ಹೊನ್ನಾವರ; ಅಳ್ಳಂಕಿಯ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಾದಪ್ಪ ಖರ್ವಾ ಇವರ ಚುಕ್ಕಿ ಚಿತ್ರಗಳ ಸಂಪುಟವನ್ನು ಅನಾವರಣಗೊಳಿಸಲಾಯಿತು. ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಪುಟ ಅನಾವರಣಗೊಳಿಸಿ ಮಾತನಾಡಿ ಚುಕ್ಕಿ ಹಾಗೂ ಗೆರೆಗಳ ಮೂಲಕವಾಗಿಯೇ ಮಾದಪ್ಪ ಹೆಗಡೆಯವರು ಚಿರಪರಿಚಿತರು.

ನಿಜವಾದ ಕಲೆಯ ವಿಶೇಷತೆಯೇ ಕೂಡಿ ಬದುಕುವುದನ್ನು ಕಲಿಸುವುದು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸಿದರು. ಕಿಶೋರ ನಾಯ್ಕ ಸಂವಿಧಾನ ವಿಷಯದ ಬಗ್ಗೆ ಹಾಗೂ ಗಣತಂತ್ರ ವ್ಯವಸ್ಥೆ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಎಸ್.ಹೆಗಡೆ ಭಾರತೀಯ ಸಂವಿಧಾನದ ಅನನ್ಯತೆಯನ್ನು ಸ್ಮರಿಸಿದರು.
ಕಲಾಕಾರ ಮಾದಪ್ಪ ಹೆಗಡೆಯವರನ್ನು ಸನ್ಮಾನಿಸಲಾಯಿತು. ದೇವಿದಾಸ ಕುಮಟಾಕರ್ ಸ್ವಾಗತಿಸಿ, ಜೀವನ ಹಬ್ಬು ವಂದಿಸಿದರು.ಮಹೇಶ ಹೆಗಡೆಕಾರ್ಯಕ್ರಮ ನಿರ್ವಹಿಸಿದರು.

Leave a Comment