• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಪಟ್ಟಿಗೆ ಅಪ್ಸರಕೊಂಡ ಶಿಫಾರಸು(ಇಕೋಬೀಚ್ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ನಂತರ ಮತ್ತೊಂದು ಮಹತ್ವದ ಸಾಧನೆಯತ್ತ ಹೊನ್ನಾವರ)

November 2, 2020 by Lakshmikant Gowda Leave a Comment

ಮುಖ್ಯಾಂಶಗಳು
ಇಕೋ ಸ್ಮಾರ್ಟ ವಿಲೇಜ್ ಪ್ರಾಜೆಕ್ಟಲ್ಲಿ ಸಿಲೆಕ್ಟ್ ಆದ ರಾಜ್ಯ ಏಕೈಕ ಕಡಲತೀರ ಅಪ್ಸರಕೊಂಡ (ರಾಷ್ಟ್ರದಲ್ಲಿ ಮೂರನೇಯದು)
ಸಿ.ಆರ್.ಜೆಡ್ ನಿಯಮಾವಳಿಗೆ ಅನುಗುಣವಾಗಿಯೇ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ
8-10 ಕೋಟಿ ಕೇಂದ್ರ ಸರ್ಕಾರದ ಆರ್ಥಿಕ ನೆರವು
ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸ್ಥಳಿಯರಿಗೆ ಕೌಶಲ್ಯಾಭಿವೃದ್ಧಿಗೆ ಪೂರಕ
ಮೀನುಗಾರಿಕೆ ಮತ್ತು ಮೀನಿನ ಸಂಸ್ಕರಣೆ ಹಾಗೂ ಉತ್ಪನ್ನಗಳ ತಯಾರಿಕಗೆ ಉತ್ತೇಜನ ಸಿಗಲಿದೆ

ಹೊನ್ನಾವರ – ಕೋಸ್ಟಲ್ ಮ್ಯಾನೇಜ್‍ಮೆಂಟ್ ಜೋನ್ ಅಡಿಯಲ್ಲಿ ಮಾಲಿನ್ಯ ಮುಕ್ತ ಹಸಿರು ಗ್ರಾಮವಾಗಿಸುವ ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಾಲೂಕಿನ ಅಪ್ಸರಕೊಂಡ ಆಯ್ಕೆಯಾಗಿದೆ.

watermarked 01 31


ಎನ್.ಸಿ.ಎಸ್.ಸಿ.ಎಮ್ (ನ್ಯಾಶನಲ್ ಸೆಂಟರ್ ಪಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್)ನ ವಿಜ್ಞಾನಿಗಳ ತಂಡ ಸಿ.ಆರ್.ಜೆಡ್ ವ್ಯಾಪ್ತಿಗೊಳಪಟ್ಟ ದೇಶದ ಕಡಲತೀರಗಳನ್ನೆಲ್ಲಾ ಅಧ್ಯಯನ ಮಾಡಿ ಓರಿಸ್ಸಾ, ಗುಜರಾತ ಮತ್ತು ಕರ್ನಾಟಕದ ಅಪ್ಸರಕೊಂಡವನ್ನು ಸ್ವಚ್ಛ ಹಸಿರು ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಯೋಗ್ಯವಾದ ಸ್ಥಳವೆಂದು ಆಯ್ಕೆ ಮಾಡಿದ್ದಾರೆ.
ಸಿ.ಆರ್.ಜೆಡ್ ನಿಯಮಗಳಿಗೆ ದಕ್ಕೆಯಾಗದಂತೆ ಅಲ್ಲಿನ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡು ಉದ್ಯೋಗ, ಕೃಷಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 8 -10 ಕೋಟಿ ಅನುದಾನವನ್ನು ಒದಗಿಸಲಿದೆ. ಕಾಸರಕೋಡ ಬೀಚ್ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆದು ಅಂತರಾಷ್ಟ್ರೀಯ ಗುಣಮಟ್ಟದ ಬೀಚ್ ಎನ್ನುವ ಹೆಗ್ಗಳಿಕೆಯನ್ನು ಪಡಕೊಂಡ ಬೆನ್ನಲ್ಲಿಯೇ ಕಾಸರಕೋಡ ಬೀಚ್‍ನ ಮುಂದುವರಿದ ಭಾಗವಾಗಿರುವ ಅಪ್ಸರಕೊಂಡವೂ ಇಕೋ ಸ್ಮಾರ್ಟ ವಿಲೇಜ್ ಆಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.

watermarked 03 31


ಆಯ್ಕೆಗೆ ಕಾರಣವಾದ ಸಂಗತಿಗಳು
ಕಾಸರಕೋಡ ಹಾಗೂ ಅಪ್ಸರಕೊಂಡ ದೇಶದಲ್ಲಿಯೇ ಅತ್ಯಂತ ಶುಭ್ರವಾದ ನೀರನ್ನು ಹೊಂದಿರುವ ಕಡಲತೀರವಾಗಿದೆ. ಗಾಳಿಯ ಬೀಸುವಿಕೆ, ಸಮುದ್ರದ ಅಲೆಯ ಏರಿಳಿತ, ಬೀಚ್ ಪಕ್ಕದಲ್ಲಿ ಗುಡ್ಡ, ಕಾಡು, ಜಲಪಾತ, ಸಿಹಿನೀರಿನ ಹಳ್ಳ, ದೇವಾಲಯ, ಕೃಷಿಭೂಮಿ ಎಲ್ಲವೂ ಒಂದೇ ಕಡೆ ಸಮ್ಮಿಳಿತವಾಗಿರುವ ಮತ್ತು ಸಿ.ಆರ್.ಜೆಡ್ ನಿಯಮಗಳಿಗೆ ವಿರುದ್ಧವಾದ ಯಾವುದೇ ಬೃಹತ್ ಕಟ್ಟಗಳು, ಕಡಲ ತೀರದ ಸಹಜತೆಗೆ ದಕ್ಕೆಯುಂಟುಮಾಡುವಂತ ಬೆಳವಣಿಗೆ ಈ ಭಾಗದಲ್ಲಿ ಆಗಿಲ್ಲದಿರುವುದು ದೇಶದಲ್ಲಿ ನೂರಾರು ಕಡಲತೀರಗಳಿದ್ದರೂ ಅಪ್ಸರಕೊಂಡವನ್ನೇ ಏಕೆ ಇಕೋ ಸ್ಮಾರ್ಟ ವಿಲೇಜ್ ಆಗಿ ಆಯ್ಕೆ ಆಯ್ಕೆಮಾಡಿಕೊಂಡರು ಎನ್ನುವ ಪ್ರಶ್ನೆಗೆ ಉತ್ತರ ಎನ್ನುತ್ತಾರೆ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.

watermarked IMG 20201031 155626
watermarked 02 31


ಯಾವ ಪ್ರಯೋಜನ
ಈಗಾಗಲೇ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಅಪ್ಸರಕೊಂಡ ಇಕೋ ಸ್ಮಾರ್ಟ ವಿಲೇಜ್ ಆಗಿ ಬದಲಾದರೆ ಸಮುದ್ರ ತೀರದಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಸೋಲಾರ್ ದೀಪ ಅಳವಡಿಸುವ ಜೊತೆಗೆ ಈ ಪ್ರದೇಶದಲ್ಲಿನ ಕೃಷಿ, ಕೃಷಿ ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಮೀನಿನ ಉತ್ಪನ್ನಗಳ ತಯಾರಿಕೆ, ನಾರುದ್ಯಮದಲ್ಲಿ ಈ ಭಾಗದ ಜನರು ತೊಡಗಿಸಿಕೊಳ್ಳಲು ಸೂಕ್ತ ತರಬೇತಿಯನ್ನು ನೀಡಿ ಅವಕಾಶಗಳನ್ನು ಸೃಷ್ಟಿಸಿಕೊಡಲಾಗುತ್ತದೆ. ವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ನಿರ್ವಹಣೆಮಾಡಿ ಪರಿಸರವನ್ನು ಸ್ವಚ್ಛವಾಗಿಡುವ ಜೊತೆಗೆ ಸಾವಯ ಕೃಷಿಗೆ ಪ್ರೋತ್ಸಾಹ ನೀಡಿ ಇಲ್ಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿ ಅಂತರಾಷ್ಟ್ರೀಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಶ್ವಮಟ್ಟದಲ್ಲಿ ಅಪ್ಸರಕೊಂಡ ಗುರುತಿಸಿಕೊಳ್ಳುವ ಜೊತೆಗೆ ಇಲ್ಲಿನ ಉತ್ಪನ್ನಗಳಿಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು ತೆರೆದುಕೊಂಡು ಸ್ಥಳೀಯರಿಗೆ ಆರ್ಥಿಕ ಬಲ ನೀಡುತ್ತದೆ.
ಕಡಲ ತೀರವನ್ನು ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಿರುವವರಿಗೆ ಯಾವುದೇ ತೊಂದರೆಯಾಗದಂತೆ ಸಿ.ಆರ್.ಜೆಡ್ ನಿಯಮಗಳಿಗೂ ದಕ್ಕೆಯಾಗದಂತೆ ಪರಿಸರ ಪೂರಕವಾಗಿ ಯಾವರೀತಿ ಕಡಲತೀರವನ್ನು ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಮಾದರಿಯಾಗಿಸಲು ಅಪ್ಸರಕೊಂಡವನ್ನು ಆಯ್ಕೆಮಾಡಿಕೊಂಡಿದ್ದು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆ ಸ್ಥಳೀಯರ ನಿರುದ್ಯೋಗ ಸಮಸ್ಯೆಗೂ ಉತ್ತರ ಕಂಡುಕೊಳ್ಳುವಲ್ಲಿ ಯೋಜನೆ ನೆರವಾಗಲಿದೆ ಎನ್ನಲಾಗುತ್ತಿದೆ.

[ಹಲವು ವೈವಿದ್ಯತೆಗಳ ಸಂಗಮವಾಗಿರುವ ಅಪ್ಸರಕೊಂಡದಂತ ಕಡಲತೀರ ದೇಶದಲ್ಲಿಯೇ ಎಲ್ಲಿಯೂ ಇಲ್ಲ ಎಂದು ಎನ್.ಸಿ.ಎಸ್.ಸಿ.ಎಮ್.ನ ಅದ್ಯಯನ ತಂಡದ ಸದಸ್ಯರೇ ಅಭಿಪ್ರಾಯಪಟ್ಟಿದ್ದಾರೆ. ಇಕೋ ಸ್ಮಾರ್ಟ ವಿಲೇಜ್ ಆಗಿ ಅಪ್ಸರಕೊಂಡ ಬದಲಾದರೆ ಖಂಡಿತ ಈ ಭಾಗದ ರೈತರಿಗೆ, ಮೀನುಗಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಅಂತರಾಷ್ಟ್ರೀಯ ಗುಣಮಟ್ಟ ಹೊಂದುವ ಅರ್ಹತೆಯಿರುವ ಬಹಳಷ್ಟು ತಾಣಗಳು ಜಿಲ್ಲೆಯಲ್ಲಿದೆ ಒಂದೊಂದಾಗಿ ಬೆಳಕಿಗೆ ಬರುತ್ತಿರುವುದು ಖುಷಿಯ ವಿಚಾರ – ಡಾ.ಪ್ರಕಾಶ ಮೇಸ್ತ, ಮರೈನ್ ಬಯೋಲಾಜಿಸ್ಟ್]

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: agriculture fisheries products, apsarkonda eco smart costal village, clean green village of Karnataka, Confluence of diversity, Eco Smart Village, economic strength for the locals, employment, finding solutions to unemployment problems, international quality beach, National Center for Sustainable Coastal Management, pollution free green village, ಅಂತರಾಷ್ಟ್ರೀಯ ಗುಣಮಟ್ಟದ ಬೀಚ್, ಇಕೋ ಸ್ಮಾರ್ಟ ವಿಲೇಜ್, ಉದ್ಯೋಗ, ಕರ್ನಾಟಕದ ಅಪ್ಸರಕೊಂಡವನ್ನು ಸ್ವಚ್ಛ ಹಸಿರು ಗ್ರಾಮ, ಕೃಷಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ಪನ್ನ, ನಿರುದ್ಯೋಗ ಸಮಸ್ಯೆಗೂ ಉತ್ತರ ಕಂಡುಕೊಳ್ಳುವಲ್ಲಿ, ನ್ಯಾಶನಲ್ ಸೆಂಟರ್ ಪಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್, ಮಾಲಿನ್ಯ ಮುಕ್ತ ಹಸಿರು ಗ್ರಾಮ, ಸ್ಥಳೀಯರಿಗೆ ಆರ್ಥಿಕ ಬಲ, ಹಲವು ವೈವಿದ್ಯತೆಗಳ ಸಂಗಮ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...