ಕಾರವಾರ:ನಗರದ ಬಾಲ ಮಂದಿರದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಶಿಕ್ಷಕರ ನೇಮಕಾತಿಗೆ ಭಾನುವಾರ ನೇರ ಸಂದರ್ಶನ ನಡೆದಿದ್ದು, 40ಕ್ಕೂ ಅಧಿಕ ಸಂಸ್ಥೆಗಳು ಹಾಗೂ 500ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಸಂಘಟಕರ ಲೆಕ್ಕದ ಪ್ರಕಾರ 150 ಅಭ್ಯರ್ಥಿಗಳು ಆಯ್ಕೆಯಾದರು.* ಶಿಕ್ಷಕರ ಕೊರತೆ ನೀಗಿಸದ ಮೇಳ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಪ್ಪಿಸಲು ಈ ಮೇಳವನ್ನು ಆಯೋಜಿಸಲಾಗಿತ್ತು. ಅನುಭವಿ ಶಿಕ್ಷಕರು ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನಿರುದ್ಯೋಗಿಗಳ … [Read more...] about ಬಾಲ ಮಂದಿರದಲ್ಲಿ ನಡೆದ ಶಿಕ್ಷಕರ ನೇಮಕಾತಿ
ಧಾರವಾಡ
ಬಿ.ಎಡ್. ಪರೀಕ್ಷೆ:ಜ್ಞಾನೇಶ್ವರಿ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಭಟ್ಕಳ:ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಬಿ.ಎಡ್. ದ್ವಿತೀಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‍ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯವು ಶೇ.100% ಫಲಿತಾಂಶ ಪಡೆದಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಪೂಜಾ ನಾಯ್ಕ ಶೇ.85.17% ಅಂಕ ಗಳಿಸಿ ಪ್ರಥಮ ಸ್ಥಾನ, ಸ್ವಾತಿ ಮೇಸ್ತಾ, ಮೇಹಾ ಜೋಸೆಫ್ ಮತ್ತು ಲತಾ ಆರ್. ನಾಯ್ಕ ಶೇ.84.5% ಅಂಕ … [Read more...] about ಬಿ.ಎಡ್. ಪರೀಕ್ಷೆ:ಜ್ಞಾನೇಶ್ವರಿ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಮೇ: 16 ರಿಂದ 19ರ ವರೆಗೆ ಆನೆ ಗಣತಿ
ದಾಂಡೇಲಿ :ಮೇ:16 ರಿಂದ ಮೇ: 19 ರವರೆಗೆ ದೇಶಾದ್ಯಂತ ಆನೆಗಣತಿ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೆನರಾ, ಧಾರವಾಡ ಮತ್ತು ಬೆಳಗಾವಿ ವೃತ್ತದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದ ನಾಗಝರಿ ಹಾಲ್‍ನಲ್ಲಿ ತರಬೇತಿ ನೀಡಲಾಗಿದೆ.ಆನೆ ಗಣತಿ ಕಾರ್ಯಕ್ರಮದ ವಿವರ : ಮೇ:16 ರಂದು ಮೊದಲನೇ ದಿನದಂದು ಆನೆ ಗಣತಿಯ ಸರ್ವೆ ಮಾಡುವುದರ ಬಗ್ಗೆ ಪ್ಲಾನ್, … [Read more...] about ಮೇ: 16 ರಿಂದ 19ರ ವರೆಗೆ ಆನೆ ಗಣತಿ
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇ. 67.87 ರಷ್ಟು ಫಲಿತಾಂಶ ಬಂದಿದ. ಕಳೆದ ಬಾರಿ ಶೇ.75.11 ರಷ್ಟು ಫಲಿತಾಂಶ ಬಂದಿದ್ದು ಪಿಯುಸಿ ರೀತಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲೂ ಫಲಿತಾಂಶದಲ್ಲಿ ಇಳಿಕೆಯಾಗಿದೆ.ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಟ್ ಎಸ್.ಎಸ್.ಎಲ್.ಸಿ.ಫಲಿತಾಂಶ ಪ್ರಕಟಿಸಿದರು. 856286 ವಿದ್ಯಾರ್ಥಿಗಳಲ್ಲಿ 581134 … [Read more...] about ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ
ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಹೊನ್ನಾವರ, ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಕುರಿತು ಹೊನ್ನಾವರ ಪಟ್ಟಣಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಪ.ಪಂ.ನ ಹಿರಿಯ ಸದಸ್ಯ ನೀಲಕಂಠ ನಾಯ್ಕ ಹೆಚ್ಚಿನ ಮಾಹಿತಿ ನೀಡಿ, ಹೊನ್ನಾವರ ಪ.ಪಂ.ನ ಸರ್ವಸದಸ್ಯರ ಸಭೆಯ ನಿರ್ಣಯದಂತೆ ಅಧ್ಯಕ್ಷರು ಮತ್ತು ತಾವು ಹೈಕೋರ್ಟ್ ಮೊರೆ ಹೋಗಿರುವದಾಗಿ … [Read more...] about ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ