• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಣಿ ಚೆನ್ನಭೈರಾದೇವಿಯ ಸಾಹಸ ಸಾರುವ ಶಾಶ್ವತ ಚಿತ್ರಣ ನಿರ್ಮಾಣ ಮಾಡಲು ಸಹಕಾರ ನೀಡುದಾಗಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ

July 21, 2021 by Vishwanath Shetty Leave a Comment

ಹೊನ್ನಾವರ: 54 ವರ್ಷ ಆಳಿದ್ದ ಚೆನ್ನಭೈರಾದೇವಿಯು ಆಡಳಿತದಲ್ಲಿ ಕಾಳುಮೆಣಸು ರಾಣಿ ಎಂದೆ ಚಿರಪರಿಚಿತರಾಗಿದ್ದಾರೆ. ನಾಡನ್ನು ಆಳಿ ಹೋದ ಹಲವು ರಾಣಿಯರ ಸಾಹಸ, ಶೌರ್ಯವನ್ನು, ಆಡಳಿತವನ್ನು ನೆನಪಿಸುವ ಉತ್ಸವಗಳು ನಡೆಯುತ್ತಿದೆ. ಹಲವರ ಮೂರ್ತಿಗಳ ಸ್ಥಾಪನೆಯಾಗಿದೆ. ಇವರ ಆಳ್ವಿಕೆಯ ಕಥಾಸಾರವನ್ನು ಪಠ್ಯಪುಸ್ತಕದಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳಿಗೆ ಒಂದು ತರಗತಿಯ ವಿಷಯವಾಗಿದೆ. ಇವರ ಸಾಧನೆಯ ಕವಿತೆಗಳು ಬಂದಿವೆ.

ಆದರೆ 52 ವರ್ಷಕಾಲ ಕರಾವಳಿಯ ಬಹುಭಾಗ ಮತ್ತು ಮಲೆನಾಡನ್ನು ಆಳಿದ ಚೆನ್ನಭೈರಾದೇವಿಯ ಕುರಿತು ನೆನಪಿಸುವಂತಹ ಯಾವುದೇ ಘಟನೆ ಇಲ್ಲದೇ ಇರುವುದು ನಿಜಕ್ಕೂ ಆಶಚರ್ಯ ಮೂಡಿಸಿದೆ. ಇದನ್ನು ಮನಗಂಡು ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ರಾಣಿ ಚೆನ್ನಭೈರಾದೇವಿಯ ಹೆಸರಿನಲ್ಲಿ ಒಂದು ಥೀಮ್ ಪಾರ್ಕ್ ರಚಿಸಲು ಧರ್ಮಸ್ಥಳದಿಂದ ಸಕಲ ಪ್ರೋತ್ಸಾಹ ನೀಡುವುದಾಗಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

215165736 902764900309575 6024341910128172647 n
214119498 902764956976236 4379008343904122857 n


ಕಾರ್ಯನಿಮಿತ್ತ ಧರ್ಮಸ್ಥಳದಿಂದ ಧಾರವಾಡ ಹೋಗುವಾಗ ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕರುಗಳಾದ ಸುನೀಲ ನಾಯ್ಕ ಮತ್ತು ದಿನಕರ ಶೆಟ್ಟಿ ಇವರೊಂದಿಗೆ ಮಾತುಕತೆ ನಡೆಸಿದ ಹೆಗ್ಗಡೆಯವರು ಸರ್ಕಾರದಿಂದ ಸ್ಥಳಕೊಡಿಸಿ, ನಾಡಿನ ಪ್ರಸಿದ್ಧ ಕಲಾವಿದರಿಂದ ರಾಣಿಚೆನ್ನಭೈರಾದೇವಿಯ ತಾಮ್ರದ ಮೂರ್ತಿ ಮಾಡಿಸಿಕೊಡುತ್ತೇನೆ. ಮೂರ್ತಿಯ ಸುತ್ತಲೂ ರಾಣಿಯ ಸಾಹಸದ ಕಥೆಗಳನ್ನು ವರ್ಣಿಸುವಂತಹ ಮೂರ್ತಿಗಳಿರಲಿ ಎಂದರು. ಹೊನ್ನಾವರಕ್ಕೆ ಪ್ರವಾಸೊದ್ಯಮದ ಜೊತೆಗೆ ಪುರಾತನ ಸ್ಥಳದ ಮಾಹಿತಿ ಮುಂದಿನ ತಲೆಮಾರಿಗೆ ಪರಿಚಯಿಸಲು ಈ ಕಾರ್ಯಕ್ಕೆ ಮುಂದಾಗಿರುದಾಗಿ ಕಾರ್ಯನಿರ್ವಹಿಸಿದರು.

ಸಂಪೂರ್ಣ ಮನಸ್ಸಿನಿಂದ ಈ ಯೋಜನೆಯನ್ನು ಸ್ವಾಗತಿಸುತ್ತೇವೆ, ಸಹಕಾರ ನೀಡುತ್ತೇವೆ ಎಂದು ಇಬ್ಬರೂ ಶಾಸಕರು ಭರವಸೆ ನೀಡಿದರು. ಹಿರಿಯ ಉದ್ಯಮಿ ಮುರಳೀಧರ ಪ್ರಭುಕುಮಟಾ, ಹಾಗೂ ಪತ್ರಕರ್ತ ಜಿ.ಯು. ಭಟ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಗೌಡ, ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


ನನ್ನನ್ನು ಈ ಕೃತಿ ತುಂಬ ಸೆಳೆದ ಕಾರಣ ಕಾದಂಬರಿಕಾರ ಗಜಾನನ ಶರ್ಮ ಮತ್ತು ಪ್ರಸಿದ್ಧ ಲೇಖಕ, ಇತಿಹಾಸಜ್ಞ, ಹಂಪ ನಾಗರಾಜಯ್ಯ ಇವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಹೆಗ್ಗಡೆಯವರು ರಾಣಿ ಚೆನ್ನಭೈರಾದೇವಿ ಗೇರುಸೊಪ್ಪವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಕಾಳುಮೆಣಸಿನ ಮತ್ತು ವಾಣಿಜ್ಯೋತ್ಪನ್ನವನ್ನು ವ್ಯವಹಾರ ನಡೆಸುತ್ತ ಬ್ರಿಟೀಷ್ ಮತ್ತು ಪೋರ್ಚುಗಲ್ ಸೈನ್ಯದೊಂದಿಗೆ ಯುದ್ಧ ಮಾಡಿದ ಖ್ಯಾತಿವಂತಳಾದ್ದರಿಂದ ಅವಳ ಅರ್ಹತೆಗೆ ತಕ್ಕುದಾದ ಸ್ಮಾರಕ ನಿರ್ಮಾಣವಾಗಬೇಕು ಎಂದು ಹೇಳಿದ ಹೆಗ್ಗಡೆಯವರು ಮುಂದುವರಿಯಿರಿ, ನಾವಿದ್ದೇವೆ ಅಂದರು.

ಮುರುಳೀಧರ ಪ್ರಭು ಅವರು ಜೊತೆಯಲ್ಲಿ ರಾಣಿಯ ಹೆಸರಿನಲ್ಲಿ ಮಹಿಳೆಯರಿಗಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ಮಾಡಿಕೊಡಿ, ನವೆಂಬರ್ ಒಳಗಾಗಿ ಅರಣ್ಯ ಇಲಾಖೆ ಸ್ಥಳಾವಕಾಶ ನೀಡಿದರೆ ಅದೇ ಸಮಯದಲ್ಲಿ ಒಂದು ವಿಚಾರಸಂಕಿರಣ ನಡೆಸಿ, ಇತಿಹಾಸಜ್ಞರನ್ನು ಕರೆಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದರು. ಆಗ ಹೆಗ್ಗಡೆಯವರು ಥೀಮ್ ಪಾರ್ಕ್, ಮೂರ್ತಿ ಹೇಗಿರಬೇಕು ಎಂಬ ಕುರಿತು ಚಿತ್ರ ಸ್ಪರ್ಧೆ ನಡೆಸೋಣ, ಈಗಾಗಲೇ ಕೆಲವು ಶಿಲ್ಪಿಗಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ವಿಚಾರಸಂಕಿರಣವನ್ನು ಉದ್ಘಾಟಿಸಲು ಬರುವುದಾಗಿ ಹೆಗ್ಗಡೆಯವರು ಒಪ್ಪಿಗೆ ಸೂಚಿಸಿದರು.

ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ನೆರಹಾವಳಿ ಎದುರಿಸಲು 4 ನಾಡದೋಣಿ ಸಿದ್ದ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿ/nabard recruitment 2021

ಮಾಂಸದಾಸೆಗ ಮೇಯಲು ಬಿಟ್ಟ ಆಕಳನ್ನು ತುಂಡು ತುಂಡಾಗಿ ಕತ್ತರಿಸಿದ ಪಾಪಿ ಗೋ ಭಕ್ಷಕರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಇತಿಹಾಸಜ್ಞ, ಚೆನ್ನಭೈರಾದೇವಿಯ ಕುರಿತು ನೆನಪಿಸುವಂತಹ, ಧರ್ಮಸ್ಥಳದಿಂದ ಧಾರವಾಡ ಹೋಗುವಾಗ, ಪಟ್ಟಣದ ಪ್ರವಾಸಿಮಂದಿರ, ಪ್ರವಾಸೊದ್ಯಮದ ಜೊತೆಗೆ ಪುರಾತನ ಸ್ಥಳದ ಮಾಹಿತಿ, ಪ್ರಸಿದ್ಧ ಲೇಖಕ, ಮಲೆನಾಡನ್ನು ಆಳಿದ ಚೆನ್ನಭೈರಾದೇವಿಯ, ಮೂರ್ತಿಗಳಿರಲಿ, ಮೂರ್ತಿಯ ಸುತ್ತಲೂ ರಾಣಿಯ ಸಾಹಸದ ಕಥೆಗಳನ್ನು ವರ್ಣಿಸುವಂತಹ, ರಾಣಿಚೆನ್ನಭೈರಾದೇವಿಯ ತಾಮ್ರದ ಮೂರ್ತಿ ಮಾಡಿಸಿಕೊಡುತ್ತೇನೆ, ಹಂಪ ನಾಗರಾಜಯ್ಯ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...