
ಸಾರ್ವಜನಿಕರು ಅಡುಗೆ ತಯಾರಿಸಲು ಸಂಪೂರ್ಣ ಗ್ಯಾಸ್ ಮೇಲೆ ಅವಲಂಬಿತರಾಗಿದ್ದಾರೆ.ಸರಿಯಾಗಿ ಗ್ಯಾಸ್ ಪೂರೈಕೆ ಆಗದೆ ಜನರು ಪರದಾಡುವಂತ ಪರಿಸ್ತಿತಿ ಉದ್ಭವವಾಗಿದೆ. ಅಳನಾವರದ ಅನ್ನಪೂರ್ಣ ಗ್ಯಾಸ್ ಎಜೆನ್ಸಿ ಅವರು ಸಕಾಲಕ್ಕೆ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.ಗ್ರಾಹಕರು ಅಡುಗೆ ಅನಿಲ ಪೂರೈಕೆಗೆ ಅಗಷ್ಟ ೯ ರಂದು ಬುಕ್ ಮಾಡಿದ ಗ್ರಾಸ್ ಪೂರೈಕೆ ಇಂದಿನ ವರೆಗೂ ಆಗಿಲ್ಲ.ಆದರೆ ಅನಂತರ ಮಾಡಿದ ಕೆಲವರಿಗೆ ಗ್ಯಾಸ್ ಪೂರೈಕೆ ಮಾಡಲಾಗಿದೆ.ಬೇಕು ಬೇಗ ಕೊಡಿ ಎಂದು ಒತ್ತಾಯ ಮಾಡಿದರೆ ಹೆಚ್ಚಿಗೆ ಹಣ ಕೇಳುತ್ತಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.ಸಿಲಿಂಡರ್ ಕೇಳಲು ಹೋದರೆ ಮಂಗಳವಾರ ಬನ್ನಿ ಎಂದು ಸತಾಯಿಸುತ್ತಾರೆ.

*-“ಗ್ಯಾಸ್ ಬುಕ್ ಮಾಡಿ ೨೩ ದಿನಗಳು ಕಳೆದರೂ ಸಿಲಿಂಡರ್ ಕೊಡುತ್ತಿಲ್ಲ.ಮತ್ತೆ ಮತ್ತೆ ಕೇಳಿದರೆ ಬುಕ್ ರಜಿಸ್ಟರ್ ಆಗಿಲ್ಲ,ಸ್ಟಾಕ್ ಇಲ್ಲ ಎಂಬ ಕುಂಟು ನೆಪ ಹೇಳುತ್ತಾರೆ.ಗ್ರಾಹಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಂಡು ಸಮಯಕ್ಕೆ ಸರಿಯಾಗಿ ಗ್ಯಾಸ್ ಸಿಲಿಂಡರ್ ಸಿಗುವಂತೆ ವ್ಯವಸ್ಥೆ ಮಾಡಿ ಗ್ರಾಹಕರ ಅಳಲು ಪರಿಹರಿಸಬೇಕು.”**ಕಾಸೀಂ ಹಟ್ಟಿಹೊಳಿ,ಲಿಂಗನಮಠ ,ಗ್ರಾಹಕ.*
Leave a Comment