• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬದುಕನ್ನು ನರಕವಾಗಿಸಿದ ಇಲಿ ಜ್ವರ.. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಅಸಹಾಯಕ ಯುವಕ

October 7, 2020 by Lakshmikant Gowda Leave a Comment

ಬದುಕೆಂದರೆ ಹಾಗೇ ಅದೊಂದು ಅನಂತ ತಿರುವುಗಳ ಹಾದಿಯ ಪಯಣ. ಯಾವ ತಿರುವಿನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವು ಸಲ ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವವರ ಬಾಳಲ್ಲಿ ಸಂತಸದ ಹೊನಲು ಹರಿಯಬಹುದು. ಅಥವಾ ಸರಾಗವಾಗಿ ಸಾಗುತ್ತಿದ್ದ ಬದುಕಿನ ಬಂಡಿ ಸವಾಲುಗಳ ಸರಮಾಲೆಯನ್ನು ಸುತ್ತಿಕೊಂಡು ನರಳಬಹುದು. 28 ಹರೆಯದ ಯುವಕ ಅಪ್ಸರಕೊಂಡದ ಮಹೇಂದ್ರ ಮಂಜುನಾಥ ತಾಂಡೇಲ್ ಬದುಕಿನಲ್ಲಿ ಘಟಿಸಿದ್ದು ಮಾತ್ರ ಎರಡನೇಯದ್ದೇ.

03 06 hnr 1
03 06 hnr 2


ಎಲ್ಲರಂತೆಯೇ ಸಾದಾ ಸೀದಾ ಬದುಕುತ್ತಿದ್ದ ಮಹೇಂದ್ರ ಇದ್ದಕ್ಕಿದ್ದಂತೆ ಜ್ವರದಿಂದ ಬಳಲುವುದಕ್ಕೆ ಸುರುಮಾಡಿದ. ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ಪಡೆದರೂ ಪರಿಣಾಮಕಾರಿಯಾಗದ ಹಿನ್ನಲೆಯಲ್ಲಿ ತಾಲೂಕಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಇಲಿಜ್ವರದಿಂದ ಯುವಕನ ಲಿವರ್, ಕಿಡ್ನಿ, ಶ್ವಾಸಕೋಶಕ್ಕೆ ತೀವೃ ಹಾನಿಯಾಗಿದ್ದು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದಾಗ ಅಂಬುಲೆನ್ಸ್‍ಗೂ ಹಣವಿಲ್ಲದಿದ್ದಾಗ ಸಂಬಂಧಿಕರು ಹಣ ಹೊಂದಿಸಿ ಕಳುಹಿಸಿಕೊಟ್ಟಿದ್ದರು. ಇತ್ತ ಮಗನ ಅನಾರೋಗ್ಯದಿಂದ ಚಿಂತಾಕ್ರಾಂತರಾಗಿದ್ದ ತಂದೆಗೆ ಸೆಪ್ಟಂಬರ್ 27 ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ.
ತಂದೆಯ ಸಾವಿನ ಬಗ್ಗೆಯೂ ತಿಳಿಯದ ಮಹೇಂದ್ರ ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. ಈಗಾಗಲೇ ಆಸ್ಪತ್ರೆಯ ಖರ್ಚು ನಾಲ್ಕು ಲಕ್ಷ ದಾಟಿದ್ದು ಮಹೇಂದ್ರನ ಬಡಕುಟುಂಬಕ್ಕೆ ವೆಚ್ಚ ಭರಿಸುವ ಶಕ್ತಿ ಇಲ್ಲ. ಸಹೃದಯಿಗಳು ಆರ್ಥಿಕ ಸಹಾಯ ಮಾಡುವ ಮೂಲಕ ಇವರ ಕಷ್ಟದಲ್ಲಿ ಜೊತೆಯಾಗಲು ಮನವಿ ಮಾಡಿಕೊಂಡಿದ್ದಾರೆ. ಸಹಾಯಮಾಡಲಿಚ್ಚಿಸುವವರು ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಶಾಖೆ ಅಕೌಂಟ್ ನಂಬರ್ : 03022200137455 -ಐ.ಎಪ್.ಎಸ್.ಸಿ ಕೋಡ್ : ಎಸ್.ವೈ.ಎನ್.ಬಿ 0000302 ಮೊಬೈಲ್ : 9739483607 ಹಣ ಸಂದಾಯ ಮಾಡಬಹುದು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: Adolescent Youth, Blood Test in Tulips, Fatigue, Fever, Kidney, Life Wagging Challenge, Liver, Lung Damage from Liver, ಅಪ್ಸರಕೊಂಡದ ಮಹೇಂದ್ರ, ಇಲಿಜ್ವರದಿಂದ ಯುವಕನ ಲಿವರ್, ಕಿಡ್ನಿ, ಜ್ವರದಿಂದ ಬಳಲುವುದಕ್ಕೆ, ತಾಲೂಕಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಬದುಕಿನ ಬಂಡಿ ಸವಾಲುಗಳ ಸರಮಾಲೆ, ಮಂಜುನಾಥ ತಾಂಡೇಲ್, ಶ್ವಾಸಕೋಶಕ್ಕೆ ತೀವೃ ಹಾನಿ, ಹರೆಯದ ಯುವಕ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...