ಕಾರವಾರ:ಶಿಸ್ತಿನ ಸಿಪಾಯಿಯಂತಿದ್ದ ಪಂಡಿತ್ ದೀನ ದಯಾಳರ ಆದರ್ಶವನ್ನು ಎಲ್ಲರೂ ಪಾಲಿಸಬೇಕಿದೆ ಎಂದು ತಾಲೂಕು ಪಂಚಾಯತ ಸದಸ್ಯ ಪುರುಷೋತ್ತಮ ಗೌಡ ಹೇಳಿದರು. ಅವರು ನೆಹರು ಯುವ ಕೇಂದ್ರ, ತಾಲೂಕಾ ಯುವ ಒಕ್ಕೂಟ, ಮಾಚಿದೇವ ಯುವಕ ಸಂಘದ ಆಶ್ರಯದಲ್ಲಿ ಅಮದಳ್ಳಿಯಲ್ಲಿ ನಡೆದ "ಪಂಡಿತ್ ದೀನದಯಾಳ ಜನ್ಮ ದಿನಾಚರಣೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ತಾಳ್ಮೆ ಹಾಗೂ ಶಿಸ್ತನ್ನು ರೂಡಿಸಿಕೊಂಡವರು ಯಶಸ್ಸು ಸಾಧಿಸುತ್ತಾರೆ ಎಂದು … [Read more...] about ಪಂಡಿತ್ ದೀನ ದಯಾಳರ ಆದರ್ಶವನ್ನು ಎಲ್ಲರೂ ಪಾಲಿಸಬೇಕಿದೆ;ಪಂಚಾಯತ ಸದಸ್ಯ ಪುರುಷೋತ್ತಮ ಗೌಡ
Karwar News
ಅಮದಳ್ಳಿಯಲ್ಲಿ ನಡೆದ ಕೆಸರುಗದ್ದೆ ಸ್ಪರ್ಧೆ
ಕಾರವಾರ:ಅಮದಳ್ಳಿಯಲ್ಲಿ ಬ್ರಹ್ಮದೇವ ಯುವಕ ಸಂಘದ ವತಿಯಿಂದ ದುರ್ಗಾದೇವಿ ಉತ್ಸವದ ಅಂಗವಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕೆಸರುಗದ್ದೆ ಓಟ, ಮಕ್ಕಳು ಹಾಗೂ ಮಹಿಳೆಯರಿಗಾಗಿ ಲಿಂಬು ಚಮಚ ಓಟ, ಕೊಡ ಹೊತ್ತುಕೊಂಡು ಓಡುವುದು, ಹಗ್ಗ ಜಗ್ಗಾಟ, ಕಬ್ಬಡ್ಡಿ, ಥ್ರೋ ಬಾಲ್ ಸೇರಿದಂತೆ ನಾನಾ ಬಗೆಯ ಕ್ರೀಡೆಗಳಲ್ಲಿ ಜನ … [Read more...] about ಅಮದಳ್ಳಿಯಲ್ಲಿ ನಡೆದ ಕೆಸರುಗದ್ದೆ ಸ್ಪರ್ಧೆ
ಗಾಂಧಿ ಜಯಂತಿ ಆಚರಣೆ;ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಚಿವ ಆರ್.ವಿ ದೇಶಪಾಂಡೆ
ಕಾರವಾರ:ಪ್ರತಿ ವರ್ಷದಂತೆ ಈ ವರ್ಷವೂ ಶ್ರಮದಾನ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲಾಡಳಿತ ಗಾಂಧಿ ಜಯಂತಿ ಅಚರಿಸುತ್ತಿದ್ದು ಈ ಬಾರಿ ಮಾಜಾಳಿ ಕಡಲತೀರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ. ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಷಯ ತಿಳಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ 2ರಂದು … [Read more...] about ಗಾಂಧಿ ಜಯಂತಿ ಆಚರಣೆ;ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಚಿವ ಆರ್.ವಿ ದೇಶಪಾಂಡೆ
ಚದುರಂಗ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ
ಕಾರವಾರ:ಅಂಕೋಲಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿಯಲ್ಲಿ ನಡೆದ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಸೇಂಟ್ ಜೋಸೆಫ್ಸ್ (ಅನುದಾನಿತ) ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಸುಪ್ರಿತ್ ಪ್ರವೀರ ನಾಯಕ ಹದಿನಾಲ್ಕು ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಅಕ್ಟೋಬರ್ 10 ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಇವರು … [Read more...] about ಚದುರಂಗ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ
ಅಕ್ರಮ ಗೋವಾ ಮದ್ಯ ;ಯುವಕನ ಬಂಧನ
ಕಾರವಾರ:ತಾಲೂಕಿನ ಮೂಡಗೇರಿಯ ಡ್ಯಾಂ ಸಮೀಪ ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ಯುವಕನನ್ನು ಚಿತ್ತಾಕುಲ ಪೊಲೀಸರು ಬಂಧಿಸಿದ್ದಾರೆ. ಹೋಟೆಗಾಳಿ ನಿವಾಸಿ ಕೃಷ್ಣ ಗಜನೀಕರ್ ಬಂಧಿತ ಆರೋಪಿ. ಈತನು ತನ್ನ ಮೂವರು ಸ್ನೇಹಿತ ಜೊತೆಗೆ ಬೈಕ್‍ನಲ್ಲಿ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಚಿತ್ತಾಕುಲ ಪೊಲೀಸರು ದಾಳಿ ನಡೆಸಿ, 28700 ರೂ. ಮೌಲ್ಯದ ಗೋವಾ ಮದ್ಯದ ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸಲಾದ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ. ಕೃಷ್ಣನನ್ನು … [Read more...] about ಅಕ್ರಮ ಗೋವಾ ಮದ್ಯ ;ಯುವಕನ ಬಂಧನ




