ಹೊನ್ನಾವರ – ತಾಲೂಕಿನ ಹಳದೀಪುರದ ಕಲ್ಲಟ್ಟೆ ಗ್ರಾಮಸ್ಥರು ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಲ್ಲಟ್ಟೆ ಭಾಗದಲ್ಲಿ 70 ರಿಂದ 80 ಪರಿಶಿಷ್ಟ ಕುಟುಂಬದವರು ವಾಸಿಸುತ್ತಿದ್ದು, ಮೃತರಾದರೆ ಅಂತಿಮಸಂಸ್ಕಾರ ನಡೆಸಲು ಸೂಕ್ತವಾದ ಸ್ಥಳವಿಲ್ಲ. ಅನಾದಿಕಾಲದಿಂದಲೂ ಅಂತ್ಯ ಸಂಸ್ಕಾರ ಮಾಡುವ ಸ್ಥಳದಲ್ಲಿ ಜಾಗದ ಮಾಲೀಕರಿಗೆ ನ್ಯಾಯಲಯದ ಮೂಲಕ ಆಕ್ಷೇಪ ಮಾಡದಂತೆ ಆದೇಶವಾಗಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ನಾಯ್ಕ ಜಾಗದ ಮಾಲೀಕರೊಂದಿಗೆ ಮಾತನಾಡಿ ಸ್ಥಳ ನೀಡಲು ಒಪ್ಪಿದ್ದಾರೆ. ಆದರೆ ಸ್ಥಳಕ್ಕೆ ಸಮಪ್ಕವಾದ ರಸ್ತೆ ಮಾಡಿ ಸ್ಮಶಾನ ಸ್ಥಳವನ್ನು ಸರ್ಕಾರದ ಯೋಜನೆಯಲ್ಲಿ ಸೇರಿಸಿ ಅಭಿವೃದ್ದಿ ಪಡಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ, ನಿವೃತ್ತ ತಹಶೀಲ್ದಾರ ವಿ.ಆರ್.ಗೌಡ, ಗ್ರಾಮಸ್ಥರಾದ ಶಂಕರ ಮುಕ್ರಿ, ಲಕ್ಷಣ ಮುಕ್ರಿ, ಜೀವನ ಮುಕ್ರಿ, ವೆಂಕ್ರಟಮಣ ಮುಕ್ರಿ, ವಿನಾಯಕ ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು.
shri devaki krishna wash point karki naka honavar contact; sachin mesta 9538529046,8310014860
Leave a Comment