• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ,ದೇಹದಾನ

May 24, 2017 by Sachin Hegde Leave a Comment

ಕಾರವಾರ:

ಸಾವಿನ ನಂತರವೂ ತಮ್ಮ ಸೇವೆ ಸಲ್ಲಿಕೆಗಾಗಿ ನಿವೃತ್ತ ಅಧಿಕಾರಿಯೊಬ್ಬರು ಪತ್ನಿಯೊಂದಿಗೆ ದೇಹದಾನ ನೊಂದಣಿ ಮಾಡಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮರಣಾ ನಂತರ ದೇಹದಾನ ನಡೆಸುವದಾಗಿ ಅವರ್ಸಾದ ಕಮಲಾಕರ ನಾಯಕ (75) ಹಾಗೂ ಸೌಭಾಗ್ಯ (56) ದಂಪತಿಗಳು ಹೇಳಿದ್ದು, ಜಿಲ್ಲಾ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ತಮ್ಮ ದೇಹವನ್ನು ಒಪ್ಪಿಸುವದಾಗಿ ತಿಳಿಸಿದ್ದಾರೆ. ನಿವೃತ್ತ ಬಂದರು ಉಪ ಸಂರಕ್ಷಣಾಧಿಕಾರಿಯಾಗಿರುವ ಕಮಲಾಕರ ನಾಯಕ ಮೊದಲಿನಿಂದಲೂ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತ ಬಂದವರು. ಸದ್ಯ ಮರಣಾ ನಂತರವೂ ತಮ್ಮಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಮನೊಭಾವ ಹೊಂದಿದ್ದಾರೆ.
ಮರಣದ ನಂತರ ಮಣ್ಣಾಗುತ್ತಿದ್ದ ದೇಹವನ್ನು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂಬ ಆಲೋಚನೆ ಹೊಳೆದಿತ್ತು. ಅದರಂತೆ ಮನದಾಳದ ಮಾತನ್ನು ಪತ್ನಿ ಸೌಭಾಗ್ಯಳ ಬಳಿ ಹೇಳಿದಾಗ ತಾನು ದೇಹದಾನ ಮಾಡುವುದಾಗಿ ಮಡದಿ ತಿಳಿಸಿದ್ದು, ದೇಹದಾನಕ್ಕೆ ಅರ್ಜಿ ಸಲ್ಲಿಸಿದೆವು ಎಂದು ಅವರು ತಿಳಿಸಿದರು. ಇವರು ದೇಹದಾನಕ್ಕೆ ಅರ್ಜಿ ಹಾಕಿದ ವಿಷಯ ಮಕ್ಕಳಿಗೆ ತಿಳಿದಿರಲಿಲ್ಲ.
ಇನ್ನು ಈ ದಂಪತಿ ಮಂಗಳವಾರ ಜಿಲ್ಲಾಸ್ಪತ್ರೆಗೆ ವೀಲ್ ಚೇರ್‍ವೊಂದನ್ನು ಕೊಡುಗೆ ನೀಡಿದರು. ಕಮಲಾಕರರ ಚಿಕ್ಕಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹೊಸದಾದ ವೀಲ್‍ಚೇರ್ ಕೊಳ್ಳಲಾಗಿತ್ತು. ಆದರೆ, ಅದನ್ನು ಅವರಿಗೆ ನೀಡುವದರೊಳಗೆ ಮೃತ ಪಟ್ಟಿದ್ದರು. ಹೀಗಾಗಿ ವಿಲ್ ಚೇರ್‍ನ್ನು ಜಿಲ್ಲಾಸ್ಪತ್ರೆಗೆ ಕೊಡುಗೆ ನೀಡಿದ ಅವರು, ಅನುಕೂಲಕ್ಕೆ ಬಳಸುವಂತೆ ಮನವಿ ಮಾಡಿದರು.

18619937 1450892151597909 1638034716157676396 n

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಅಧಿಕಾರಿ, ಅಧ್ಯಯನಕ್ಕೆ, ಆಲೋಚನೆ, ಉಪ, ಕಾರವಾರ, ಕೊಡುಗೆ, ಚೇರ್‍, ಜಿಲ್ಲಾಸ್ಪತ್ರೆ, ದಾನ, ದೇಹ, ನಿವೃತ್ತ, ನೊಂದಣಿ, ಪತ್ನಿ, ಬಡವರ, ವಿಜ್ಞಾನ, ವಿದ್ಯಾರ್ಥಿ, ವಿಲ್, ವೈದ್ಯಕೀಯ, ಸಂರಕ್ಷಣಾಧಿಕಾರಿ, ಸಾವಿನ, ಸೌಭಾಗ್ಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...