ಹೊನ್ನಾವರದ ಗೆರುಸೊಪ್ಪಶರಾವತಿ ನದಿಗೆ ನಿರ್ಮಾಣವಾಗುತ್ತಿರುವ ನಗರಬಸ್ತಿಕೇರಿ ಸೇತುವೆ ಹಾಗೂ ಕೂಡುರಸ್ತೆಯಿಂದ ಕಳೆದುಕೊಳ್ಳುವ ಜಾಗದ ಮಾಲೀಕರಿಗೆ ಜಮೀನು ದರ ನಿಗಧಿಯನ್ನು ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಬಾರಿ ಭೂಸ್ವಾಧೀನವಾಗಿದೆ. ವಿದ್ಯುತ್, ನೌಕಾದಳ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲೆಯ ಜನತೆ ತಮ್ಮ ಜಮೀನುಗಳನ್ನು ತ್ಯಾಗ ಮಾಡಿದ್ದಾರೆ. ಬಹುವರ್ಷದ ಈ ಭಾಗದ ಬೇಡಿಕೆಯಾದ ಸೇತುವೆಗೆ ೨೩ ಸರ್ವೆನಂಬರ್ ಜಾಗದ ಅವಶ್ಯವಿದ್ದು, ಆ ಬಗ್ಗೆ ಭೂಮಾಲಿಕರಿಗೆ ಮಾಹಿತಿ ನೀಡಿದ್ದು, ಹಣ ನಿಗಧಿ ಮಾಡಲು ಇಂದು ಸಭೆ ನಡೆಯುತ್ತಿದ್ದು, ಪ್ರತಿ ಗುಂಟೆ ಕುಷ್ಕಿ ಜಮೀನಿಗೆ ೧.೪೦ಸಾವಿರ ನೀಡಲು ಅವಕಾಶವಿದೆ. ಈ ಬಗ್ಗೆ ಪರಾಮರ್ಶೆ ನಡೆಸಿ ಅಂತಿಮವಾಗಿ ಜಾಗ ಸ್ವೀಕರಿಸಲಾಗುವುದು ಎಂದರು.
ಕೆ.ಆರ್.ಡಿ.ಸಿ.ಎಲ್. ಇಂಜನಿಯರ್ ಎನ್.ಕೆ.ಕುರಂಡಿಕರ್ ಪ್ರಾಸ್ತವಿಕ ಮಾತನಾಡಿ ಸೇತುವೆ ನಿರ್ಮಾಣ ಕಾಮಗಾರಿ ಒಂದು ವರ್ಷದಿಂದ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಭೆ ನಡೆಯುವ ಬದಲು ಗ್ರಾಮಕ್ಕೆ ಬಂದು ಸಭೆ ಮಾಡುತ್ತಿರುವುದು ವಿಶೇಷವಾಗಿದೆ ೨೬ ಕೋಟಿ ವೆಚ್ಚದಲ್ಲಿ ಕೆಲವೇ ತಿಂಗಳುಗಳಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಗ್ರಾಮಸ್ಥ ಡಿ.ವಿ.ಪೈ ಗ್ರಾಮಸ್ಥರ ಪರವಾಗಿ ಮಾತನಾಡಿ ೭೦ ವರ್ಷದ ಕನಸಾಗಿದ್ದು, ನನಸಾದರೆ ಮುಂದಿನ ಜನಾಂಗದವರಿಗೂ ಅನೂಕೂಲವಾಗಲಿದೆ. ಸೇತುವೆ ನಿರ್ಮಾನಕ್ಕೆ ನಾವು ಈಗ ತ್ಯಾಗ ಮಾಡಲು ಸಿದ್ದರಿದ್ದು, ಮುಂದಿನ ದಿನದಲ್ಲಿ ಸರಾಗವಾಗಿ ಸಂಚರಿಸಬಹುದು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸುಸಜ್ಜಿತ ಸೇತುವೆ ನಿರ್ಮಾಣ ಮಾಡುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕಿದೆ ಎಂದರು.
ತಹಶೀಲ್ದಾರ ವಿವೇಕ ಶೇಣ್ವಿ,ಸಿಪಿಐ ಶ್ರೀಧರ ಎಸ್.ಆರ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Leave a Comment