
ಜೋಯಿಡಾ –
ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದಾನೆ,
ಜುಲೈ 29 ಸೋಮವಾರದಿಂದ ತನಗೆ ಬಿ,ಎಸ್,ಎನ್,ಎಲ್,ನಿಂದ ಬರುವ ಸಂಬಳದ ಕುರಿತು ಈತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾನೆ, ಜೋಯಿಡಾದ ಬಿ,ಎಸ್,ಎನ್,ಎಲ್, ಮುಖ್ಯ ಕಚೇರಿಯ ಮುಂದೆಯೇ ಈತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು , ತನಗೆ ಸಂಬಳ ಸಿಗುವ ವರೆಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾನೆ,
ಬಿ,ಎಸ್,ಎನ್,ಎಲ್, ಇಂದ ಅನ್ಯಾಯ –
ಜೋಯಿಡಾ ತಾಲೂಕಿನ ಮಟ್ಟಿಗೆ ಬಿ,ಎಸ್,ಎನ್,ಎಲ್ ನೆಟವರ್ಕ ಬಿಟ್ಟರೇ ಇಲ್ಲಿ ಬೇರಾವುದೇ ನೆಟವರ್ಕ ಹಳ್ಳಿ ಪ್ರದೇಶದಲ್ಲಿ ಬರುವುದಿಲ್ಲ, ಅತ್ಯಂತ ಹೆಚ್ಚಿನ ಗ್ರಾಹಕರು ಜೋಯಿಡಾ ತಾಲೂಕಿನಲ್ಲಿ ಬಿ,ಎಸ್,ಎನ್,ಎಲ್, ಅನ್ನೇ ನಂಬಿಕೊಂಡಿದ್ದಾರೆ, ಆದರೆ ಬಿ,ಎಸ್,ಎನ್,ಎಲ್, ಇಂದ ಮಾತ್ರ ಸರಿಯಾದ ಪ್ರಕ್ರಿಯೇ ಇಲ್ಲವಾಗಿದೆ, ಬೇಕಾ ಬಿಟ್ಟಿ ನೆಟವರ್ಕ ತೆಗೆಯುವುದು, ಲ್ಯಾಂಡ್ ಲೈನ ಸಮಸ್ಯೆ, ಇಂಟರನೆಟ ಸಮಸ್ಯೆ ಜೋಯಿಡಾದಲ್ಲಿ ಹೆಚ್ಚಿದೆ, ಅಲ್ಲದೇ ಜೋಯಿಡಾ ತಾಲೂಕಿನಲ್ಲಿ ದುಡಿಯುವ ಗುತ್ತಿಗೆ ಆಧಾರಿತ ಕೆಲಸಗಾರರಿಗೆ ಕಳೆದ ಆರೇಳು ತಿಂಗಳಿಂದ ಹಣ ನೀಡದೇ ಬಿ,ಎಸ್,ಎನ್,ಎಲ್, ಸತಾಯಿಸುತ್ತಿದೆ, ಹೀಗಾಗಿ ಜೋಯಿಡಾ ತಾಲೂಕಿನಲ್ಲಿ ಬಿ,ಎಸ್,ಎನ್,ಎಲ್, ಗೆ ಎಲ್ಲಾ ಗ್ರಾಹಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಜಗದೀಶ ಗಾವಾಡಾ – ಬಿ,ಎಸ್,ಎನ್,ಎಲ್, ಗುತ್ತಿಗೆ ಆಧಾರಿತ ನೌಕರ.
ಸಂಭಂಳ ಸಿಗಬಹುದು ಎಂದು ಪರಿಚಯಿಸ್ಥರ ಹತ್ತಿರ ಸಾಲ ಮಾಡಿದ್ದೇನೆ, ಆದರೆ ಕಳೆದ ಎಂಟು ತಿಂಗಳಿಂದ ನಮಗೆ ವೇತನ ಸಿಕ್ಕಿಲ್ಲ, ಹೀಗಾದರೆ ನಾವೇನು ಮಾಡುವುದು, ಆದರಿಂದಲೇ ಇಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದೇನೆ, ನಮ್ಮ ಹಣ ನಮಗೆ ನೀಡುವವರೆಗೂ ಉಪವಾಸ ಮುಂದುವರೆಸುತ್ತೇನೆ.
Leave a Comment