ಹೊನ್ನಾವರ : ಇಲ್ಲಿಯ ಗುಡ್ಲಕ್ ಸಹಿತ ಆಕುಟುಂಬದ ಮಾಲಕತ್ವದ 12ಅಂಗಡಿಗಳಿಗೆ ವಾಣಿಜ್ಯ ಪರವಾನಿಗೆ ಇಲ್ಲದ ಕಾರಣ ಇಂದು ಮುಂಜಾನೆ ತಹಶೀಲ್ದಾರ ಮತ್ತು ಮುಖ್ಯಾಧಿಕಾರಿಗಳು ಪೋಲೀಸರೊಂದಿಗೆ ತೆರಳಿ ಬೀಗಮುದ್ರೆ ಹಾಕಿದ್ದಾರೆ.
ಹೊಟೆಲ್, ಬಂಗಾರದಅಂಗಡಿ, ಚಪ್ಪಲಿ, ತರಕಾರಿ, ಮೊದಲಾದ ಅಂಗಡಿಗಳಿದ್ದವು. ಈ ಅಂಗಡಿಯ ಮಾಲಕತ್ವದ ಕುರಿತು ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಕೆಲವರ ದೂರುಬಂದ ಕಾರಣ ಕಾನೂನಿನ ಕ್ರಮ ಕೈಗೊಂಡಿದ್ದೇವೆ ಎಂದು ತಹಶೀಲ್ದಾರ ಹೇಳಿದ್ದಾರೆ. ಕುಟುಂಬದ ವಿವಾದದ ಮಧ್ಯೆ ವ್ಯವಹಾರವನ್ನು ನಂಬಿಕೊಂಡಿದ್ದ 12ಅಂಗಡಿಗಳಲ್ಲಿ ಬಾಡಿಗೆ ಇದ್ದವರು ಅತಂತ್ರರಾಗಿದ್ದಾರೆ.

Leave a Comment