ಹೊನ್ನಾವರ :
ಪಟ್ಟಣ ಪಂಚಾಯತನಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗ್ಡೆಯವರನ್ನು ಭೇಟಿಯಾಗಿ ಹೊನ್ನಾವರ ಪಟ್ಟಣ ಪಂಚಾಯತಗೆ ಈ ಬಾರಿ ಅಧಿಕ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಿದರು.

ಸಂಸದರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಜ ಮೇಸ್ತ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮೇಧಾ ನಾಯ್ಕರವರನ್ನು ಶಾಲೂ ಹೊದೆಸಿ ಸನ್ಮಾನಿಸಿ. ನಂತರ ಮಾತನಾಡಿ ಹೊನ್ನಾವರದ ಅಭಿವೃದ್ಧಿಗೆ ಆಯ್ಕೆಯಾದ ಎಲ್ಲಾ ಪಟ್ಟಣ ಪಂಚಾಯತ ಸದಸ್ಯರು ಸೇರಿ ಉತ್ತಮ ಕೆಲಸಗಳನ್ನು ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಲಹೆ ನೀಡಿ ಶುಭ ಹಾರೈಸಿದರು. ಶಿವರಾಜ ಮೇಸ್ತ ಮಾತನಾಡಿ ಹೊನ್ನಾವರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಲು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಮತ್ತು ಹೊನ್ನಾವರ ಬಂದರಿನ ಮೀನು ಮಾರುಕಟ್ಟೆಯಲ್ಲಿ ಬಿಸಿಲಿನಿಂದ ಕಷ್ಟ ಎದುರಿಸುತ್ತಿರುವ ಮೀನು ಮಾರಾಟಗಾರರಿಗಾಗಿ ಮೆಲ್ಚಾವಣಿಯನ್ನು ನಿರ್ಮಿಸಲು ಈ ಬಾರಿ ಹೇಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ವಿಜು ಕಾಮತ, ನಾಗರಾಜ ಭಟ್, ಶ್ರೀಮತಿ ಭಾಗ್ಯಾ ಮೇಸ್ತ, ವಿನೋದ ಮೇಸ್ತಾ, ಸುಭಾಷ ಹರಿಜನ್ ಉಪಸ್ಥಿತರಿದ್ದರು.
Leave a Comment