ಯಲ್ಲಾಪುರ:ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಗಳೊಂದಿಗೆ ಸಂಘಟನೆಗಳು ನೀಡುವ ಸೌಲಭ್ಯ ಗಳನ್ನು ತಲುಪಿಸಲು ನಮ್ಮ ಇಲಾಖೆ ಸಹಕಾರ ನೀಡುತ್ತಿದೆ.ವಿಕಲಚೇತನರಿಗೆ ಗಾಲಿ ಕುರ್ಚಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕಾರ್ಯ ಸೇವೆನ ಹಿಲ್ಸ ಎಂಟರಪ್ರೆöÊಸಿಸ್ ಸಂಘಟನೆಯಿAದ ಮಾಡಿದ್ದಾರೆ. ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ೮೩೪ ದಿವ್ಯಾಂಗರಿದ್ದಾರೆ. ಶೇ ೪೦ರಷ್ಟು ಅಂಗವೀಕಲರಿದ್ದವರಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.
ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದೀ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಹೇಳಿದರು. ಅವರು ಪಟ್ಟಣದ ರಾಘವೇಂದ್ರ ಬುದ್ದಿ ಮಾಂದ್ಯ ಮಕ್ಕಳ ವಸತಿಯುತ ಶಾಲೆ ಹಾಗೂ ವೃದ್ಧಾಶ್ರಮ ಕೇಂದ್ರದಲ್ಲಿ ದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪ್ರೋವಿಜನ್ ಏಷಿಯದ ಸೆವೆನ್ ಹಿಲ್ಸ ಎಂಟರಪ್ರೆöÊಸಿಸ್ ಶಿಡ್ಲಘಟ್ಟ ವತಿಯಿಂದ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಶಿಬಿರ, ಗಾಲಿಕುರ್ಚಿ ,ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ವಿಕಲಚೇತನರ ಕುರಿತು ಗ್ರಾಮಮಟ್ಟದಲ್ಲಿರುವ ವಿಎಸ್ಆರ್ ಡಬ್ಲೂ ಅಧಿಕಾರಿಗಳ ಗಮನಕ್ಕೆ ತಂದರೆ ಜಿಲ್ಲೆಯಿಂದ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ವಿಕಲಚೇತನರನ್ನು ಪ್ರೀತಿಯಿಂದ ಕಂಡು ನಮ್ಮಿಂದಾದ ಸಹಾಯಹಸ್ತವನ್ನು ನೀಡಬೇಕು ಎಂದರು.
ಸೇವೆನ್ ಹಿಲ್ಸ ಸಂಘಟನೆಯ ವಿಕಲಚೇತನ ವಿಭಾಗದ ವ್ಯವಸ್ಥಾಪಕ ಮುನಿಸ್ವಾಮಿ ಮಾತನಾಡಿ ವಿಕಲಚೇತನರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕುವ ಹಕ್ಕಿದೆ. ಅವರನ್ನು ಸಮಾಜಮುಖಿಗೆ ತರುವ ನಿಟ್ಟಿನಲ್ಲಿ ಕಳೆದ ೧೮ ವರ್ಷಗಳಿಂದ ವಿಕಲಚೇತನರಿಗಾಗಿಯೇ ನಮ್ಮ ಸಂಘಟನೆ ಕಾರ್ಯೋನ್ಮುಖವಾಗಿದೆ. , ಸ್ವತಃ ವಿಕಲಚೇತನನಾದ ನಾನು ಅವರ ಕಷ್ಟ ಅರ್ಥವಾಗುತ್ತದೆ.ವಿಕಲಾಂಗರಿಗೆ ಗಾಲಿ ಕುರ್ಚಿ ಯೇ ಕಾಲು ಇದ್ದಂತೆ ಇದರಿಂದ ಅವರು ಸ್ವಾವಲಂಬಿಯಾಗಿ ತಮ್ಮನಿತ್ಯಕರ್ಮ ಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.ಅವರೊಂದಿಗೆ ನಾವು ಇದ್ದೇವೆ ಎಂದು ನಮ್ಮ ಅವರಿಗೆ ಧೈರ್ಯ ತುಂಬುವ ಕೆಲಸಸಂಘಟನೆ ಮಾಡುತ್ತಿದೆ ಎಂದರು.ನಿರ್ದೇಶಕ ಸೆಲ್ವೀನ್ ಮಾತನಾಡಿದರು.
ಬೆಂಗಳೂರಿನ ವೈದ್ಯ ತಂಡದವರು ವಿಶೇಷಚೇತನ ತಪಾಸಣೆ ಶಿಬಿರ ನಡೆಸಿದರು.ಸುಮಾರು ೧೫ ಗಾಲಿ ಕುರ್ಚಿಗಳನ್ನು ತಾಲೂಕಿನಲ್ಲಿ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಘವೇಂದ್ರ ಭಟ್ಟ , ಮುಖ್ಯೋಪಾದ್ಯಾಪಕ ಚಂದ್ರಪ್ಪ ಉಪಸ್ಥಿತರಿದ್ದರು.ಅಕ್ಷತಾ ಶ್ರೇಯಸ್ ಪ್ರಾರ್ಥಿಸಿದರು.ತಾಲೂಕಾ ಮಹಿಳಾ ಮತ್ತು ಶಿಶು ಅಭಿವೃದ್ದೀಇಲಾಖೆಯ ಪುಷ್ಪ ಹಂಜಗಿ ನಿರ್ವಹಿಸಿದರು.
Leave a Comment