ಹೊನ್ನಾವರ – ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನಲ್ಲಿಂದು ಪೊಲೀಸರು ಬೈಕ್ ಜಾಥಾ ನಡೆಸುವಮೂಲಕ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ತಿಳುವಳಿಕೆ ನೀಡಲಾಯಿತು.
ರಸ್ತೆ ಸುರಕ್ಷತಾ ಸಪ್ತಾಹದ ಮೊದಲ ಹಂತದಲ್ಲಿ ಆರಂಬಿಕ ಎರಡುದಿನ ಜನರಿಗೆ ದಂಡ ಹಾಕುವ ಬದಲು ಗುಲಾಬಿ ನೀಡಲು ಮುಂದಾಗಿರುವುದು ಸಂಚಾರಿ ನಿಯಮ ಉಲ್ಲಂಘಿಸಿದವರು ಮುಜುಗರ ಉಂಟಾಗುವoತೆ ಮಾಡಿತು. ಎಲ್ಲವನ್ನೂ ಶಿಕ್ಷೆಯಿಂದಲೇ ಸರಿಪಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊAಡು ಪ್ರೀತಿ ವಿಶ್ವಾಸದಿಂದ ಜನರು ಕಾನೂನನ್ನು ಪಾಲಿಸುವಂತೆ ಮಾಡುವ ವಿಶಿಷ್ಠ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿನಿತ್ಯ ಘಟಿಸುವ ರಸ್ತೆ ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಮುಂದಾಗಿರುವ ಇಲಾಖೆ ರಸ್ತೆ ಸುರಕ್ಷತೆಗಾಗಿ ಸಾರ್ವಜನಿಕರಿಂದಲೂ ಸಲಹೆ ಸೂಚನೆಗಳನ್ನು ಪಡೆಯಲು ಮುಂದಾಗಿದ್ದು. ಇಲಾಖೆಯ ಜೊತೆ ಸಂಘ ಸಂಸ್ಥೆಗಳೂ ಸ್ವಯಂಪ್ರೇರಣೆಯಿAದ ಕೈಜೋಡಿಸಬಹುದು ಎಂದು ತಿಳಿಸಿದೆ. ಸೋಮವಾರ ನಡೆದ ಮೊದಲದಿನದ ಜಾಥಾದಲ್ಲಿ ಹೊನ್ನಾವರ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

Leave a Comment