ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ ಕುಮಕ್ಕು, ಹಾಗೂ ಕಣ್ಣ ತಪ್ಪಿಸಿ ಮರಳು ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಮಧ್ಯೆ ಮೇ ತಿಂಗಳಲ್ಲಿ ೧೫ ದಿನಗಳ ಕಾಲ ಪರವಾನಗಿ ನೀಡಿ ನಂತರ ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ಮಧ್ಯೆ ಮತ್ತೆ ಅಕ್ರಮ ಮರಳು ಸಾಗಾಟ ತಡೆಯಬೇಕು. ಪರವಾನಗಿ ಇರುವಂತಹ ವಾಹನಗಳಿಗೆ ಮರಳು ಸಾಗಾಟಕ್ಕೆ ಅನುಮತಿ ನೀಡಿವಂತೆ ಮರಳು ಗುತ್ತಿಗೆದಾರ ಸಂಘ ಹಾಗೂ ಟಿಪ್ಪರ ಮಾಲಿಕರ ಸಂಘ ಮನವಿ ಮಾಡಿತ್ತು. ಈ ಮಧ್ಯೆ ಪಿಎಸೈ ಶಶಿಕುಮಾರ ನೇತ್ರತ್ವದ ತಂಡ ಬುಧವಾರ ತಡರಾತ್ರಿ ಕಾಸರಕೋಡ ಸಮೀಪ ದಾಳಿ ನಡೆಸಿ ೨ ಟಿಪ್ಪರ ವಾಹನ ಕೆ.ಎ.47 1705, ಕೆ.ಎ. 47 9106 ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಬೇಕಾದವರು ಯಾರು? ಈ ಹಿಂದೆ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ ಮರಳು ಲಾರಿಗಳನ್ನು ಪ್ರಕರಣ ದಾಖಲಿಸಿದ ಉದಾಹರಣಿ ಇದ್ದರೂ ಇತ್ತೀಚಿನ ದಿನದಲ್ಲಿ ಇಂತಹ ಪ್ರಕರಣ ದಾಖಲಾದಾಗ ಕಂದಾಯ ಅಥವಾ ಗಣಿ ಇಲಾಖೆಗೆ ಹಸ್ತಾಂತರ ಮಾಡಲು ಉತ್ಸುಕತೆ ತೋರುತ್ತಿದ್ದಾರೆ. ಕಂದಾಯ ಅಥವಾ ಗಣಿ ಇಲಾಖೆಯ ಅಧಿಕಾರಿಗಳು ಕಡಿಮೆ ಮೊತ್ತದಲ್ಲಿ ದಂಡ ವಿಧಿಸುದರಿಂದ ಇಂತಹ ಅಕ್ರಮ ಮರಳುಗಾರಿಕೆ ವ್ಯಾಪಕವಾಗಲು ಕಾರಣವಾಗಿದೆ. ಆದರೆ ಈ ಪ್ರಕರಣವನ್ನು ಯಾರು ಸ್ವೀಕರಿಸಲಿದ್ದಾರೆ ಎನ್ನುವುದು ಗುರುವಾರ ೬ ಗಂಟೆಯವರೆಗೂ ನಿರ್ಣಯವಾಗದೇ ಇರುವುದರಿಂದ ಕೂತೂಹಲಕ್ಕೆ ಕಾರಣವಾಗಿದೆ,

Leave a Comment