ಹೊನ್ನಾವರ; ಅರಣ್ಯ ಇಲಾಖೆ ಮಂಕಿ ವಲಯದ ವತಿಯಿಂದ ಚಿತ್ತಾರ ಗ್ರಾಮದ ೮ ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಶಾಸಕ ಸುನೀಲ ನಾಯ್ಕ ವಿತರಿಸಿದರು.ಅರಣ್ಯ ಇಲಾಖೆಯಿಂದ ಬಿ.ಪಿ.ಎಲ್. ಕಾರ್ಡದಾರರಿಗೆ ನೀಡಲಾಗುವ ಉಚಿತ ಅಡುಗೆ ಅನಿಲವನ್ನು ಚಿತ್ತಾರ ಗ್ರಾಮದ ೮ ಕುಟುಂಬಗಳಿಗೆ ಮಂಕಿ ಸರ್ಕಾರಿ ಕಾಲೇಜಿನ ಆವರಣದಲ್ಲಿ ಶಾಸಕ ಸುನೀಲ ನಾಯ್ಕ ವಿತರಿಸಿದರು.
ನಂತರ ಮಾತನಾಡಿ ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದ್ದು, ಅಧಿಕಾರಿಗಳು ಜನಸಾಮನ್ಯರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನುಭವಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು. ವಲಯ ಅರಣ್ಯಾಧಿಕಾರಿ ವರದರಂಗನಾಥ ಮಾತನಾಡಿ ಸರ್ಕಾರದ ನೀಡುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸ್ವಾವಲಂಭಿಗಳಾಗಬೇಕು.
ಅರಣ್ಯ ನಾಶದಿಂದ ಮನುಕುಲಕ್ಕೆ ಅಪಾಯಕಾರಿಯಾಗಿದ್ದು, ಅರಣ್ಯ ಸಂರಕ್ಷಣೆ ಮುಂದಾಗಬೇಕಿದೆ. ಇಲಾಖೆ ವಿವಿಧ ಬಗೆಗಳನ್ನು ಗಿಡಗಳನ್ನು ನೀಡುತ್ತಿದ್ದು, ಅದನ್ನು ಬೆಳಿಸುವ ಮೂಲಕ ಪರಿಸರ ಕಾಳಜಿ ತೋರುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
Leave a Comment