
ಜೋಯಿಡಾ –
ನಮ್ಮ ಸಂಘ 2019 ನೇ ಸಾಲಿನಲ್ಲಿ 19 ಲಕ್ಷ ಲಾಭಗಳಿಸಿದೆ ಅದಕ್ಕೆ ಮೂಲ ಕಾರಣ ಗ್ರಾಹಕರೇ, ಈ ವರ್ಷ 1 ಲಕ್ಷ ಬೆಳೆಸಾಲ ಮನ್ನಾ ಆಗಿದ್ದರಿಂದ ರೈತರಿಗೆ ಲಾಭವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಹೇಳಿದರು.
ಅವರು ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ, ಸಾಲ ಮನ್ನಾದ ಬಗ್ಗೆ ಯಾವ ರೈತರಿಗೂ ಗೊಂದಲ ಬೇಡ , ಎಲ್ಲಾ ರೈತರಿಗೂ ಸಾಲ ಮನ್ನಾದ ಹಣ ಸಿಗಲಿದೆ, ಈಗಾಗಲೇ ಹಲವರಿಗೆ ಸಾಲ ದೊರೆತಿದೆ, ನಿಮಗೆ ಗೊಂದಲ ಇದ್ದರೆ ಸಂಘಕ್ಕೆ ಬಂದು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಕಟಬಾಕಿ ದಾರರು ಸಂಘದ ವಾರ್ಷಿಕ ಸಭೆಗೆ ಹಾಜರಾಗಬಹುದು ಆದರೆ ಹಾಜರಾದ ಬಗ್ಗೆ ಸಹಿ ಹಾಕುವ ಹಾಗೆ ಇಲ್ಲ ಇದು ಸರ್ಕಾರದ ಆದೇಶ ಎಂದರು. ದಯವಿಟ್ಟು ಸಂಘದ ಸದಸ್ಯರು ಕಟಬಾಕಿ ಮಾಡಿಕೊಳ್ಳಬೇಡಿ ,ಕಟಬಾಕಿ ಆದರೆ ಸಾಲಮನ್ನಾ , ಬಡ್ಡಿಮನ್ನಾದಂತ ಸರ್ಕಾರದ ಯೋಜನೆಗಳು ನಿಮಗೆ ಸಿಗುವುದಿಲ್ಲ, ಸಂಘ ಕೃಷಿ ಮತ್ತು ಸಾಲ ವಿಭಾಗದಲ್ಲಿ ಇನ್ನೂ ಹೆಚ್ಚಿನ ಲಾಬ ಗಳಿಸುವ ಉದ್ದೇಶ ಹೊಂದಿದೆ ಎಂದರು. ಸಂಘ 751 ಸದಸ್ಯರನ್ನು ಹೊಂದಿದ್ದು,154,79 ಲಕ್ಷ ಶೇರನ್ನು ಹೊಂದಿದೆ ಎಂದರು.
ಈ ಸಭೆಯಲ್ಲಿ ಸಾಲ ಮನ್ನಾ, ಸಂಘದ ವ್ಯವಹಾರ, ಹಾಗೂ ಕೃಷಿ ಬಳಕೆ ವಸ್ತುಗಳ ಬಗ್ಗೆ ,ಹಾಗೂ ನಂದಿಗದ್ದೆಯಲ್ಲಿ ಹೊಸ ಸಂಘದ ಕಟ್ಟಡ ಕಟ್ಟುವ ಬಗ್ಗೆ ಚರ್ಚೆಯಾಯಿತು, ತದ ನಂತರ ಸಂಘದ ಎಲ್ಲಾ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು, ಸಂಘದ ಸದಸ್ಯರ ಮಕ್ಕಳಲ್ಲಿ ಸಾಂಸ್ಕ್ರತಿಕ ವಿಭಾಗ ಮತ್ತು ಕ್ರೀಡಾ ವಿಭಾಗದಲ್ಲಿ ಜಿಲ್ಲಾ ಮಟ್ಟ ,ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರೋತ್ಸಾಹ ಧನ ನೀಡಲಾಯಿತು.
ಈ ಸಭೆಯಲ್ಲಿ ಸಂಘದ ನಂದಿಗದ್ದಾ ಗ್ರಾಮ ಪಂಚಾಯತ ಅದ್ಯಕ್ಷ ಅರುಣ ದೇಸಾಯಿ, ಕೆ,ವಿ,ಜಿ,ಬಿ ಬ್ಯಾಂಕ್ ನ ವ್ಯವಸ್ಥಾಪಕರು, ಚುನಾಯಿತ ಸದಸ್ಯರು, ಮಾಜಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.


Leave a Comment