ಹಳಿಯಾಳ:ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಚೆಗೆ ನೀಡುತ್ತಿರುವ ಹೇಳಿಕೆಗಳು ಹಾಗೂ ಅವರ ಒಟ್ಟಾರೆ ವರ್ತನೆ ಗಮನಿಸಿದರೆ, ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ ದೊರಕುತ್ತಿವೆ, ಎಂದು ಬಿ.ಜೆ.ಪಿ. ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ. ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರ ಸಂಪೂರ್ಣವಾಗಿ ದೀವಾಳಿಯಾಗಿದ್ದು, ಸರ್ಕಾರ ಸಾಲದ ಹೊರೆಯಲ್ಲಿ ಮುಳುಗಿದೆ ಎಂದು ಗಂಭೀರವಾಗಿ ಅಪಾದಿಸಿದರು. ಮುಖ್ಯಮಂತ್ರಿ … [Read more...] about ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ,ಶಾಸಕ ಸುನೀಲ್ ಹೆಗಡೆ
ಜಿಲ್ಲಾ
ಡಾ. ಎಂ.ಪಿ.ಕರ್ಕಿ ಅವರ ಮನೆಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಭೇಟಿ
ಹೊನ್ನಾವರ:ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಬಿಜೆಪಿ ವಿಸ್ತಾರಕರಾಗಿ ಪಟ್ಟಣದ ಪಕ್ಷದ ಪ್ರಮುಖ ಮುಖಂಡರ ಮನೆಮನೆಗೆ ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸಿದರು. ಮಾಜಿ ಸಚಿವ ಆರ್.ಎನ್.ನಾಯ್ಕ, ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಹಾಗೂ ಇತರ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪಕ್ಷದ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಹಿರಿಯ ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ತಾಲೂಕು … [Read more...] about ಡಾ. ಎಂ.ಪಿ.ಕರ್ಕಿ ಅವರ ಮನೆಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಭೇಟಿ
ತಮಗಿದೋ ನಮ್ಮ ಗೌರವ ಕಾರ್ಯಕ್ರಮ
ಕಾರವಾರ:ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜುಲೈ 20 ರಂದು ಸಾಯಂಕಾಲ 5 ಗಂಟೆಗೆ ಜಿಲ್ಲಾ ರಂಗಮಂದಿರ ಕಾರವಾರದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ರವರ 126 ಜನ್ಮ ವರ್ಷಾಚರಣೆ ಅಂಗವಾಗಿ'' ತಮಗಿದೋ ನಮ್ಮ ಗೌರವ'' ಕಾರ್ಯಕ್ರಮ ಆಚರಿಸಲಾಗುವುದು. ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ … [Read more...] about ತಮಗಿದೋ ನಮ್ಮ ಗೌರವ ಕಾರ್ಯಕ್ರಮ
ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಲಿದೆ ;ಎಲ್.ಚಂದ್ರಶೇಖರ ನಾಯಕ
ಕಾರವಾರ:ಸೆಪ್ಟೆಂಬರ್ ಅಂತ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ 1,23,061 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿದ್ದು, ಈಗಾಗಲೇ 1,01,981 ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಪ್ರಸಕ್ತ 2017-18ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 7227 ಶೌಚಾಲಯಗಳನ್ನು … [Read more...] about ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಲಿದೆ ;ಎಲ್.ಚಂದ್ರಶೇಖರ ನಾಯಕ
ಮಾಸಾಶನ ವಿತರಣೆ
ಕಾರವಾರ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ 12 ವರ್ಷಗಳಿಂದ ಬಡವರಿಗೆ, ನಿರ್ಗತಿಕರಿಗೆ ಮಾಸಾಶನ ನೀಡುತಿದ್ದು, ಈ ಬಾರಿ ಜಿಲ್ಲೆಯ 269 ಜನರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.ಗುರು ಭವನದಲ್ಲಿ ಮಂಗಳವಾರ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾಮಟ್ಟದ ಮಾಸಾಶನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಡ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಯೋಜನೆಯು ಆಯಾ ಭಾಗದಲ್ಲಿ ದೀರ್ಘಕಾಲದ … [Read more...] about ಮಾಸಾಶನ ವಿತರಣೆ