• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾರ್ವಜನಿಕ ಜೀವನದಲ್ಲಿ ಸೋಲಿನ ಮುಖವನ್ನೇ ಕಾಣದ ಟಿ.ಎಸ್.ಹೆಗಡೆ ಸಾವಿನೊಂದಿಗಿನ ಸೆಣಸಾಟದಲ್ಲಿ ಮಾತ್ರ ಮಂಡಿಯೂರಿಬಿಟ್ಟರು..!

October 29, 2020 by Lakshmikant Gowda Leave a Comment

(ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾಗಿ ಚುನಾಯಿತರಾದ ಕೆಲವೇ ಹೊತ್ತಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ಹಠವಾದಿ)

ಹೊನ್ನಾವರ – “ಆಸ್ಪತ್ರೆಯಲ್ಲಿಯೇ ಇದ್ದಿದ್ದರೆ ಬದುಕಿರುತ್ತಿದ್ದರೇನೋ ಮಾರ್ಕೆಟಿಂಗ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾಗಿಯಾಗುವ ಹಠಕ್ಕೆ ಬಿದ್ದು ಜೀವವನ್ನೇ ಕಳೆದುಕೊಳ್ಳುವಂತಾಯ್ತೆ. ಛೇ ವಿಧಿ ಈ ಪರಿಯಲ್ಲಿ ಖುಷಿ ಕೊಟ್ಟು ಜೀವ ಕಸಿದುಕೊಳ್ಳಬಾರದಿತ್ತು” ಇದು ಹೊನ್ನಾವರ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದು ಅವಿರೋಧವಾಗಿ ಅಧ್ಯಕ್ಷಗಾದಿಗೇರಿದ ಕೆಲವೇ ಹೊತ್ತಲ್ಲಿ ಸಾವಿನ ಮನೆ ಕದ ತಟ್ಟಿದ ತಿಮ್ಮಣ್ಣ ಸಂಭಯ್ಯ ಹೆಗಡೆ ಕುರಿತು ತಾಲೂಕಿನ ಜನರಾಡುತ್ತಿರುವ ಮಾತು.

IMG 20201027 WA0097


ಮಂಗಳವಾರ ಸಂಜೆ ಹೃದಯಾಘಾತಕ್ಕೆ ತುತ್ತಾಗಿ ಇಹಲೋಕ ಯಾತ್ರೆ ಮುಗಿಸಿದ ಟಿ.ಎಸ್.ಹೆಗಡೆ ಸೋಮವಾರ ಸಂಜೆಯಷ್ಟೇ ಕೊರೊನಾಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಟಿ.ಎಸ್.ಹೆಗಡೆ ಇನ್ನಿಲ್ಲ ಎನ್ನುವ ಆಘಾತಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಸುರುವಾದಾಗ ಅದನ್ನು ನಂಬಿದವರಿಗಿಂತ ಅಲ್ಲಗೆಳೆದವರೇ ಹೆಚ್ಚು. ಯಾಕೆಂದರೆ ಮದ್ಯಾಹ್ನದ ಹೊತ್ತಿಗಾಗಲೇ ಟಿ.ಎಸ್.ಹೆಗಡೆ ಟಿ.ಎ.ಪಿ.ಸಿ.ಎಂ.ಎಸ್‍ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದರು ಎನ್ನುವ ಸುದ್ದಿ ಆಗಿನ್ನೂ ಕಾವು ಕಳೆದುಕೊಂಡಿರಲಿಲ್ಲ. ಒಂದುಕಡೆ ಅಧ್ಯಕ್ಷರಾಗಿ ಆಯ್ಕೆ ಎನ್ನುವ ಸುದ್ದಿ ಇನ್ನೊಂದು ಕಡೆ ಹೃದಯಾಘಾತದಿಂದ ಮರಣ ಎನ್ನುವ ಸುದ್ದಿ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವ ಗೊಂದಲ ಸಾಕಷ್ಟು ಜನರನ್ನು ಕಾಡಿತಾದರೂ ಸಾವಿನ ಸುದ್ದಿ ಮಾತ್ರ ಸುಳ್ಳಾಗಲಿಲ್ಲ.
ಸೋಲರಿಯದ ಸರದಾರ ಸೋತಿದ್ದು ಸಾವಿಗೆ ಮಾತ್ರ
ಮುಗ್ವಾ ಗ್ರಾಮದ ಕೊಂಡೆಕೆರೆ ಮನೆತನದವರಾದ ಟಿ.ಎಸ್.ಹೆಗಡೆ ಅವರು ಸಾರ್ವಜನಿಕ ಜೀವನದಲ್ಲಿ ಸೋಲರಿಯದ ಸರದಾರ ಎಂದೇ ಖ್ಯಾತಿಯನ್ನು ಗಳಿಸಿದ್ದರು. ಅವರಿಗೆ ಈ ಗರಿಮೆ ಸುಮ್ಮನೆ ಸಿಕ್ಕಿರಲಿಲ್ಲ. ಗ್ರಾಮಪಂಚಾಯತ್, ವಿ.ಎಸ್.ಎಸ್., ತಾಲೂಕಾ ಪಂಚಾಯತ, ಪಿ.ಎಲ್ಡಿಬ್ಯಾಂಕ್, ಎ.ಪಿ.ಎಂ.ಸಿ, ಟಿ.ಎ.ಪಿ.ಸಿ.ಎಂ.ಎಸ್ ಹೀಗೆ ಯಾವುದೇ ಚುನಾವಣೆಯಲ್ಲಿ ತಿಮ್ಮಣ್ಣ ಹೆಗಡೆ ಸ್ಪರ್ದಿಸಿದ್ದಾರೆಂದರೆ ಎದುರಾಳಿ ಎಷ್ಟೇ ಪ್ರಬಲರಾಗಿರಲಿ ಚುನಾವಣೆ ಎಷ್ಟೇ ಜಿದ್ದಾ ಜಿದ್ದಿನಿಂದ ಕೂಡಿರಲಿ ಕೊನೆಯಲ್ಲಿ ವಿಜಯದ ಮಾಲೆ ಮಾತ್ರ ತಿಮ್ಮಣ್ಣ ಅವರ ಕೊರಳಿಗೆ ಎನ್ನುವುದು ಇತ್ತೀಚಿನ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯ ವರೆಗೂ ಸಾಬೀತಾಗುತ್ತಲೇ ಬಂದಿರುವುದು ಅವರ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿ.
ಟಿ.ಎಸ್.ಹೆಗಡೆ ಅವರ ಈ ಗೆಲವಿನ ಜೈತ್ರಯಾತ್ರೆಗೆ ಬಹಳ ಕಾಲದಿಂದ ತನ್ನ ಸಹಾಯದ ಹಸ್ತವನ್ನು ಚಾಚುತ್ತಾ ಬಂದಿದ್ದ ಕುಮಟಾ ಶಾಸಕರಾಗಿರುವ ದಿನಕರ ಶೆಟ್ಟಿ ಅವರು ಕವಲಕ್ಕಿಯ ಪೆಟ್ರೋಲ್ ಪಂಪ್ ಉದ್ಘಾಟನಾ ಸಮಾರಂಭದಲ್ಲಿ “ಟಿ.ಎಸ್.ಹೆಗಡೆ ಅವರೇ ನೀವು ಇದುವರೆಗೂ ನಿಂತ ಎಲ್ಲಾ ಚುನಾವಣೆಯಲ್ಲಿಯೂ ಗೆಲುವನ್ನು ಕಾಣುತ್ತಾ ಬಂದಿದ್ದೀರಿ. ಮುಂದೆ ಎಂ.ಎಲ್.ಎ ಚುನಾವಣೆಗೆ ನಿಲ್ಲುವ ಮನಸ್ಸೇನಾದರೂ ಇದ್ರೆ ಹೇಳ್ಬಿಡಿ ನಾನು ಮತ್ತೆ ನಿಲ್ಲುವುದಿಲ್ಲ ಎಂದು ಸಲುಗೆಯಿಂದ ಕಿಚಾಯಿಸಿದ್ದರು.”
ಸಾರ್ವಜನಿಕ ಬದುಕು
ಪಿ.ಜಿಭಟ್ಟ ಅಗ್ನಿ ಅವರೊಂದಿಗೆ ಸಹಕಾರಿ ಸಂಘದ ಚುನಾವಣೆಗಳನ್ನು ಎದುರಿಸಿ ಅವರಿಂದಲೇ ಹಲವು ಪಟ್ಟುಗಳನ್ನು ಕಲಿತಿದ್ದ ಟಿ.ಎಸ್.ಹೆಗಡೆ ಅವರು ಜೆ.ಡಿ.ಎಸ್, ಬಿಜೆಪಿ ಮುಂತಾದ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರಾದರೂ ಅದು ದಿನಕರ ಶೆಟ್ಟಿ ಅವರ ದೆಸೆಯಿಂದ ಎನ್ನುವ ಮಾತಿದೆ. ದಿನಕರ ಶೆಟ್ಟಿ ಅವರು ಯಾವ ಪಕ್ಷದಲ್ಲಿದ್ದಾರೋ ಅಲ್ಲಿ ಟಿ.ಎಸ್.ಹೆಗಡೆ ಇರುತ್ತಿದ್ದರು. ಮುಗ್ವಾ ಗ್ರಾಮಪಂಚಾಯತ ಅಧ್ಯಕ್ಷರಾಗಿ, ವಿ.ಎಸ್.ಎಸ್ ಅಧ್ಯಕ್ಷರಾಗಿ, ತಾಲೂಕಾ ಪಂಚಾಯತ ಸದಸ್ಯರಾಗಿ, ಪಿ.ಎಲ್ಡಿ ಬ್ಯಾಂಕ್ , ಎ.ಪಿ.ಎಂ.ಸಿ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾಗಿ ಬರೀ ಗೆಲುವಿನ ಸವಿಯನ್ನೇ ಉಂಡಿದ್ದ ಇವರನ್ನು ಆಕ್ಸಿಡೆಂಟ್, ಡಯಾಬಿಟೀಸ್, ರಕ್ತದೊತ್ತಡ ಖಾಯಿಲೆಗಳು ದೈಹಿಕವಾಗಿ ದುರ್ಬಲವಾಗಲು ಕಾರಣವಾದವು ಎನ್ನುವ ಮಾತಿದೆ.
ಕೊರೊನಾ ಗೆದ್ದರೂ ಹೃದಯಾಘಾತ ಸೋಲಿಸಿಬಿಟ್ಟಿತು
ಅಕ್ಟೋಬರ್ 19 ಕ್ಕೆ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆ ಗೆದ್ದ ಖುಷಿಯಲ್ಲಿಯೇ ಆರೋಗ್ಯದಲ್ಲಿ ಸಣ್ಣಮಟ್ಟಿನ ಏರುಪೇರು ಕಾಣಿಸಿಕೊಂಡು ತಪಾಸಣೆಗೆ ಮುಂದಾದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಒಂದು ವಾರ ಚಿಕಿತ್ಸೆ ಪಡೆದ ಸೋಮವಾರ ಸಂಜೆ ಮನೆಗೆ ವಾಪಸ್ಸಾಗಿದ್ದವರು ಮಾರನೇ ದಿನ ಮಂಗಳವಾರ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಮಾತ್ರವಲ್ಲ ಅವಿರೋಧವಾಗಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಅಧ್ಯಕ್ಷರಾದ ಸಂಭ್ರಮದಲ್ಲಿ ಮನೆಗೆ ಹೋದವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ತಕ್ಷಣ ತಾಲೂಕಾಸ್ಪತ್ರೆಗೆ ಕರೆತಂದು ಅಲ್ಲಿಂದ ಮಂಗಳೂರಿಗೆ ಸಾಗಿಸಲು ಮುಂದಾದರೂ ಮಾರ್ಗಮದ್ಯೆ ಮಂಕಿ ಬಳಿಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಅಲ್ಲಿಗೆ ಪ್ರತೀ ಬಾರಿಯೂ ಸೋಲನ್ನೇ ಸೋಲಿಸಿ ಗೆಲುವಿಗೆ ಮುತ್ತಿಡುತ್ತಾ ಬಂದಿದ್ದ ಹಠವಾದಿಯ ಬದುಕು ಕೊನೆಯಾಗಿತ್ತು.

ಮೃತರು ಮಡದಿ ಸುಜಾತಾ ಹೆಗಡೆ, ಮಕ್ಕಳಾದ ಕುಮಾರಿ ಕೃತಿಕಾ ಹೆಗಡೆ, ಕುಮಾರಿ ಕವನಾ ಹೆಗಡೆ ಹಾಗೂ ಅಪಾರ ಬಂಧು ಬಳಗ ಹಿತೈಷಿಗಳನ್ನು ಅಭಿಮಾನಿಗಳನ್ನು ಅಗಲಿದ್ದಾರೆ

ಟಿ.ಎಸ್.ಹೆಗಡೆ ಅವರನ್ನು ಕಳೆದುಕೊಂಡಿರುವುದು ನನ್ನ ಪಾಲಿಗೆ ತುಂಬಲಾರದ ನಷ್ಟ. ಅಜಾತಶತ್ರುವಿನಂತೆ ಬದುಕಿದ್ದ ಅವರು ಪ್ರತಿಯೊಂದು ಚುನಾವಣೆಯಲ್ಲಿಯೂ ಜನರನ್ನು ವಿಶ್ವಾಸಕ್ಕೆ ಪಡೆದು ನನ್ನ ಪರವಾಗಿ ಕೆಲಸ ಮಾಡುತ್ತಿದ್ದರು. ಒಬ್ಬ ಆತ್ಮೀಯ ಸ್ನೇಹಿತನನ್ನು, ಮಾರ್ಗದರ್ಶನ ಮಾಡಬಲ್ಲ ಗುರುವನ್ನು ಕಳೆದುಕೊಂಡ ಅನುಭವವಾಗುತ್ತಿದೆ. ಅವರನ್ನು ಕಳೆದಕೊಂಡ ಕುಟುಂಬ ನೋವಿನಿಂದ ಹೊರಬರುವಂತಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: children Kumari Kritika Hegde, Healthy Boost, Immediate, Kudu Kandu Hegdeyi, Kumari Kavana Hegde, Shocking News Life, The dead are Madadi Sujatha Hegde, ಅಪಾರ ಬಂಧು ಬಳಗ ಹಿತೈಷಿ, ಆಘಾತಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣ, ಆಡಳಿತ ಮಂಡಳಿ ಚುನಾವಣೆ, ಆರೋಗ್ಯದಲ್ಲಿ ಏರುಪೇರಾಗಿ ತಕ್ಷಣ, ಕುಮಾರಿ ಕವನಾ ಹೆಗಡೆ, ಖುಷಿ ಕೊಟ್ಟು ಜೀವ, ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆ, ಮಕ್ಕಳಾದ ಕುಮಾರಿ ಕೃತಿಕಾ ಹೆಗಡೆ, ಮಾರ್ಕೆಟಿಂಗ್ ಸೊಸೈಟಿ, ಮೃತರು ಮಡದಿ ಸುಜಾತಾ ಹೆಗಡೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...