ಹೊನ್ನಾವರ; ಕಾಸರಕೋಡು ವಾಣಿಜ್ಯ ಬಂದರು ವಿವಾಧ ಪ್ರತಿಭಟನೆಯ ಬಳಿಕ ಇದೀಗ ದೂರು ಪ್ರತಿದೂರು ಮನವಿ ಮೂಲಕ ಆಗ್ರಹದ ಹಂತ ತಲುಪಿದೆ. ಕೆಲ ದಿನದ ಕಂಪನಿಯ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಹಶೀಲ್ದಾರ ಮನವಿ ಸಲ್ಲಿಕೆಯ ಬೆನ್ನಲ್ಲೆ ಮೀನುಗಾರರು ಕೂಡಾ ನ್ಯಾಯಕ್ಕಾಗಿ ಶನಿವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉಚ್ಛ ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮತ್ತು ನಮ್ಮ ಮೀನುಗಾರಿಕೆಯ ಬಳಕೆ ಭೂಮಿಯಲ್ಲಿ ವಾಣಿಜ್ಯ ಬಂದರಿಗೆ ಸಂಬಂದಿಸಿದ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ರಸ್ತೆ ಕಾಮಗಾರಿಕೆಗೆ ಕಂಟ್ರಾಕ್ಟರ ಲೈಸೆನ್ಸ್ ಇಲ್ಲದ ರಮೇಶ್ ತಿಮ್ಮಪ್ಪ ನಾಯ್ಕ್ ತನ್ನ ಗುಂಡಾಗಳ ಮೂಲಕ ತನ್ನ ಕಂಪನಿ ಶ್ರೀ ಚಕ್ರ ಎಕ್ಸಿಮ ಸಿಬ್ಬಂದಿಗಳೊಂದಿಗೆ ಕಾಸರಕೋಡ ಟೊ೦ಕಾದ ಮಹಿಳೆಯರ ಮೇಲೆ, ವಯೋ ವ್ರದ್ದರಿಗೆ, ಮಕ್ಕಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಆಕ್ರಮಣಕಾರಿ ಹಲ್ಲೆಗೆ ಮುಂದಾಗುತ್ತಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದರೆ ಸುಳ್ಳು ದೂರನ್ನು ತನ್ನ ಸಿಬ್ಬಂದಿಗಳ ಮೂಲಕ ದಾಖಲಿಸಿರುತ್ತಾರೆ. ಈ ಹಿಂದೆಯೂ ಹಲವು ಬಾರಿ ಬೇರೆ ವಿಧದಲ್ಲಿ ವಿನಾಕಾರಣ ನೀಡಿ ಸುಳ್ಳು ದೂರನ್ನು ನೀಡಿದ್ದು ಪೊಲೀಸ್ ಇಲಾಖೆಗೆ ಗಮನಕ್ಕೆ ಬಂದಿದೆ. ಮತ್ತೆ ಅದನ್ನು ಆರಂಭಿಸಿದ್ದು ಇಲ್ಲಿಗೆ ಇದು ಕೊನೆಯಾಗಬೇಕು. ಶ್ರೀ ಚಕ್ರ ಎಕ್ಸಿಮ ಮೇಲ್ವಿಚಾರಣೆ ಮಾಡುವ ಕಂಪನಿಯಾಗಿದ್ದು, ರಸ್ತೆ ಕಾಮಗಾರಿಕೆಯ ಗುತ್ತಿಗೆ ಕಂಪನಿ ಆಗಿರುವದಿಲ್ಲ.
ಕಾರ್ಮಿಕ ಇಲಾಖೆಯಲ್ಲಿ ಇವರ ಕಂಪನಿಯು ಅಥವಾ ಸಿಬ್ಬಂದಿಗಳ ವಿವರ ಇರುವದಿಲ್ಲ. ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ತರಾತುರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ರಸ್ತೆ ಹಾಗೂ ಬಂದರಿಗೆ ಹಿಂಬದಿಯ ದಾರಿಯಿಂದ ಕಾನೂನು ಉಲ್ಲಂಘನೆ ಮಾಡಲು ದುಬಾರಿ ಮೋಟರ ಬೈಕಿನಲ್ಲಿ ಕಪ್ಪು ಸಮವಸ್ತ್ರದ ಗೂಂಡಾ ಗುಂಪು ಬಡ ಕೂಲಿ ಕಾರ್ಮಿಕರು ಎಂದು ಬಿಂಬಿಸಿ ಕಾಸರಕೋಡ ಟೊ೦ಕಾ ಮೀನುಗಾರರ ವಾಸ ಸ್ಥಳಕ್ಕೆ ಕಳುಹಿಸಿ ಮೀನುಗಾರ ಮಹಿಳೆಯರ ಮೇಲೆ, ವಯೋವೃದ್ದರ ಮೇಲೆ ಜೀವ ಬೆದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
ಈ ಹಿಂದೆಯು ಹಲವರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಸಾಂಪ್ರದಾಯಿಕ ಮೀನುಗಾರರಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಮಹಿಳೆಯರ ಮಾನ,ಪ್ರಾಣ, ಜೀವ ರಕ್ಷಣೆಗಾಗಿ ಪೋಲಿಸ್ ಇಲಾಖೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.ವಶ್ರೀ ಚರಕ ಎಕ್ಸಿಮ ಕಂಪನಿಯ ಬಗ್ಗೆ ಕಾರ್ಮಿಕ ಇಲಾಖೆ ಮೂಲಕ ವಿಚಾರಣೆ ಕೈಗೊಂಡು ಇವರ ಮೇಲೆ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಹಶೀಲ್ದಾರ ನಾಗರಾಜ ನಾಯ್ಕಡ ಮನವಿ ಸ್ವೀಕರಿಸಿದರು ನಂತರ ಪೋಲಿಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯತ ಸದಸ್ಯರು ಮೀನುಗಾರ ಮುಖಂಡರು ಆದ ಜಗದೀಶ ತಾಂಡೆಲ್ ಮಾತನಾಡಿ ಸೋಮಾರಿಗಳ ತಂಡ ಬೈಕನಲ್ಲಿ ವೇಗವಾಗಿ ಬಂದು ಹಲ್ಲೆ ಹಾಗೂ ನಿಂದನೆ ಮಾಡುತ್ತಾರೆ. ಸುಳ್ಳು-ಸುಳ್ಳು ಆರೋಪಮಾಡಿ ಪ್ರಕರಣ ದಾಖಲಿಸುವಂತ ಕೆಲಸ ಮಾಡುತ್ತಿರುದನ್ನು ಖಂಡಿಸುತ್ತೆವೆ. ನನ್ನ ಮೇಲು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದರು
ಈ ಸಂದರ್ಭದಲ್ಲಿ ಮೀನುಗಾರ ಮುಖಂಡರು ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment