ಹೊನ್ನಾವರ: ಪಟ್ಟಣದ ಕೆಳಗಿನ ಪಾಳ್ಯ ಕೃತಕ ನೆರೆಗೆ ಪ್ರಮುಖವಾಗಿದ್ದ ಒತ್ತುವರಿಯಾದ ಹಳ್ಳದ ಹೂಳೆತ್ತುವ ಮೂಲಕ ಈ ಭಾಗದ ಬಹುವರ್ಷದ ರಸ್ತೆ ನಿರ್ಮಾಣ ಮಾಡುವ ಮೂಲಕ ಬಹುವರ್ಷದ ಸಮಸ್ಯೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ ಬಗೆಹರಿಸಲು ಮುಂದಾಗಿದ್ದಾರೆ.

ಪ್ರತಿ ಬಾರಿ ಮಳೆಗಾಲದಲ್ಲಿ ಪ್ರಭಾತನಗರ ಗುಡ್ಡದ ನೀರು ಸರಾಗವಾಗಿ ಶರಾವತಿ ನದಿಗೆ ಸೇರದೇ ಅಕ್ಕಪಕ್ಕದ ಹತ್ತಾರು ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸುತ್ತಿದ್ದವು. ಈ ಸಮಸ್ಯೆ ಈ ಬಾರಿ ಬಗೆಹರಿಸುವ ಸಾರ್ಧಯತೆ ದಟ್ಟವಾಗಿದೆ. ಶಾಸಕ ದಿನಕರ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ವಿಶೇಷ ಮುತವರ್ಜಿ ವಹಿಸಿ ದಶಕಗಳಿಂದ ಹೊಳೆತ್ತದ ಕೋಡಿ ಹೂಳೆತ್ತಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿಸಲು ಮುಂದಾಗಿದ್ದಾರೆ. ಕಳೆದ ನಾಲೈದು ದಿನದಿಂದ ಹೂಳೆತ್ತಲು ಜೆಸಿಬಿ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಭಾಗದ 50ಕ್ಕೂ ಅಧಿಕ ಮನೆಗಳ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಲು ರಸ್ತೆ ಇಲ್ಲದೆ ಇರುವ ಚಿಕ್ಕ ಹಾದಿಯಲ್ಲಿ ತಮ್ಮ ದೈನಂದಿನ ವ್ಯವಹಾರ ನಡೆಸುತ್ತಿದ್ದರು. ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ಕಿಲೋಮೀಟರ್ ದೂರ ಎತ್ತಿಕೊಂಡು ಬಂದು ಅಂಬುಲೆನ್ಸ ಹಾಕುವ ಪರಿಸ್ಥಿತಿ ಇತ್ತು. ಇದುವರೆಗಿನ ಜನಪ್ರತಿನಿಧಿಗಳು ಭರವಸೆ ನೀಡಿದ್ದರೆ ಹೊರತೆ ಆ ಕನಸನ್ನು ನನಸು ಮಾಡಲು ಕಚ್ಚಾ ರಸ್ತೆಯು ನಿರ್ಮಾಣವಾಗಿದೆ.
ತಮ್ಮ ದಿನಬಳಕೆ ವಸ್ತು ಹಾಗೂ ಅನಾರೊಗ್ಯ ಪೀಡಿತರನ್ನು ಸಾಗಿಸುವಾಗ ಇಲ್ಲಿಯ ಸಮಸ್ಯೆಯನ್ನು ಕಣ್ಣಾರೆ ನೋಡಿದ ಶಿವರಾಜ ಮೇಸ್ತ ಶಾಸಕರ ಬಳಿ ತಿಳಿಸಿದ್ದಾರೆ. ಹೂಳೆತ್ತಿ ಕಚ್ಚಾ ರಸ್ತೆಯ ನಿರ್ಮಾಣದ ಬಳಿಕ 1 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಿಸಲು ಮುಂದಾಗುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇದರಿಂದ ಕೆಳಗಿನಪಾಳ್ಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ದಶಕಗಳಿಂದ ಹೂಳೆತ್ತದೆ ಕೃತಕ ನೆರೆಬರುವ ಸಮಸ್ಯೆ ಬಗೆಹರಿಯುತ್ತಿದ್ದು, ಸಂಚಾರ ನಡೆಸಲು ಈಗಾಗಲೇ ಕಚ್ಚಾ ರಸ್ತೆಯು ನಿರ್ಮಾಣವಾಗಲಿದೆ. ಅಕ್ಕಪಕ್ಕದ ನಿವಾಸಿಗಳು ಕಸವನ್ನು ಮತ್ತೆ ಇದೇ ಹಳ್ಳಕ್ಕೆ ಬೀಸಾಡದೆ ಒತ್ತುವರಿ ಮಾಡದೇ ಇದ್ದಲ್ಲಿ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ.
ಪಟ್ಟಣ ವ್ಯಾಪ್ತಿಯ ಈ ಪ್ರದೇಶವಾದರು ಕುಗ್ರಾಮದ ಅನುಭವವಾಗುತ್ತಿತ್ತು. ಅನಾರೊಗ್ಯ ಪೀಡಿತರನ್ನು ಸಾಗಿಸುವಾಗ, ಅಂತ್ಯಸಂಸ್ಕಾರ ಶವ ಕೊಂಡ್ಯುಯುವಾಗ ತೀರಾ ಸಂಕಷ್ಟಪಡುತ್ತಿದ್ದವು. ಮಳೆಗಾಲದಲ್ಲಿ ನೀರು ನುಗ್ಗಿ ಅನಾಹುತ ಸೃಷ್ಟಿಯಾಗುತ್ತಿತ್ತು. ಈ ಸಮಸ್ಯೆ ಈ ಹಿಂದೆ ಹೇಳಿದರೆ ಕಿವಿಗೂಡಲಿಲ್ಲ. ಇದೀಗ ನೂತನ ಅಧ್ಯಕ್ಷರು ಮುತವರ್ಜಿ ವಹಿಸಿ ಈ ಸಮಸ್ಯೆಯನ್ನು ಬಗೆಹರಿಸುವ ಮೂಲಕ ನೆರವಾಗಿದ್ದಾರೆ.
ಜೋಕಿಮ್ ಪುಟ್ತಾಡೊ ಸ್ಥಳಿಯ ನಿವಾಸಿ
ಕೆಲವು ವರ್ಷದ ಗಹಿಂದೆ ಆಟೋ ಚಾಲಕ ತೀರಿ ಹೋದಾಗ ಈ ಸಮಸ್ಯೆ ಕಣ್ಣಾರೆ ನೋಡಿದ್ದೆ. ಮಳೆಗಾಲದಲ್ಲಿಯೂ ಇಲ್ಲಿಯ ಪರಿಸ್ಥಿತಿ ಕಂಡು ಇದನ್ನು ಬಗೆಹರಿಸಬೇಕು ಎಂದು ಪಣತೊಟ್ಟು, ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇನೆ. ಈಗಾಗಲೇ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನದಲ್ಲಿ ಶಾಸಕರು 1 ಕೋಟಿ ವೆಚ್ಚದ ರಸ್ತೆಯನ್ನು ಬಂದರುವರೆಗೆ ಸೇರಿಸುವ ಯೋಜನೆಗೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ
ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ
Leave a Comment