ಹೊನ್ನಾವರ: ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ ಏಪ್ರೀಲ್ 2 ಮತ್ತು 3ರಂದು ಗುಣಮಂತೆ ಯಕ್ಷಾಂಗಣದಲ್ಲಿ ನಡೆಯಲಿದೆ ಎಂದು ನಾಟೊತ್ಸವ ಸಮೀತಿಯ ಕಾರ್ಯಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.

ಅವರು ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಕೊರೋನಾ ಕಾರಣದಿಂದ ಈ ಬಾರಿ ನಾಟೊತ್ಸವ ಎರಡು ದಿನಕ್ಕೆ ಸೀಮೀತವಾದರು, ಪ್ರತಿವರ್ಷ ನಡೆಯುವ ಪ್ರಶಶ್ತಿ ಪ್ರಧಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ನಮ್ಮ ಕರ್ನಾಟಕದ ಒಳಗಿನ ಮತ್ತು ಪಕ್ಕದ ಕೇರಳದಿಂದ ಕಲಾವಿದರನ್ನೂ, ಕಲಾಪ್ರಕಾರಗಳನ್ನೂ ತರಿಸುವ ಮೂಲಕ ನಾಟ್ಯೋತ್ಸವ ಏರ್ಪಡಿಸಲಾಗಿದೆ ಎಂದರು.ಎಪ್ರಿಲ್ 2 ರಂದು ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು, ದಿವ್ಯ ಉಪಸ್ಥಿತಿ ವಹಿಸುವರು. ರಾಜ್ಯ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಉದ್ಘಾಟಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಡಾ. ಬಿ. ಜಯಶ್ರೀ ಇವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅಭಿನಂದನಾ ನುಡಿಗಳನ್ನಾಡುವರು. ವಿಧಾನ ಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ. ಎಂ. ಎ. ಹೆಗಡೆ, ಮಾಸಪತ್ರಿಕೆ ಸಂಪಾದಕ ಕಾಕುಂಜೆ ಕೇಶವ ಭಟ್, ಅಂಕಣಕಾgಜಿ. ಎನ್. ಮೋಹನ್, ಕೆಳಗಿನೂರು ಗ್ರಾ. ಪಂ. ಅಧ್ಯಕ್ಷ ಗಂಗಾಧರ ಗೌಡ, ಊರ ಮುಖಂಡ ಗಣಪಯ್ಯ ಗೌಡ ಹೆಬ್ಬಾರಹಿತ್ಲು ಪಾಲ್ಗೊಳ್ಳುವರು.
ಸಂಜೆ 7 ರಿಂದ ಶಿರಸಿಯ ಜ್ಯೋತಿ ಹೆಗಡೆ ಇವರಿಂದ ರುದ್ರವೀಣೆ, ಬೆಂಗಳೂರಿನ ಗುರುಮೂರ್ತಿ ವೈದ್ಯ ಇವರಿಂದ ಪಖಾವಾಜ್ ಪ್ರದರ್ಶನ ನಡೆಯಲಿದೆ. ನಂತರ ಕೊಡವೂರಿನ ನೃತ್ಯನಿಕೇತನ ಕಲಾವಿದರಿಂದ ‘ನಾರಸಿಂಹ’ ನೃತ್ಯರೂಪಕ ನಡೆಯಲಿದೆ.
ಎಪ್ರಿಲ್ 3 ರಂದು ಬೆಳಿಗ್ಗೆ 10.30 ರಿಂದ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿ ನಡೆಯಲಿದೆ. ಸಂಜೆ 5.30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಸುಬ್ರಾಯ ಭಾಗವತ ಕಪ್ಪೆಕೆರೆ ಇವರಿಗೆ ಪ್ರಧಾನ ಮಾಡಲಾಗುವುದು. ಇವರಿಗೆ ಡಾ. ಜಿ. ಕೆ. ಹೆಗಡೆ, ಹರಿಕೇರಿ ಅಭಿನಂದನಾ ನುಡಿಗಳನ್ನಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದ ಉದ್ಘಾಟನೆ ಮಾಡುವರು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಶಿರಸಿಯ ಎಲ್. ಆರ್. ಭಟ್ಟ, ಸುಮುಖಾನಂದ ಜಲವಳ್ಳಿ, ನಾಗೂರಿನ ದಯಾನಂದ ಬಳೆಗಾರ, ಹೊಸಂಗಡಿಯ ರಾಜೀವ ಶೆಟ್ಟಿ, ಮರಣೋತ್ತರವಾಗಿ ಗುಂಡಿಬೈಲು ಸುಬ್ರಾಯ ಭಟ್ಟ ಇವರಿಗೆ ನೀಡಿ ಗೌರವಿಸಲಾಗುತ್ತದೆ. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಅಧ್ಯಕ್ಷತೆ ವಹಿಸುವರು.
ಮುಖ್ಯ ಅಭ್ಯಾಗತರಾಗಿ ಶಾಸಕ ಸುನೀಲ ನಾಯ್ಕ, ತಹಸೀಲ್ದಾರ ವಿವೇಕ ಶೆಣ್ವಿ, ರಂಗತಜ್ಞ ಪೆÇ್ರ. ಜೆ. ಶ್ರೀನಿವಾಸಮೂರ್ತಿ, ಕುಂದಾಪುರದ ಸತೀಶ್ ಕಿಣಿ, ಕೇರಳ ಪೆÇೀಕ್ ಲ್ಯಾಂಡ್ ಅಧ್ಯಕ್ಷ Àಡಾ. ವಿ. ಜಯರಾಜನ್, ಊರ ಮುಖಂಡ ಶಂಭು ಗೌಡ ಅಡಿಮನೆ, ಮುಗಳಿಯ ಗಣಪಯ್ಯ ಗೌಡ, ಪಾಲ್ಗೊಳ್ಳುವರು. ಸಂಜೆ 7ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೊಷ್ಟಿಯಲ್ಲಿ ನಿರ್ದೇಶಕರಾದ ಕೆರಮನೆ ಶಿವಾನಂದ ಹೆಗಡೆ, ಕಲಾವಿದ ಶ್ರೀಧರ ಹೆಗಡೆ ಉಪಸ್ಥಿತರಿರಲಿದ್ದಾರೆ.
Leave a Comment