ಹೊನ್ನಾವರ – ತಾಲೂಕಿನ ಗೇರಸೊಪ್ಪಾ ನಗರಬಸ್ತಿಕೇರಿಯಲ್ಲಿ ಕಡವೆ ಬೇಟೆ ಪ್ರಕರಣವನ್ನು ಬೇದಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಗರಬಸ್ತಿಕೇರಿ ಗಾಳಗೂರಿನ 52 ವರ್ಷದ ನರಸಿಂಹ ತಿಮ್ಮಪ್ಪ ನಾಯ್ಕ, ನಗರಬಸ್ತಿಕೇರಿ ಆನೆಗದ್ದೆಯ 38 ವರ್ಷದ ವಿನಾಯಕ ಜಟ್ಟಿ ನಾಯ್ಕ, ಸಂಶಿ ಕುದ್ರಿಗಿಯ 39 ವರ್ಷ ಪ್ರಾಯದ ಮಹಮದ್ ಜಹೀರ್ ಮೈದಿನ್ ಸಾಬ್, ನಗರಬಸ್ತಿಕೇರಿ ಬಸ್ತಿಯ 38 ವರ್ಷದವನಾದ ಮಂಜುನಾಥ ಮಾದೇವ ನಾಯ್ಕ, ನಗಬಸ್ತಿಕೇರಿ ಖಂಡೋಡಿಯವನಾದ ಮಹಮದ್ ತಕ್ವೀಮ್ ಅಹಮದ್ ಸಾಬ್ ಮತ್ತು ಮಹಮದ್ ರಫೀಕ್ ಜಾಪರ್ ಸಾಬ್ ಎಂಬವರನ್ನು ದಸ್ತಗಿರಿಮಾಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ನಾಡ ಬಂದೂಕು, ಕೊಂದ ಕಡವೆಯ ಕೊಂಬು, ಚರ್ಮ, ಮಾಂಸ ಮತ್ತು ಇತರೇ ವಸ್ತುಗಳನ್ನು ಜಫ್ತಿ ಮಾಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಗೇರಸೊಪ್ಪಾ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಮ್.ಎಸ್ ನೇತೃತ್ವದ ಉಪ ವಲಯಾರಣ್ಯಾಧಿಕಾರಿ ವಿಶಾಲ ಡುನಗೋಳ, ಮಹೇಶ ಅಗೇರ, ವಿಜಯಕುಮಾರ ಅಳಗಿ, ಗೀತಾ ನಾಯ್ಕ ಹಾಗೂ ಅರಣ್ಯ ರಕ್ಷಕರಾದ ಮಹೇಶ ಬಿಳೂರು, ನೀಲಗಿರಿ ಶಿವಬಸವಣ್ಣನವರ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
Leave a Comment