• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಧಾರ್ಮಿಕ ಆಚರಣೆಯ ಸುತ್ತ,ನಮ್ಮ ಆರೋಗ್ಯ

May 30, 2020 by Sanjit Hegde Leave a Comment

ನಮ್ಮ ಪ್ರತಿಯೊಂದು ಆಚರಣೆಯಲ್ಲೂ ಒಂದು ಕಾರಣವಿರುತ್ತದೆ ಎಂಬುದು ಸುಳ್ಳಲ್ಲ.ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಆಧ್ಯಾತ್ಮ ಮತ್ತು ವೈಜ್ಞಾನಿಕವಾದ ಕಾರಣವಿದೆ. ಧಾರ್ಮಿಕ ಆಚರಣೆಗಳಿಂದ ನಮಗೆ ನಂಬಿಕೆ ಮತ್ತು ಆರೋಗ್ಯ ಎರಡು ದೊರೆಯುತ್ತದೆ. ನಮ್ಮ ಆಚರಣೆಯಲ್ಲಿ ಬೆಳ್ಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲುಗುವವರೆಗೂ ಆಚರಣೆಗಳಿವೆ,ಆರೋಗ್ಯವು ಇವೆ.
           ನಾವು ಬೆಳ್ಳಿಗ್ಗೆ ಸೂರ್ಯೋದಯ ಸಮಯದಲ್ಲಿ ಏಳಬೇಕು ಎನ್ನುತ್ತಾರೆ.ನಾವು ಆ ಸಮಯದಲ್ಲಿ ಏಳುವುದರಿಂದ ಸೂರ್ಯನ ಅಮೂಲ್ಯವಾದ ವಿಟಮಿನ್ D ದೊರೆಯುವುದರ ಜೊತೆಗೆ ಸೂರ್ಯ ನಮಸ್ಕರದಂತ ಯೋಗಾಸನಗಳನ್ನು ಮಾಡುವುದರಿಂದ ಸೂರ್ಯನ ಅನುಗ್ರಹ ಮತ್ತು ದೇಹದ ಆರೋಗ್ಯ ಪ್ರಾಪ್ತಿಯಾಗುತ್ತದೆ.ನಾವು ಬೆಳ್ಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದು ತಪ್ಪು ಏಕೆಂದರೆ ಬಾಯಿಯಲ್ಲಿರುವ ರೋಗಾಣುಗಳು ಹೊಟ್ಟೆಗೆ ಹೋಗುತ್ತದೆ. ಎದ್ದ ತಕ್ಷಣ ಸ್ನಾನ ಮಾಡಿ, ನಮ್ಮನು ನಾವು ಶುಚಿಯಾಗಿಸಿ ದೇವರ ಪೂಜೆ ಮಾಡಬೇಕು.
           ತುಳಸಿ ಗಿಡ, ಅರಳಿ ಮರವನ್ನು ಸುತ್ತುವುದು ಒಂದು ಧಾರ್ಮಿಕ ಆಚರಣೆ. ಹೀಗೆ ಮಾಡುವುದರಿಂದ ನಮಗೆ ಆಕ್ಸಿಜನ್ ಪ್ರಮಾಣ ಅಧಿಕವಾಗಿ ದೊರೆಯುತ್ತದೆ ಮತ್ತು ನಮ್ಮ ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.ನಾವು ಅಂಗಳವನ್ನು ಸಗಣಿ ಹಾಕಿ ತೊಳೆಯುವುದು ಏಕೆ ಎಂದು ತಿಳಿದಿದೆಯೇ? ಸಗಣಿಯಲ್ಲಿ ಔಷದಿ ಗುಣಗಳಿವೆ. ಅದು ಅಂಗಳದಲ್ಲಿರುವ ಕಿಟಾಣುಗಳನ್ನು ಕೊಲ್ಲುತ್ತದೆ ಮತ್ತು ಅಂಗಳ ಸ್ವಚ್ಛ ಶುಚಿಯಾಗಿರುತ್ತದೆ.
           ಮುಸ್ಸಂಜೆ ವೇಳೆಯಲ್ಲಿ ದೇವರಿಗೆ ದೀಪ ಹಚ್ಚಿ ಜಪ ತಪಗಳನ್ನು ಮಾಡುತ್ತಾರೆ. ದೀಪ ಹಚ್ಚಿ ಧ್ಯಾನ ಮಾಡುವುದರಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಮತ್ತು ಮನಸ್ಸಿನ ಚಂಚಲತೆ ನಿಲ್ಲುತ್ತದೆ. ಊಟಕ್ಕೆ ಕುಳಿತಾಗ ಮಾತನಾಡದೆ ಊಟ ಮಾಡಬೇಕು. ಆಧ್ಯಾತ್ಮವಾಗಿ ನೋಡಿದಲ್ಲಿ,ಇದು ಅನ್ನಪೂರ್ಣೇಶ್ವರಿಗೆ ನೀಡುವ ಗೌರವ. ವೈಜ್ಞಾನಿಕವಾಗಿ ನೋಡಿದಲ್ಲಿ,ನಾವು ಊಟ ಮಾಡುವಾಗ ಮತನಾಡಿದಲ್ಲಿ ಅದು ಅನ್ನನಾಳ ತೊರೆದು ಬೇರೆಡೆ ಹೋಗಬಹುದಾಗಿರುತ್ತದೆ.
           ಆದರೆ ಈ ಆಚರಣೆಗಳು ಈಗ ಪಾಲನೆ ಮಾಡುವುದು ಕಡಿಮೆಯಾಗಿದೆ.ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.ಇಂತಹ ಹಲವಾರು ಆಚರಣೆಗಳನ್ನು ಪಾಲನೆ ಮಾಡುವುದರಿಂದ ನಮ್ಮ ಆರೋಗ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯುತ್ತಮವಾಗಿರುತ್ತದೆ.ಈಗಿನ ಪರಿಸರದಲ್ಲಿ ನಮ್ಮ ಆರೋಗ್ಯ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, ಸಂಸ್ಕೃತಿ-ಕಲೆ Tagged With: ಅನ್ನನಾಳ ತೊರೆದು, ಆಧ್ಯಾತ್ಮ, ಜಪ ತಪ, ದೇವರಿಗೆ ದೀಪ ಹಚ್ಚಿ, ದೇಹದ ಆರೋಗ್ಯ, ಧಾರ್ಮಿಕ ಆಚರಣೆ, ನಮ್ಮ ಆರೋಗ್ಯ, ಪ್ರತಿಯೊಂದು ಆಚರಣೆ, ಬೆಳ್ಳಿಗ್ಗೆ ಸೂರ್ಯೋದಯ ಸಮಯ, ಮನಸ್ಸಿನ ಚಂಚಲತೆ, ಮುಸ್ಸಂಜೆ ವೇಳೆಯಲ್ಲಿ, ರಾತ್ರಿ ಮಲುಗುವವರೆಗೂ, ವೈಜ್ಞಾನಿಕ, ಸಗಣಿಯಲ್ಲಿ ಔಷದಿ ಗುಣ, ಸುತ್ತ, ಸೂರ್ಯನ ಅನುಗ್ರಹ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar