾಕರ ಹರಿಜನ ಉಪಸ್ಥಿತರಿದ್ದರು. ಯೋಜನಾಧಿಕಾರಿ ಆಶೋಕ ಸೂರ್ಯವಂಶಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕ್ಷೇತ್ರಾಧಿಕಾರಿ ನಾರಾಯಣ ವಾಡಕರ, ಸಂತೋಷ ಮೋರಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶಿಭಿರಾರ್ಥಿಗಳಾದ ಮಹಿಮಾ ದೇಸಾಯಿ ಅತಿಥಿಗಳಿಗೆ ಸ್ವಾಗತಿಸಿದರೆ, ಕಲ್ಪನಾ ವೇಳಿಪ್ ನಿರೂಪಿಸಿದರು. ವಿನಂತಿ,ಕವಿತಾ, ವಿದ್ಯಾ ತರಬೇತಿಯ ಅನುಸಿಕೆ ಹೇಳಿದರು, ಅಕ್ಷತಾ ದೇಸಾಯಿ ವಂದಿಸಿದರು.
Leave a Comment