ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಗುರುತಿನಚೀಟಿ ನೀಡುವ ಶಿಭಿರ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿಧಡೆಯಿಂದ ಸಾಕಷ್ಟು ಜನ ವಿಕಲೇಚತನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು “ವಿಕಲಚೇತನ ಗುರುತಿನ ಚೀಟಿ”ಪಡೆದುಕೊಂಡರು.
ಮಾನಸಿಕತೆಗೆ ಸಂಬಂದಿಸಿದಂತೆ 53,ಎಲುಬು ಮತ್ತು ಮೂಳೆ ವಿಭಾಗದಲ್ಲಿ 144,ಕಣ್ಣಿನ ವಿಭಾಗದಲ್ಲಿ 54,ಕಿವಿ ಮತ್ತು ಗಂಟಲು ವಿಭಾಗದಲ್ಲಿ 82 ಜನರು ಸೇರಿದಂತೆ ಒಟ್ಟು 333 ಜನ ಪಲಾನುಭವಿಗಳು ವಿಕಲಚೇತನ ಶಿಭಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ತಾಲೂಕಾ ಆಸ್ಪತ್ರೆಯ ತಜ್ಞ ವೈದ್ಯರು ಸೇರಿದಂತೆ,
ಜಿಲ್ಲಾ ಆಸ್ಪತ್ರೆಯಿಂದ ಆಗಮಸಿದ ತಜ್ಞ ವೈದ್ಯರುಗಳು ಶಿಭಿರದಲ್ಲಿ ಭಾಗವಹಿಸಿ ಯಶಶ್ವಿಗೆ ಸಹಕರಿಸಿದ್ದರು.
Leave a Comment