
ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ ಬಂದಿದ್ದಾರೆ.ಇದರಲ್ಲಿ ಅನೇಕ ವ್ಯಾಧಿಗಳನ್ನು ವಾಸಿಮಾಡುವ ಗುಣವಿದ್ದು,ಇದನ್ನು “ಮಾನವನ
ಆಪ್ತ ಮಿತ್ರ”ಎಂತಲೂ ಕರೆಯುತ್ತಾರೆ.
ಮುಳ್ಳು ಮುತ್ತುಗದಲ್ಲಿ ಹತ್ತಾರು ಪ್ರಭೇದಗಳಿವೆ. ಇದು ಸುಮಾರು 30 ರಿಂದ 60 ಅಡಿಗೂ ಹೆಚ್ಚು ಬೆಳೆಯುತ್ತೆ. ಮಾರ್ಚ್ ತಿಂಗಳಲ್ಲಿ, ಮರದಲ್ಲಿ ಎಲೆಗಳು ಉದರಿ, ಚಿಗರೊಡೆದು ಕೆಂಪು ಬಣ್ಣದ ಹೂವುಗಳಿಂದ ಕಂಗೊಳಿಸುವುದನ್ನು ನೋಡಲು ತುಂಬಾ ನಯನ ಮನೋಹರವಾಗಿರುತ್ತೆ.ಆದರೆ ಮರವೆಲ್ಲ ಮುಳ್ಳು ತುಂಬಿರುತ್ತೆ.
ಅನೇಕ ಹೆಣ್ಣುಮಕ್ಕಳು 18 ರಿಂದ 20 ವರ್ಷವಾದರೂ ವಯಸ್ಸಿಗೆ ಬಂದಿರುವುದಿಲ್ಲ.
ಅಂತಹ ಹೆಣ್ಣುಮಕ್ಕಳಿಗೆ ಮುಳ್ಳು ಮುತ್ತುಗದ ಮೂರ್ನಾಲ್ಕು ಎಲೆಗಳನ್ನು ತಂದು,ನುಣ್ಣಿಗೆ ಅರೆದು, ಉಗರು ಬೆಚ್ಚಗಿನ ಹಸುವಿನ ಹಾಲಿನಲ್ಲಿ ಕಲಸಿ ಕುಡಿಸಿದರೆ ಬೇಗನೆ “ಋತಮತಿ”ಯಾಗುತ್ತಾರೆ.
ಅನೇಕರಿಗೆ ಋತಸ್ರಾವದ ಸಮಯದಲ್ಲಿ ಹೊಟ್ಟೆನೋವು ಬರುತ್ತೆ.ಆಗ ಮುಳ್ಳು ಮುತ್ತುಗದ ಎಲೆಗಳ ರಸ 30ml ರಿಂದ 40ml ನಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಕುಡಿದರೆ ಶೀಘ್ರ ಹೊಟ್ಟೆ ನೋವು ಗುಣವಾಗುತ್ತೆ.
15ml ಎಲೆಗಳ ರಸಕ್ಕೆ 15 ml ಹರಳೆಣ್ಣೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೂ ಸಹಾ ಹೊಟ್ಟೆನೋವು ಗುಣವಾಗುತ್ತೆ.
ಮುಳ್ಳು ಮುತ್ತುಗದ ತೊಗಟೆಯನ್ನು ತಂದು, ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಚಿಟಿಕೆ ಅರಸಿಣ ಪುಡಿ ಸೇರಿಸಿ, ಉಗರು ಬೆಚ್ಚಗಿನ ಕಷಾಯದಿಂದ ಯೋನಿ ತೊಳೆದುಕೊಂಡರೆ,
ತುರಿಕೆ,ಹುಣ್ಣು,ಉಷ್ಣತೆಯಿಂದ ಉಕ್ಕಿದ ಗುಳ್ಳೆಗಳು ವಾಸಿಯಾಗುತ್ತೆ.
ಒಂದು ಹಿಡಿ ಹೂವುಗಳನ್ನು ತಂದು ಅದಕ್ಕೆ ಐದಾರು ಕಾಳು ಮೆಣಸು ಸೇರಿಸಿ ನುಣ್ಣಗೆ ಅರೆದು ಗೋಲಿ ಗಾತ್ರ ಉಂಡೆಗಳು ಮಾಡಿ, ಬೆಳಿಗ್ಗೆ ಸಂಜೆ
ಖಾಲಿ ಹೊಟ್ಟೆಯಲ್ಲಿ ಒಂದು ವಾರ ಒಂದೊಂದು ನುಂಗಿದರೆ ಮಕ್ಕಳಿಲ್ಲದ ಸ್ತ್ರೀಯರಿಗೆ ಸಂತಾನ ಫಲ ದೊರೆಯುತ್ತೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.ಇದರ ಎಲೆಗಳ ರಸ,ಒಂದು ವಾರ 30ml ನಂತೆ ಸೇವಿಸಿದರೂ ಸಹ ಬಂಜೆತನ ದೂರವಾಗುತ್ತೆ.
ಮೂರ್ನಾಲ್ಕು ಎಲೆಗಳನ್ನು ತಂದು ಐದಾರು ಸಣ್ಣ ಈರುಳ್ಳಿ ಜೊತೆಗೆ ತೆಂಗಿನ ಎಣ್ಣೆಯಲ್ಲಿ ಉರಿದು, ಸೇವಿಸುತ್ತಾ ಬಂದರೆ ಮಕ್ಕಳ ತಾಯಂದಿರಲ್ಲಿ ಎದೆ ಹಾಲು ಹೆಚ್ಚುತ್ತೆ.
ಮುಳ್ಳು ಮುತ್ತುಗದ ಎಲೆಗಳನ್ನು ತಂದು, ಅದಕ್ಕೆ ಚಿಟಿಕೆ ಅರಸಿಣ ಸೇರಿಸಿ ನುಣ್ಣಗೆ ಅರೆದು,ಮೈಗೆಲ್ಲ ಲೇಪನ ಮಾಡಿಕೊಂಡು 1/2 ಗಂಟೆಯ ನಂತರ ಸ್ನಾನ ಮಾಡಿದರೆ,ನವೆ,ದದ್ದು,ಸೆಕೆ ಗುಳ್ಳೆಗಳು ವಾಸಿಯಾಗುತ್ತೆ.
ಮುಳ್ಳು ಮುತ್ತುಗದ ಬೇರನ್ನು ತಂದು,ನಿಂಬೆಹಣ್ಣಿನ ರಸದಲ್ಲಿ ಗಂಧ ಅರೆದು,ಹುಳುಕಡ್ಡಿ, ಗಜಕರ್ಣದ ಮೇಲೆ ಲೇಪನ ಮಾಡಿದರೆ ಬೇಗನೆ ಗುಣವಾಗುತ್ತೆ.
ತೊಗಟೆಯನ್ನು ತಂದು ಸುಟ್ಟು ನುಣ್ಣಿಗೆ ಪುಡಿ ಮಾಡಿ,ವಸ್ತ್ರಗಾಲಿತ ಚೂರ್ಣಕ್ಕೆ ನಾಟಿ ಹಸುವಿನ ತುಪ್ಪ ಕಲಸಿ,ಕಣ್ಣಿಗೆ ಕಾಡಿಗೆಯಂತೆ ಹಚ್ಚಿಕೊಂಡರೆ,ಕಣ್ಣಿನಲ್ಲಿ ನೀರು ಸುರಿಯುವುದು, ಕಣ್ಣಿನ ಉರಿ,ಕಣ್ಣು ಕೆಂಪಗೆ ಇರುವುದು ಶಮನವಾಗಿ, ಕಣ್ಣಿನ ದೃಷ್ಠಿ ಹೆಚ್ಚುತ್ತೆ.

50ml ಎಲೆಗಳ ರಸಕ್ಕೆ 20ml ಜೇನುತುಪ್ಪ ಕಲಸಿ ಸೇವಿಸಿದರೆ, ಹೊಟ್ಟೆಯಲ್ಲಿನ ಹುಳುಗಳು ಮಲದಲ್ಲಿ ಹೊರ ಬರುತ್ತವೆ.
ಎಲೆಯ ರಸ 30ml, ಬೆಳ್ಳುಳ್ಳಿ ರಸ 30ml ಒಂದು ಲೋಟ ಅಕ್ಕಿ ಗಂಜಿಯಲ್ಲಿ ಕಲಸಿ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳು ಕುಡಿಯುತ್ತಾ ಬಂದರೆ ಅಸ್ತಮಾ ಗುಣವಾಗುತ್ತೆ.
ಹೂವುಗಳನ್ನು ನುಣ್ಣಿಗೆ ಅರೆದು, ಅದಕ್ಕೆ ಸಮನಾಗಿ ಕೊಬ್ಬರಿ ಹಾಲು ಹಾಗೂ ಚಿಟಿಕೆ ಅರಸಿಣ ಕಲಸಿ ಮುಖಕ್ಕೆ ಲೇಪನ ಮಾಡಿಕೊಂಡು, ಒಂದು ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ಮುಖ ತೊಳೆದುಕೊಂಡರೆ, ಮೊಡವೆಗಳು, ಮಚ್ಚೆಗಳು ಮಾಯವಾಗಿ, ಮುಖ ಕಾಂತಿಯಿಂದ ಹೊಳೆಯುತ್ತೆ.
ಒಂದು ಎಲೆಯಲ್ಲಿ ಮೂರು ಕಾಳು ಮೆಣಸನಿಟ್ಟು, ಜಗಿದು ತಿಂದರೆ ಶೀತ, ನೆಗಡಿ, ಕೆಮ್ಮು, ಕಫ ಗುಣ ಕಾಣುತ್ತೆ.
ಐದಾರು ಹೂವುಗಳು,3 ಬಾದಾಮಿ,1/2 ಚಮಚ ಗಸಗಸೆ,1/3 ಚಮಚ ಉದ್ದಿನಬೇಳೆ ನುಣ್ಣಿಗೆ ಅರೆದು, ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಕುಡಿದರೆ ಕಾಮವಾಂಛೆ ಹೆಚ್ಚುತ್ತೆ.
ಮುಳ್ಳು ಮುತ್ತುಗದ ಔಷಧೀಯ ಗುಣಗಳು ಅಪಾರವಾದದ್ದು
ಗೆಳೆಯರೆ ವಂದನೆಗಳು
Leave a Comment