ಹೊನ್ನಾವರ: ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯವರು ಮಡಿವಂತಿಕೆ ಬಿಟ್ಟರೆ ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲಿದೆ ಎಂದು ಕಾರ್ಮಿಕ ಸಚೀವರು ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು.
ಪ್ರವಾಸೊದ್ಯಮ ಇಲಾಖೆಯ ಸಹಕಾರದ ಮೇರೆಗೆ ಉದ್ಘಾಟನೆಗೊಂಡ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣದ ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿ ಪ್ರವಾಸೊದ್ಯಮ ದೊಡ್ಡ ಇಂಡಸ್ಟ್ರೀ ಆಗಿದ್ದು, ನಮ್ಮ ಜಿಲ್ಲೆಯಲ್ಲಿರುವ ಸೌಲಭ್ಯವನ್ನು ಬಳಸಿಕೊಂಡು ಈ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಬೇಕಿದೆ.
ಜಿಲ್ಲೆಯು ಉತ್ತಮ ಪರಿಸರ ಹೊಂದಿದ್ದು ಮಡಿವಂತಿಕೆ ಕಾರಣದಿಂದ ಹಿಂದಿದೆ. ನೆರೆಯ ಗೋವಾ ರಾಜ್ಯ 111 ಕೀಮೀ ಕರಾವಳಿ ತೀರದಲ್ಲಿ ೧೪ ಲಕ್ಷ ಜನಸಂಖ್ಯೆ ಇದೆ. 7ಕ್ಕೂ ಹೆಚ್ಚಿನ ಕ್ಯಾಶನೋ ಮೂಲಕ 3995 ಹೆಚ್ಚಿನ ಹೊಟೇಲಿದ್ದು 55ಕ್ಕೂ ಹೆಚ್ಚಿನ ಪ್ಲೈಟ್ ಮೂಲಕ ಪ್ರವಾಸಿಗರು ಬರುತ್ತಾರೆ. ನಾಲ್ಕು ಸಾವಿರಕ್ಕೂ ಅಧಿಕ ಟ್ಯಾಕ್ಸಿ ಹತ್ತಾರು ಸಾವಿರ ಜನರು ಉದ್ಯೋಗ ಪಡೆಯುತ್ತಾರೆ. 4300 ಕೋಟಿ ಆದಾಯ ವಿದೇಶ ಹಾಗೂ ಹೊರರಾಜ್ಯದ ಪ್ರವಾಸಿಗರು ಬಂದು ನೀಡುತ್ತಾರೆ. 800 ಕ್ಕೂ ಅಧಿಕ ವಿದ್ಯಾವಂತರು ಒಂದೊಂದು ಕ್ಯಾಶನೋದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಆದರೆ ನಮ್ಮಲ್ಲಿ 168 ಕೀಮೀ ಕರಾವಳಿ ತೀರವಿದ್ದರೂ ಈ ಪ್ರಮಾಣದ ಆದಾಯ ಪಡೆಯಲು ವಿಫಲರಾಗಿದ್ದೇವೆ ಎಂದರು. ವಿಧಾನಮಂಡಲದ ಅಧಿವೇಶನದ ಬಳಿಕ ರಾಜ್ಯದ ಪ್ರವಾಸೋದ್ಯಮ ಸಚೀವರು ಹಾಗೂ ಅರಣ್ಯ ಸಚೀವರ ಜೊತೆಗೂಡಿ ಒಂದು ದಿನದ ಕಾರ್ಯಗಾರ ನಡೆಸುದಾಗಿ ಭರವಸೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶವಿದೆ. ನೆರೆಯ ಗೋವಾ ರಾಜ್ಯ ಪ್ರವಾಸೋದ್ಯಮ ನಮ್ಮಲ್ಲಿಯೂ ಅನುಷ್ಟಾನ ಮಾಡಬೇಕಿದೆ. ಸಮುದ್ರತೀರದಲ್ಲಿ ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಹೊಟೇಲ್ ಹಾಗೂ ವಸತಿ ವ್ಯವಸ್ಥೆ ಹಾಗೂ ವಿವಿಧ ಸೌಕರ್ಯ ನೀಡುವ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಒಗ್ಗೂಡಿ ಚಿಂತನೆ ನಡೆಸಿ ಅನುಷ್ಟಾನಗೊಳಿಸೋಣ ಎಂದರು.

ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಹೊಸಾಕುಳಿ ಗ್ರಾ.ಪಂ. ಅಧ್ಯಕ್ಷೆ ನಾಗರಾತ್ನ ನಾಯ್ಕ, ಬಿಜೆಪಿ ಮುಖಂಡರಾದ ವಿನೋದ ಪ್ರಭು, ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಧರ ಹೆಬ್ಬಾರ, ಮಾಜಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ಅರೇಖಾ ಕೌಂಟಿ ಮುಖ್ಯಸ್ಥರಾದ ಎಂ.ಆರ್.ಹೆಗಡೆ ಉಪಸ್ಥಿತರಿದ್ದರು.ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.
Leave a Comment