ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ “ಶ್ವಾಸ್ ಟೀ” ಯನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.*
*ಈ ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.*

*ಈ ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು ಜಿಲ್ಲೆಯಲ್ಲಿ ಇಂತಹ ಉತ್ಪನ್ನವನ್ನು ತಯಾರಿಸುವ ಆತ್ಮವಿಶ್ವಾಸದೊಂದಿಗೆ ಈ ಉತ್ಪನ್ನ ಆರಂಭ ಮಾಡಿದ್ದು ಯಶಸ್ಸು ಸಾಧಿಸಿ ಹಾಗೂ ಜಿಲ್ಲೆಯ ಜನತೆಗೆ ಈ ಉತ್ಪನ್ನಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.*
*ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ (ಪಚ್ಚು) ನಾಯ್ಕ , ಮಂಡಲಾಧ್ಯಕ್ಷ ಹೇಮಂತ್ ಕುಮಾರ್ ಗಾಂವ್ಕರ್, ಹೊನ್ನಾವರ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕಾಮತ್ ಟಿ ಡೀಪೋ ಮಾಲಿಕರಾದ ದಾಮೋದರ ಕಾಮತ್, ಪ್ರಸಾದ ಕಾಮತ್, ಶಾಸಕರ ಆಪ್ತ ಕಾರ್ಯದರ್ಶಿ ಅಶೋಕ್ ಭಟ್ ಉಪಸ್ಥಿತರಿದ್ದರು.*
Leave a Comment