ಹೊನ್ನಾವರ : ತಾಲೂಕಿನ ಕಾಸರಕೋಡ ಮೂಲದ ವ್ಯಕ್ತಿಯೊಬ್ಬ ಜಾಹೀರಾತಿನ ಲಿಂಕ್ ಅನ್ನು ಒತ್ತಿ ತನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡ ಘಟನೆ ವರದಿಯಾಗಿದ್ದು. ಈ ಸಂಬಂಧ ವಂಚನೆಗೊಳಗಾದಾತ ಕಾರವಾರದಲ್ಲಿರುವ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಹಣ ಕಳೆದುಕೊಂಡಾತ ಟೊಂಕಾ ಕಾಸರಕೋಡದ ಮೈದೀನ್ ಖಾಸೀಂ ಸಾಬ್ ಎಂಬವರಾಗಿದ್ದು ಇವರು ಕೆಲದಿನಗಳ ಹಿಂದೆ ತಮ್ಮ ಪೇಸ್ಬುಕ್ ಖಾತೆಯನ್ನು ನೋಡುತ್ತಿರುವಾಗ ಡಿಜಿಟಲ್ ಇಂಡಿಯಾ ಸಿ.ಎಸ್.ಪಿ. ಪಾಯಿಂಟ್ ಮಿನಿ ಬ್ಯಾಂಕ್ ಜಾಹೀರಾತು ಕಾಣಿಸಿಕೊಂಡಿದ್ದು ಇದರ ಬಗ್ಗೆ ತಿಳಿದುಕೊಳ್ಳಲು ಲಿಂಕ್ ಕ್ಲಿಕ್ ಮಾಡಿದ್ದರು.

ಮಾರನೇ ದಿನ ಸಿ.ಎಸ್.ಪಿ ಕಂಪನಿಕಡೆಯಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದು ಮಿನಿ ಬ್ಯಾಂಕ್ ಎನ್ನುವ ಆ್ಯಪ್ ಇದೆಅದನ್ನು ಬಳಸುವಂತೆ ತಿಳಿಸಿದ್ದಾನೆ. ನೀವು ಮಿನಿ ಬ್ಯಾಂಕ್ ತೆರೆದು ಹಣಕಾಸಿನ ವ್ಯವಹಾರ ನಿರ್ವಹಿಸಲು ಎರಡು ಕಂಪ್ಯೂಟರ್ ನಾಲ್ಕು ಸಿ.ಸಿ. ಕ್ಯಾಮೆರಾ ಕಳುಹಿಸುತ್ತೇವೆ. ಹಣ ವರ್ಗಾವಣೆ ಮಾಡಿದರೆ ಕಮೀಷನ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ.
ಮಿನಿ ಬ್ಯಾಂಕ್ ತೆರೆಯಲು ಹತ್ತು ಸಾವಿರದ ಒಂದು ನೂರು ರೂಪಾಯಿ ಅನ್ನು ಕಂಪನಿಯ ಖಾತೆಗೆ ಜಮಾ ಮಾಡುವಂತೆ ತಿಳಿಸಿದಾಗ ನಂಬಿದ ಮೈದೀನ್ ಹಣ ವರ್ಗಾಯಿಸಿದ್ದಾರೆ.



shri devaki krishna ,wash point ,karki naka honavar, contact; sachin mesta 9538529046,8310014860
ಮಾರನೇ ದಿನ ಮತ್ತೆ ಕಂಪನಿ ಕಡೆಯವರೆಂದು ಹೇಳಿಕೊಂಡು ಕರೆ ಮಾಡಿದ ವಂಚಕರು ನಿಮ್ಮ ಖಾತೆಯಲ್ಲಿ 50 ಸಾವಿರ ಹಣ ಇರಬೇಕು ಅದನ್ನ ಐ.ಆರ್.ಬಿ ಯವರು ಪರಿಶೀಲಿಸಲಿದ್ದಾರೆ ಒಂದು ಗಂಟೆಯ ನಂತರ ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ನಂಬಿದ ಮೈದೀನ್ 50 ಸಾವಿರ ಹಣವನ್ನು ವಂಚಕರು ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ನಂತರ ಕಂಪನಿಯವರ ಪ್ರತಿಕ್ರಿಯೆ ಇಲ್ಲದಿರುವುದನ್ನು ಕಂಡಾಗ ಮೈದೀನ್ ಗೆ ತಾವು ಮೋಸ ಹೋಗಿದ್ದು ಅರಿವಾಗಿದೆ.
Leave a Comment