ಕಾರವಾರ:ಧರ್ಮಸ್ಥಳಕ್ಕೆ ತೆರಳಿದ ವ್ಯಕ್ತಿಯೊಬ್ಬ ನಾಪತ್ತೆಯಾದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಹರಿದೇವನಗರದ ನಿವಾಸಿ ಚಂದ್ರಶೇಖರ ಲಮಾಣಿ (36) ಕಾಣೆಯಾದವರು. ಇವರು ಸೆ.16ರಂದು ಧರ್ಮಸ್ಥಳಕ್ಕೆ ತೆರಳುವುದಾಗಿ ತಿಳಿಸಿ, ಮನೆಯಿಂದ ಹೊರಟವರು ವಾಪಸ್ ಬಂದಿಲ್ಲ. ಧರ್ಮಸ್ಥಳಕ್ಕೆ ಮುಟ್ಟಿದ ಬಳಿಕ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಬಳಿಕ ಸಂಪರ್ಕಕ್ಕೆ ದೊರೆಯದೆ, ಮನೆಗೂ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ … [Read more...] about ಧರ್ಮಸ್ಥಳಕ್ಕೆ ತೆರಳಿದ ವ್ಯಕ್ತಿ ನಾಪತ್ತೆ
Karwar News
ಭಾರತೀಯ ಜನತಾ ಪಕ್ಷದ ಸಾರ್ವಜನಿಕ ಅಭಿನಂದನಾ ಸಮಾರಂಭ
ಕಾರವಾರ:ದೇಶದ ಕೋಟಿ ಕೋಟಿ ಜನರ ಕನಸು ಪ್ರಧಾನಿ ಮಂತ್ರಾಲಯದ ಜೊತೆ ಬೆಸೆದುಕೊಂಡಿದ್ದು, ವರ್ಷಕ್ಕೆ 1.96 ಕೋಟಿ ಜನರಿಗೆ ಹೊಸ ಉದ್ಯೋಗ ಸೃಷ್ಠಿಸುವ ಸವಾಲು ಸ್ವೀಕರಿಸಿರುವದಾಗಿ ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಮದ್ಯಾಹ್ನ ನಡೆದ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಪ್ಪತ್ತು ವರ್ಷಗಳಲ್ಲಿ ಭಾರತಲ್ಲಿ … [Read more...] about ಭಾರತೀಯ ಜನತಾ ಪಕ್ಷದ ಸಾರ್ವಜನಿಕ ಅಭಿನಂದನಾ ಸಮಾರಂಭ
ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಕಾರವಾರ: ಅರ್ಚಕರ ಮೇಲೆ ದ್ವೇಷದ ಕಾರಣ ದೇವಸ್ಥಾನ ಆಡಳಿತ ಮಂಡಳಿ ಕೆಲ ಸದಸ್ಯರು ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಅವರ್ಸಾದ ಭೂದೇವಿ ದೇವಸ್ಥಾನ ಆವರಣದಲ್ಲಿ ಸಂಭವಿಸಿದೆ. ಕಳೆದ ಕೆಲವು ದಿನಗಳ ಹಿಂದೆ ತಾಯಿಯ ಪುಣ್ಯತಿಥಿಗಾಗಿ ಹೊನ್ನಾವರದಿಂದ ಅಂಕೋಲಾ ತಾಲೂಕಿನ ಅವರ್ಸಾದ ತವರು ಮನೆಗೆ ಆಗಮಿಸಿದ್ದ ಅನುಸೂಯಾ, ಶಂಕರಿ, ಜಯಲಕ್ಮಿ, ಸುಮಂಗಲಾ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭೂದೇವಿ ದೇವಸ್ಥಾನ ಅರ್ಚಕ … [Read more...] about ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಪಂಚಾಯತ ಆವರಣದಲ್ಲಿದ್ದ ಕ್ಯಾಂಟಿನ್ ಮಳಿಗೆ ತೆರವು
ಕಾರವಾರ:ಪರ ವಿರೋಧದ ಜಂಜಾಟದ ಮದ್ಯೆಯೇ ತಾಲೂಕು ಪಂಚಾಯತ್ ಆವರಣದಲ್ಲಿರುವ ಕ್ಯಾಂಟಿನ್‍ನ್ನು ಬಾಡಿಗೆ ಅವದಿ ಮುಗಿದ ಕಾರಣ ಪಂಚಾಯತ್ ಅಧಿಕಾರಿಗಳು ಪೊಲೀಸರ ಸಹಾಯದಿಂದ ತೆರವು ಮಾಡಿಸಿದರು. 2015ರ ಅ.1ರಿಂದ 2016ರ ಸೆ.31ರವರೆಗೆ ಪ್ರಭಾಕರ ರೇವಣಕರ ಅವರಿಗೆ ಕ್ಯಾಂಟಿನ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಈ ಮಧ್ಯೆ 2016ರ ಜು.14ರಂದು ಪ್ರಭಾಕರ ರೇವಣಕರ ಮೃತಪಟ್ಟಿದ್ದರು. ಹೀಗಾಗಿ 2016ರ ಜು.21ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಾಗ ಟೆಂಡರ್ ಕರೆದು, ಅತೀ … [Read more...] about ಪಂಚಾಯತ ಆವರಣದಲ್ಲಿದ್ದ ಕ್ಯಾಂಟಿನ್ ಮಳಿಗೆ ತೆರವು
ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ;ಪ್ರಯಾಣಿಕರು ಅಪಾಯದಿಂದ ಪಾರು
ಕಾರವಾರ:ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ಅಸ್ನೋಟಿಯಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಬಿಕಾನೇರ್‍ನಿಂದ ತಮಿಳುನಾಡಿನ ಕೊಯಮುತ್ತೂರಿಗೆ ತೆರಳುತ್ತಿದ್ದ ಎಕ್ಸಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯ ಎಸಿ ಪ್ಯಾನೆಲ್‍ನಲ್ಲಿ ಶಾರ್ಟ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣ ವಿಷಯವನ್ನು … [Read more...] about ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ;ಪ್ರಯಾಣಿಕರು ಅಪಾಯದಿಂದ ಪಾರು


