ಪ್ರಕೃತಿಯವಿಕೊಪ ತಡೆಯಲು ಸಾಧ್ಯವಿಲ್ಲ. ಹೊನ್ನಾವರದ ಶರಾವತಿ ಎಡ ಬಲದಂಡೆ ಸಾರ್ವಜನಿಕರ ನಿದ್ರೆಗೆಡಿಸುತ್ತಿದ್ದ ನೆರೆ ಈ ಬಾರಿ ನಿರಿಕ್ಷೆ ಇಲ್ಲದ ಗ್ರಾಮಗಳಲ್ಲಿ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಈ ಹಿಂದೆ ಗುಡಂಬಾಳ ನದಿ ತುಂಬಿ ಹರಿದರೆ ಶುಕ್ರವಾರ ಮಂಕಿ ಸುತ್ತಮುತ್ತಲು ನೀರು ನುಗ್ಗಿ ಅನಾಹುತಗಳ ಸರಮಾಲೆ ಸೃಷ್ಟಿಸಿದೆ. ಗಣೇಶ ಚತುರ್ಥಿ ಸಮಭ್ರಮದ ಸಿದ್ದತೆಯಲ್ಲಿದ್ದಾಗ ಶುಕ್ರವಾರ ಬೆಳಗಿನಿಂದ ಎಡಬಿಡದೆ ಸುರಿಯಲಾರಂಭಿಸಿದ ಮಳೆಯು ತಾಲೂಕಿನ ಮಂಕಿ ಬಣಸಾಲೆ, ದೇವರಗದ್ದೆ, ಮಡಿ ಹಾಗೂ ಕೆಳಗಿನೂರು ಪಂಚಾಯತ ನಾಜಗಾರದಲ್ಲಿ ಹಠಾತ್ ಪ್ರವಾಹ ಉಂಟಾಗಿ ತೋಟ ಮನೆಗಳಿಗೆಲ್ಲ ನೀರು ನುಗ್ಗಿದ್ದು. ಪ್ರವಾಹ ಉಂಟಾಗಬಹುದಾದ ಸಣ್ಣ ನಿರೀಕ್ಷಯೂ ಇರದಿದ್ದ ಜನ ಒಮ್ಮಿಂದೊಮ್ಮೆಲೇ ನುಗ್ಗಿದ ಜಲಧಾರೆಯನ್ನು ಕಂಡು ಬೆಚ್ಚಿ ಬೆರಗಾಗಿದ್ದಾರೆ.

ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಒಂದೇ ಸಮನೆ ಮಳೆ ಸುರಿಯುತ್ತಿತ್ತಾದರೂ ಶುಕ್ರವಾರ ಮುಂಜಾನೆಯಿಂದ ಇನ್ನಷ್ಟು ಬಿರುಸಾಗಿದೆ ಅವ್ಯಾಹತವಾಗಿ ಸುರಿದ ಮಳೆಗೆ ಬೆಟ್ಟ ಗುಡ್ಡಗಳಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಸಿಕ್ಕ ಸಿಕ್ಕಲ್ಲೆಲ್ಲಾ ದಾರಿಮಾಡಿಕೊಂಡು ಹೊಲ ಗದ್ದೆಗಲಿಗೆ ಹಾನಿ ಮಾಡಿ ತಗ್ಗಿನಲ್ಲಿರುವ ಮನೆಗಳಿಗೂ ನುಗ್ಗಿ ಅನಾಹುತ ಸೃಷ್ಟಿಸಿದೆ ಬಣಸಾಲೆ, ದೇವರಗದ್ದೆ, ನಾಜಗಾರಗಳೆಲ್ಲ ನೆರೆ ಪರಿಸ್ಥಿತಿಯನ್ನು ಎದುರಿಸಿದ ಪ್ರದೇಶಗಳು ಬಹುತೇಕ ಎತ್ತರದ ಪ್ರದೇಶಗಳೇ ಆಗಿರುವುದರಿಂದ ಇಲ್ಲಿ ನೆರೆ ಬರಬಹುದೆನ್ನುವ ನಿರೀಕ್ಷೆ ಅಧಿಕಾರಿಗಳಿಗೆ ಹೋಗಲಿ ಆ ಭಾಗದ ಸಾರ್ವಜನಿಕರಲ್ಲಿಯೂ ಯಾರಿಗೂ ಇರಲಿಲ್ಲ. ಆದರೆ ಇಂದು ಸುರಿದ ಮಳೆ ಅಸಾಧ್ಯವನ್ನು ಸಾಧ್ಯವಾಗಿಸಿ ಪ್ರಕೃತಿ ಮುನಿದರೆ ಯಾವ ಸ್ಥಳವೂ ಸುರಕ್ಷಿತವಲ್ಲ ಎನ್ನುವ ಸಂದೇಶವನ್ನು ನೀಡಿದೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ರಾಷ್ಟಿçÃಯ ಹೆದ್ದಾರಿಯ ಎರಡೂ ಬದಿಯಲ್ಲಿಯೂ ಗದ್ದೆಗಳಲ್ಲಿ ಮಣ್ಣು ತುಂಬಿ ಸಾಲು ಸಾಲು ಕಟ್ಟಡಗಳು ತಲೆ ಎತ್ತಿರುವುದು, ಒಂದಡೆಯಾದರೆ ಹಳ್ಳಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿದುಹೋಗುವುದು ಅಸಾಧ್ಯ ಎನ್ನುವುದ ಮತ್ತೊಂದು ಕಾರಣವಾಗಿದೆ ಈ ಎರಡು ಕಾರಣದಿಂದ ದಿಡೀರ್ ಪ್ರವಾಹ ಉಂಟಾಗಿದೆ ಎನ್ನಬಹುದು. ನೀರಿನ ರಭಸಕ್ಕೆ ರಸ್ತೆಯ ಬದಿಯಲ್ಲಿ ಸುರಿದಿದ್ದ ನೂರಾರು ಲೋಡ್ ಮಣ್ಣು ಕೊಚ್ಚಿಹೋಗಿ ಗದ್ದೆಗಳಲ್ಲಿ ಶೇಖರಣೆಯಾಗಿದೆ ನೀರು ನುಗ್ಗಿದ ಮನೆಗಳಲ್ಲೂ ಕೆಸರು ತುಂಬಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ.

ದಿಡೀರ್ ನೀರು ನುಗ್ಗಿದ ಕಾರಣ ಮನೆಯೊಳಗಿದ್ದವರು ಜೀವ ಉಳಿಸಿಕೊಳ್ಳುವುದಕ್ಕೆ ಹೊರಗಡೆ ಬಂದಿದ್ದಾರಾದರೂ ಯಾವುದೇ ಬೆಲೆಬಾಳುವ ಉಪಕರಣಗಳನ್ನು ದವಸ ಧಾನ್ಯಗಳನ್ನು ಸುರಕ್ಷಿತ ಜಾಗದಲ್ಲಿಟ್ಟು ಬರಲು ಸಾಧ್ಯವಾಗಿಲ್ಲ ಅವೆಲ್ಲಾ ನೀರುಪಾಲಾಗಿರುವ ಸಾಧ್ಯತೆಯಿದೆ. ಮಂಕಿಯಲ್ಲುಂಟಾದ ಅನಿರೀಕ್ಷಿತ ಪ್ರವಾಹದ ವಿಡಿಯೋ ತುಣುಕುಗಳು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದವಾದರೂ ಹೆಚ್ಚಿನ ಜನರು ಅದನ್ನು ನಂಬಲೇ ಇಲ್ಲ. ಯಾಕೆಂದರೆ ಎಲ್ಲಿಯದೋ ವಿಡಿಯೋ ಪೋಟೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಮಾತಾಡಿಕೊಂಡವರೇ ಹೆಚ್ಚು ಆದರೆ ಕೊನೆಗೆ ನೆರೆ ಬಂದಿದ್ದು ನಿಜವೆಂದು ನಂಬುವ ಸ್ಥಿತಿ ಎದುರಾಯಿತು.ಒಟ್ಟಿನಲ್ಲಿ ರಸ್ತೆಯ ಪಕ್ಕದಲ್ಲಿ ಹೂಳೆತ್ತದೆ ಹಾಗೆಯೇ ಬಿಡುವುದು ಸೇರಿದಂತೆ ಗಟಾರ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದರ ಜೊತೆ ಐ.ಆರ್.ಬಿ ಅವೈಜ್ಷಾನಿಕ ರಸ್ತೆ ಅಗಲಕ್ಕೆ ಮುಂದಾಗಿರುವುದಕ್ಕೆ ಈ ಸ್ಥಿತಿ ಉದ್ಬವಿಸಿರುವುದು ಎನ್ನುವುದು ಎಲ್ಲರು ಒಪ್ಪಲೇ ಬೇಕು. ವಿಷಯ ತಿಳಿದು ಶಾಸಕ ಸುನೀಲ ನಾಯ್ಕ, ತಹಶೀಲ್ದಾರ ವಿವೇಕ ಶೆಣ್ವೆ, ಉಪತಹಶೀಲ್ದಾರ ಸತೀಶ ಗೌಡ ಪರಿಸ್ಥಿತಿ ಅವಲೋಕನ ನಡೆಸಿದರು. ಗುಳದಕೇರಿ ಸರ್ಕಾರಿ ಶಾಲೆಯಲ್ಲಿ ತುರ್ತುಗಂಜಿಕೇಂದ್ರ ತೆರೆದಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ಅಂದಾಜು ನಷ್ಟ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

Leave a Comment