ಯಲ್ಲಾಪುರ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸುಧಾರಣೆ ಯೋಜನೆಯನ್ನು ಕಾಳಿ ನದಿಯ ತಟ್ಟಿಹಳ್ಳ ಹಿನ್ನೀರಿನಿಂದ ೦.೧೩ ಟಿಎಂಸಿ ನೀರು ಪೂರೈಕೆ ಮಾಡಲು ಸರಕಾರದಿಂದ ಅನುಮೋದನೆಯಾದ ಸುಮಾರು ೯೧ ಕೋಟಿ ರೂಗಳ ಅಂದಾಜು ಪತ್ರಿಕೆಗೆ ಸದಸ್ಯರು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.
ಸದಸ್ಯ ರಾಧಾಕೃಷ್ಣ ನಾಯ್ಕ ,ಸತೀಶ ನಾಯ್ಕ ಮಾತನಾಡಿ ನಿಯಮಾವಳಿಯಲ್ಲಿ ಶೇ೫ ರಷ್ಟು ಪಪಂ ವೆಚ್ಚ ಭರಿಸಬೇಕಾಗಿರುವದರಿಂದ ಇದು ಪಪಂ ಗೆ ಆರ್ಥಿಕ ಹೊರೆಯಾಗಬಹುದು ಎಂದರು ಇದಕ್ಕೆ ಮುಖ್ಯಾಧಿಕಾರಿ ಅರುಣ ನಾಯ್ಕ ಪ್ರತಿಕ್ರಿಯಿಸಿ ಮುಂದೆ ಬರುವ ಯೋಜನೆಗಳನ್ನು ಹಂತ ಹಂತವಾಗಿಅನುಷ್ಠಾನಗೊಳಿಸಿ ಆರ್ಥಿಕ ಕ್ರೂಡೀಕರಣ ಮಾಡಲಾಗುವದು. ಎಂದರು ನಂತರ ಸರ್ವ ಸದಸ್ಯರು ಅನುಮೋದನೆ ನೀಡಿದರು.
ಸದಸ್ಯ ಸೋಮೆಶ್ವರ ನಾಯ್ಕ ವಾರ್ಡಗಳ ಅಭಿವೃದ್ದೀಗೆ ಬಂದಿರುವ ಅನುದಾನದಲ್ಲಿ ಹಿಂದೂ ಸ್ಮಶಾನ ಭೂಮಿ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದಾಗ ಸದಸ್ಯರ ನಡುವೆ ವಾಗ್ವಾದ ನಡೆದು ಸ್ಮಶಾನಕ್ಕಾಗಿಯೇ ಬೇರೆ ಅನುದಾನ ಬಿಡುಗಡೆ ಮಾಡಲಿ ಎಂದರು. ಕೆಲು ಕಾಮಗಾರಿಗಳಿಗೆ ಒಂದೇ ಕೆಲಸಕ್ಕೆ ಎರಡೆರಡು ಬಾರಿ ಕ್ರಿಯಾಯೋಜನೆ, ಟೆಂಡರ ಗೆ ಅನುಮೋದನೆ ಪಡೆದಿದ್ದಾರೆ ಎಂದು ಆರೋಪಿಸಿದ ಸದಸ್ಯರು ಗುತ್ತಿಗೆದಾರರಿಗೆ ಹಣ ನೀಡುವದಕ್ಕೆ ನಮ್ಮ ವಿರೋಧವಲ್ಲ , ಹಣ ಪಾವತಿಸಿದ ರೀತಿಗೆ ನಮ್ಮ ವಿರೋಧವಿದೆ ಎಂದರು.
ಪಪಂ ಮುಖ್ಯಧಿಕಾರಿ ಎರಡೆರಡು ಬಾರಿ ಯಾವದೇ ಕಾರಣಕ್ಕೂ ಟೆಂಡರ ಆಗಿಲ್ಲ ,ಗುತ್ತಿಗೆದಾರರಿಗೆ ಸರಿಯಾದ ರೀತಿಯಲ್ಲಿ ಹಣವೂ ಬಟವಡೆಯಾಗಿದೆ ಎಂದರು.
ಶುದ್ಧ ನೀರು ಘಟಕಗಳ ದುರಸ್ಥಿಗೆ, ಕಚೇರಿ ಉಪಯೋಗಕ್ಕಾಗಿ ೧ ವರ್ಷ ಬಾಡಿಗೆ ವಾಹನಗಳನ್ನು ಪಡೆದುಕೊಳ್ಳಲು ಮರುಟೆಂಡರ ಕರೆಯಲು ಅನುಮೋದನೆ ನೀಡಲಾಯಿತು.ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ , ಸ್ಥಾಯಿ ಸಮಿತಿಯ ಅಧ್ಯಕ್ಷ ಅಮಿತ್ ಅಂಗಡಿ ,ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
Leave a Comment