ಕಾರವಾರ:ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟೆಂಪೋಗೆ ಟಿಪ್ಪರ್‍ವೊಂದು ಗುದ್ದಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಗಾಯಗೊಂಡ ಘಟನೆ ತಾಲೂಕಿನ ಸದಾಶಿವಗಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಡೆದಿದೆ. ಸದಾಶಿವಗಡದಲ್ಲಿರುವ ಅಮ್ಮ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಟೊಂಪೊಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಗುದ್ದಿದೆ. ಇದರಿಂದ ಟೆಂಪೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮೂವರು ಮಕ್ಕಳು ಹಾಗೂ ಇಬ್ಬರು ಶಿಕ್ಷಕರಿಗೆ ಗಾಯವಾಗಿದೆ. … [Read more...] about ಟೆಂಪೋಗೆ ಟಿಪ್ಪರ್‍ವೊಂದು ಗುದ್ದಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರಿಗೆ ಗಾಯ
Karwar News
ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಕಾರವಾರ:ಶ್ರಾವಣ ಸೋಮವಾರದ ನಿಮಿತ್ತ ಹಣಕೋಣದ ಪ್ರಸಿದ್ದ ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ನಡೆದ ರುಧ್ರಾಭಿಷೇಕ, ಪಂಚಾಮೃತಾಭಿಷೇಕ ಮೊದಲಾದ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಕ್ಷೇತ್ರ ಪುರೋಹಿತರಾದ ಪ್ರಸನ್ನ ಪ್ರಭಾಕರ ಜೋಶಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಊರಿಗೆ ಯಾವದೇ ರೀತಿಯ ಸಂಕಷ್ಟ ಬರಬಾರದು ಎಂದು ಭಕ್ತರು ಪ್ರಾರ್ಥಿಸಿದರು. 24ಗಂಟೆಗಳ ಕಾಲ ನಿರಂತರ ಭಜನೆ ನಡೆಸಲು … [Read more...] about ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
330 ಪ್ರಕರಣಗಳು ಇತ್ಯರ್ಥ
ಕಾರವಾರ:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸುವನಿಟ್ಟಿನಲ್ಲಿ ಶನಿವಾರ ಆಯೊಜಿಸಿದ್ದ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 330 ಪ್ರಕರಣಗಳು ಇತ್ಯರ್ಥಗೊಂಡಿವೆ. ಕೆಲವು ಸಣ್ಣಪುಟ್ಟ ವ್ಯಾಜ್ಯಗಳು, ವೈಯಕ್ತಿಕ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳನ್ನು ರಾಜಿ ಸಂದಾನಗಳ ಮೂಲಕ ಇತ್ಯರ್ಥಪಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಲೋಕ ಅದಾಲತ್ ಮುಂದಾಗಿದೆ. … [Read more...] about 330 ಪ್ರಕರಣಗಳು ಇತ್ಯರ್ಥ
ಹೆದ್ದಾರಿ ಮೇಲೆ ಉರಳಿ ಬಿದ್ದ ಕಲ್ಬಂಡೆ
ಕಾರವಾರ:ನಗರದ ಲಂಡನ್ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡದಿಂದ ಬಂಡೆಗಲ್ಲೊಂದು ಉರುಳಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದೇ ಇದ್ದ ಕಾರಣ ಅನಾಹುತವೊಂದು ತಪ್ಪಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಈ ಗುಡ್ಡದೊಳಗಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಕಾಮಗಾರಿಯು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುವ ಸ್ಫೋಟಗಳಿಂದ ಗುಡ್ಡವು ಈ ಹಿಂದೆ ಅಲುಗಾಡಿರುವುದು ತಿಳಿದು ಬಂದಿತ್ತು. ಸ್ಫೋಟದಿಂದಾಗಿ ಇಂತಹ ಬಂಡೆಕಲ್ಲುಗಳು ತಮ್ಮ … [Read more...] about ಹೆದ್ದಾರಿ ಮೇಲೆ ಉರಳಿ ಬಿದ್ದ ಕಲ್ಬಂಡೆ
ರಿಕ್ರಿಯೇಷನ್ ಕ್ಲಬ್ ವತಿಯಿಂದ ಜರುಗಿದ ಆಮ್ಗೇಲೆ ಫೆಸ್ತ್ ಕಾರ್ಯಕ್ರಮ
ಕಾರವಾರ:ಭಾಷಾ ಸಾಮರಸ್ಯದ ಮೂಲಕ ಒಗ್ಗಟ್ಟು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಕಾರವಾರ ಆಕಾಶವಾಣಿ ನಿಲಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಹೇಳಿದರು. ಆಕಾಶವಾಣಿ ಕೇಂದ್ರದಲ್ಲಿ ಭಾನುವಾರ ರಿಕ್ರಿಯೇಷನ್ ಕ್ಲಬ್ ವತಿಯಿಂದ ಜರುಗಿದ ಆಮ್ಗೇಲೆ ಫೆಸ್ತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಲಯದ ಸಿಬ್ಬಂದಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸುವುದರ ಮೂಲಕ ನಮ್ಮಲ್ಲಿನ ಭಿನ್ನಾಯಭಿಪ್ರಾಯ, ದು:ಖ, ನೋವು ಮರೆಯಲು ಉತ್ಸವಗಳ ಅಗತ್ಯವಿದೆ ಎಂದರು. ನಮ್ಮ … [Read more...] about ರಿಕ್ರಿಯೇಷನ್ ಕ್ಲಬ್ ವತಿಯಿಂದ ಜರುಗಿದ ಆಮ್ಗೇಲೆ ಫೆಸ್ತ್ ಕಾರ್ಯಕ್ರಮ


