ಹೊನ್ನಾವರ: ಕಳೆದ ೩೮ ವರ್ಷಗಳಿಂದ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೊನ್ನಾವರ ಪಟ್ಟಣ ಪಂಚಾಯತ ಸಿಬ್ಬಂದಿ ಮೀನಿನ್ ಡುಮಿಂಗ್ ಫರ್ನಾಂಡಿಸ್ ರವರ ನಿವೃತ್ತಿ ಬಿಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಪಟ್ಟಣದ ಚರ್ಚರಸ್ತೆಯ ಮೀನಿನ್ ಡುಮಿಂಗ್ ಫರ್ನಾಡಿಸ್‌ರವರು ಕಳೆದ ೩೮ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿವೃತ್ತ ಜೀವನ ಉತ್ತಮವಾಗಲಿ ಎಂದು ಶುಭಹಾರೈಸಿದರು.
ಮುಖ್ಯಾಧಿಕಾರಿ ಪ್ರವೀಣ ನಾಯಕರವರು ಮಾತನಾಡಿ ಮೀನಿನ್‌ರವರು ಯಾವುದೇ ಕೆಲಸವನ್ನು ಅಚ್ಚುಕಟ್ಟುತನದಿಂದ ಮಾಡುತ್ತಿದ್ದರು ಎಂದು ಅವರ ಶಿಸ್ತುಬದ್ಧ ಸೇವೆಯನ್ನು ಆಭಿನಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಮೇದಾ ನಾಯ್ಕ, ಸದಸ್ಯೆ ನೀಶಾ ಶೇಟ್, ಜೆ ಇ ಸದಾನಂದ ನಾಯ್ಕ . ಆರೋಗ್ಯ ನೀರೀಕ್ಷ ಸುನೀಲ, ಉಪಸ್ಥಿತರಿದ್ದರು. ವೆಂಕಟೇಶ ನಾಯ್ಕ ಸ್ವಾಗತಿಸಿದರು.ಶಕುಂತಲ ನಾಯ್ಕ ವಂದಿಸದರು. ಜೋನ ಲೋಪಿಸ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment